ಟ್ರೈಲರ್‌ | ನೆಟ್‌ಫ್ಲಿಕ್ಸ್‌ನಲ್ಲಿ ಮೊದಲ ಭಾರತೀಯ ಹಾರರ್‌ ಸರಣಿ ‘ಘೋಲ್‌’

’ಸೇಕ್ರೆಡ್‌ ಗೇಮ್ಸ್‌’ ನಂತರ ನೆಟ್‌ಫ್ಲಿಕ್ಸ್‌ನಲ್ಲಿ ಮತ್ತೊಂದು ಭಾರತದ ಸರಣಿ ‘ಘೋಲ್‌’ ಮೂಡಿಬರಲಿದೆ. ಪ್ಯಾಟ್ರಿಕ್‌ ಗ್ರಹಾಂ ನಿರ್ದೇಶನದ ಸರಣಿಯ ಪ್ರಮುಖ ಪಾತ್ರಗಳಲ್ಲಿ ರಾಧಿಕಾ ಆಪ್ಟೆ, ಮಾನವ್ ಕೌಲ್‌ ನಟಿಸಿದ್ದಾರೆ. ಆಗಸ್ಟ್‌ 24ರಂದು ಪ್ರಸಾರವಾಗಲಿರುವ ಸರಣಿಯ ಟ್ರೈಲರ್ ಬಿಡುಗಡೆಯಾಗಿದೆ

ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್‌ನಲ್ಲಿ ‘ಘೋಲ್‌’ ಹಾರರ್‌ ಸರಣಿ ಮೂಡಿಬರಲಿದೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿರುವ ಭಾರತದ ಮೊದಲ ಹಾರರ್‌ ಸರಣಿ ಎನ್ನುವುದು ವಿಶೇಷ. ‘ಲಸ್ಟ್‌ ಸ್ಟೋರೀಸ್‌’ ಮತ್ತು ‘ಸೇಕ್ರೆಡ್‌ ಗೇಮ್ಸ್‌’ ಸರಣಿಗಳಲ್ಲಿ ನಟಿಸಿದ್ದ ಬಾಲಿವುಡ್‌ ನಟಿ ರಾಧಿಕಾ ಆಪ್ಟೆ ಮತ್ತು ನಟ ಮಾನವ್‌ ಕೌಲ್‌ ‘ಘೋಲ್‌’ನ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೀಗ ಬಿಡುಗಡೆಯಾಗಿರುವ ‘ಘೋಲ್‌’ ಸರಣಿಯ ಒಂದು ನಿಮಿಷದ ಟ್ರೈಲರ್ ಕುತೂಹಲಕಾರಿಯಾಗಿದೆ. ಅರೇಬಿಕ್‌ ಜನಪದ ಕತೆಯೊಂದು ಸರಣಿಗೆ ಸ್ಫೂರ್ತಿ. ಮಿಲಿಟರಿ ಸೆಂಟರ್‌ನಲ್ಲಿ ಅಲ್ಲಿನ ಅಧಿಕಾರಿಗಳು ಶಂಕಿತ ಉಗ್ರಗಾಮಿಯೊಬ್ಬನನ್ನು ವಿಚಾರಣೆಗೊಳಪಡಿಸುವ ಹಿನ್ನೆಲೆಯಲ್ಲಿ ಕಥಾಹಂದರ ಹೆಣೆಯಲಾಗಿದೆ. ಟ್ರೈಲರ್‌ನಲ್ಲಿ ನಟಿ ರಾಧಿಕಾ ಆಪ್ಟೆ ವಿಚಾರಣಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ತನ್ನ ತಂದೆ ಸರ್ಕಾರದ ವಿರುದ್ಧವಾಗಿ ಕೆಲಸ ಮಾಡುತ್ತಿರುವುದು ಆಕೆಯ ಗಮನಕ್ಕೆ ಬರುತ್ತದೆ. ಆತನ ಸರ್ಕಾರ ವಿರೋಧಿ ನೀತಿಯನ್ನು ಬಹಿರಂಗಪಡಿಸುವ ಹಾದಿಯಲ್ಲಿ ಕತೆ ಹೊಸ ತಿರುವು ಪಡೆದುಕೊಳ್ಳುತ್ತದೆ. ‘ನೀನು ಜಗತ್ತಿನ ಭೂತ-ಪ್ರೇತಗಳನ್ನು ಎದುರಿಸಬಹುದು ಆದರೆ ಭೂತ-ಪ್ರೇತವಲ್ಲದವರ ಕತೆಯೇನು?’ ಎನ್ನುವುದು ಸರಣಿಯ ಟ್ಯಾಗ್‌ಲೈನ್‌. ಫ್ಯಾಂಟಮ್ ಫಿಲ್ಮ್ಸ್‌ ನಿರ್ಮಾಣದ ಸರಣಿಯನ್ನು ಪ್ಯಾಟ್ರಿಕ್‌ ಗ್ರಹಾಂ ನಿರ್ದೇಶಿಸಿದ್ದಾರೆ. ಒಂದು ಗಂಟೆ ಅವಧಿಯ ಮೂರು ಎಪಿಸೋಡ್‌ಗಳ ಸರಣಿ ಆಗಸ್ಟ್‌ 24ರಂದು ಮೂಡಿಬರಲಿದೆ.

ಇದನ್ನೂ ಓದಿ : ಫಂಕಿ‌ ಹೇರ್‌ಕಟ್ ವಿಡಿಯೋ ಶೇರ್‌ ಮಾಡಿ ‘ಕ್ಯಾನ್ಸರ್‌ ಗೆಲ್ಲುತ್ತೇನೆ’ ಎಂದ ಸೋನಾಲಿ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More