ವಿಡಿಯೋ ಸಾಂಗ್‌ | ‘ಫನ್ನೇ ಖಾನ್’ ಹಿಂದಿ ಚಿತ್ರದಲ್ಲಿ ‘ಬೇಬಿ ಸಿಂಗ್‌’ ಐಶ್ವರ್ಯಾ‌ 

ಎರಡು ವರ್ಷಗಳ ನಂತರ ‘ಫನ್ನೇ ಖಾನ್‌’ ಚಿತ್ರದೊಂದಿಗೆ ಐಶ್ವರ್ಯಾ ತೆರೆಗೆ ಮರಳಿದ್ದಾರೆ. ಚಿತ್ರದಲ್ಲಿನ ಅವರ ‘ಮೊಹಬ್ಬತ್‌’ ವಿಡಿಯೋ ಹಾಡು ಇಂದು ಬಿಡುಗಡೆಯಾಗಿದ್ದು, ಮೋಹಕ ನೃತ್ಯದೊಂದಿಗೆ ಐಶ್ವರ್ಯಾ ಗಮನ ಸೆಳೆದಿದ್ದಾರೆ. ಆಗಸ್ಟ್‌ 3ರಂದು ಸಿನಿಮಾ ತೆರೆಕಾಣಲಿದೆ

‘ಫನ್ನೇ ಖಾನ್‌’ ಹಿಂದಿ ಚಿತ್ರದ ಮೊದಲ ವಿಡಿಯೋ ಹಾಡು ‘ಮೊಹಬ್ಬತ್‌’ ಬಿಡುಗಡೆಯಾಗಿದೆ. ಸಿಂಗಿಂಗ್ ಸೆನ್ಸೇಷನ್‌ ಬೇಬಿ ಸಿಂಗ್ ಪಾತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್‌ ಕಾಣಿಸಿಕೊಂಡಿದ್ದು, ಈ ಹಾಡು ಮೋಹಕವಾಗಿದೆ. ಎರಡು ವರ್ಷಗಳ ನಂತರ ತೆರೆಗೆ ಮರಳಿರುವ ಐಶ್ವರ್ಯಾಗೆ ಈ ಸಿನಿಮಾ ಒಂದೊಳ್ಳೆ ವೇದಿಕೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಸುನಿಧಿ ಚೌವ್ಹಾಣ್‌ ಹಾಡಿರುವ ಹಾಡಿಗೆ ಫ್ರಾಂಕ್‌ ಗ್ಯಾಟ್ಸನ್‌ ನೃತ್ಯ ಸಂಯೋಜಿಸಿದ್ದಾರೆ. ಮನೀಷ್‌ ಮಲ್ಹೋತ್ರಾ ವಸ್ತ್ರವಿನ್ಯಾಸದಲ್ಲಿ 44ರ ಐಶ್ವರ್ಯಾ ಹದಿನೈದು ವರ್ಷ ಚಿಕ್ಕವರಂತೆ ಕಾಣಿಸುತ್ತಾರೆ. “ಚಿತ್ರದಲ್ಲಿ ಐಶ್ವರ್ಯಾ ಜನಪ್ರಿಯ ಗಾಯಕಿಯ ಪಾತ್ರದಲ್ಲಿದ್ದಾರೆ. ಭಾರತದಾದ್ಯಂತ ಪ್ರವಾಸದಲ್ಲಿರುವ ಗಾಯಕಿ ಲೈವ್‌ ಕನ್ಸರ್ಟ್‌ಗಳಲ್ಲಿ ಪಾಲ್ಗೊಳ್ಳುವ ಸೀಕ್ವೆನ್ಸ್‌ನಂತೆ ಹಾಡನ್ನು ಮಾಡಿದ್ದೇವೆ” ಎನ್ನುತ್ತಾರೆ ಚಿತ್ರದ ನಿರ್ದೇಶಕ ಅತುಲ್‌ ಮಂಜ್ರೇಕರ್‌.

ಇದನ್ನೂ ಓದಿ : ಟ್ರೈಲರ್‌ | ನೆಟ್‌ಫ್ಲಿಕ್ಸ್‌ನಲ್ಲಿ ಮೊದಲ ಭಾರತೀಯ ಹಾರರ್‌ ಸರಣಿ ‘ಘೋಲ್‌’

ಆಸ್ಕರ್‌ಗೆ ನಾಮನಿರ್ದೇಶನಗೊಂಡಿದ್ದ ಬೆಲ್ಜಿಯಂ ಸಿನಮಾ ‘ಎವ್ರಿಬಡೀಸ್‌ ಫೇಮಸ್‌’ ಸಿನಿಮಾದ ರಿಮೇಕ್‌ ‘ಫನ್ನೇ ಖಾನ್‌’. ಗಾಯಕಿಯಾಗಿ ಗುರುತಿಸಿಕೊಳ್ಳುವ ತನ್ನ ಪುತ್ರಿಯ ಕನಸನ್ನು ಈಡೇರಿಸಲು ಅಪರಾಧ ಕಾರ್ಯಕ್ಕೂ ಸಜ್ಜಾಗುವ ತಂದೆಯ ಕಥಾನಕ. ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿದ್ದು, ಐಶ್ವರ್ಯಾ ರೈ, ರಾಜ್‌ಕುಮಾರ್ ರಾವ್‌ ಮತ್ತು ದಿವ್ಯಾ ದತ್ತಾ ಇತರೆ ಪಾತ್ರಗಳಲ್ಲಿ ನಟಿಸಿದ್ದಾರೆ. ಮೊನ್ನೆಯಷ್ಟೇ ಬಿಡುಗಡೆಯಾಗಿದ್ದ ಟ್ರೈಲರ್‌ನಲ್ಲಿ ಅನಿಲ್‌ಕಪೂರ್ ಪಾತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. “ಈ ಚಿತ್ರದಲ್ಲಿ ತಂದೆ ತನ್ನ ಮಗಳ ಸಾಧನೆಯ ಮೂಲಕ ತಾನು ಕಂಡ ಕನಸನ್ನು ಪೂರ್ಣಗೊಳಿಸಿಕೊಳ್ಳುತ್ತಾನೆ. ಬದುಕಿನಲ್ಲಿ ಸಾಧನೆ ಮಾಡುವ ಕನಸು ಕಂಡು ಈಡೇರಿಸಿಕೊಳ್ಳಲಾಗದೆ ಚಡಪಡಿಸುವ ಪ್ರತಿಯೊಬ್ಬರೂ ನನ್ನ ಪಾತ್ರದಲ್ಲಿ ತಮ್ಮನ್ನು ತಾವು ಕಂಡುಕೊಳ್ಳಬಹುದು” ಎಂದು ತಮ್ಮ ಪಾತ್ರ, ಸಿನಿಮಾದ ಬಗ್ಗೆ ಹೇಳಿಕೊಳ್ಳುತಾರೆ ಅನಿಲ್‌ ಕಪೂರ್‌. ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ಮಾಣದ ಸಿನಿಮಾ ಆಗಸ್ಟ್‌ 3ರಂದು ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More