ವಿಡಿಯೋ | ‘ಚೋರಿ ಚೋರಿ’ ಹಿಂದಿ ಸಿನಿಮಾದಲ್ಲಿ ನರ್ಗಿಸ್ ಜೊತೆ ನರಸಿಂಹರಾಜು

ಕನ್ನಡದ ಮೇರು ಹಾಸ್ಯನಟ ನರಸಿಂಹರಾಜು ಅಗಲಿದ ದಿನವಿಂದು (ಜು 11). ಕನ್ನಡಿಗರ ಮನದಲ್ಲಿ ಚಿರಸ್ಮರಣೀಯರಾಗಿ ಉಳಿದಿರುವ ನರಸಿಂಹರಾಜು ಎರಡು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ ಎನ್ನುವ ಸಂಗತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ‘ಚೋರಿ ಚೋರಿ’ ಹಿಂದಿ ಚಿತ್ರದ ವಿಡಿಯೋ ತುಣುಕು ಇಲ್ಲಿದೆ

ಹಾಸ್ಯತಾರೆ ನರಸಿಂಹರಾಜು ಎರಡು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ‘ಚೋರಿ ಚೋರಿ’ (1956) ಮತ್ತು ‘ಮಿಸ್ ಮೇರಿ’ (1957) ಚಿತ್ರಗಳ ಪುಟ್ಟ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ. ರಾಜ್‌ಕಪೂರ್ ಮತ್ತು ನರ್ಗಿಸ್ ಜೋಡಿಯ ಸೂಪರ್‌ಹಿಟ್‌ ‘ಚೋರಿ ಚೋರಿ’ ಹಿಂದಿ ಚಿತ್ರದ ಹಾಸ್ಯ ಸನ್ನಿವೇಶದಲ್ಲಿ ನರಸಿಂಹರಾಜು ಅವರಿಗೆ ಹೋಟೆಲ್ ಮಾಣಿಯ ಪಾತ್ರವಿದೆ. ಚೆನ್ನೈನಲ್ಲಿ ನಡೆದ ಚಿತ್ರೀಕರಣದಲ್ಲಿ ಹೋಟೆಲ್ ಮಾಣಿಯಾಗಿ ನರ್ಗಿಸ್‌ ಜೊತೆ ಮುಖಾಮುಖಿಯಾಗುವ ಸನ್ನಿವೇಶವದು. ಪೊಲೀಸರ ಕಣ್ತಪ್ಪಿಸಿ ಹೋಟೆಲ್‌ಗೆ ಬರುವ ನರ್ಗಿಸ್‌, ಅಲ್ಲಿ ಮಾಣಿ ನರಸಿಂಹರಾಜು ಅವರೊಂದಿಗಿನ ಮಾತುಕತೆ, ಭಾಷೆಯ ತೊಡಕಿನಿಂದಾಗಿ ಸೃಷ್ಟಿಯಾಗುವ ಹಾಸ್ಯ ಮಜವಾಗಿದೆ.

ಆಗಿನ್ನೂ ನರಸಿಂಹರಾಜು ಅವರು ಸಿನಿಮಾರಂಗಕ್ಕೆ ಬಂದ ಹೊಸತು. ಈ ಸನ್ನಿವೇಶದಲ್ಲಿ ಮಾತು ಕಡಿಮೆ. ನರಸಿಂಹರಾಜು ತಮ್ಮ ವಿಶಿಷ್ಟ ಬಾಡಿ ಲಾಂಗ್ವೇಜ್‌ನಿಂದಲೇ ಗಮನ ಸೆಳೆಯುತ್ತಾರೆ. ‘ಚೋರಿ ಚೋರಿ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ರಾಜ್‌ಕಪೂರ್‌, ‘ನರಸಿಂಹರಾಜು ಜೀ, ಆಪ್ ಚೆಲೋ ಹಮಾರೆ ಸಾಥ್... ಹಿಂದಿ ಸಿನ್ಮಾಮೆ ಆಪ್ ಬಡೇ ಸೇ ಬಡೇ ಸ್ಟಾರ್ ಬನ್‌ಜಾವೋಗೆ’ ಎಂದು ಇವರನ್ನು ಮುಂಬಯಿಗೆ ಆಹ್ವಾನಿಸಿದ್ದರಂತೆ. ಆಗ ನರಸಿಂಹರಾಜು, ‘ನಾನು ಕನ್ನಡ ಚಿತ್ರರಂಗದಲ್ಲೇ ಖುಷಿಯಾಗಿದ್ದೇನೆ. ತಮ್ಮ ಆಹ್ವಾನಕ್ಕೆ ಧನ್ಯವಾದ’ ಎಂದು ಹೇಳಿದ್ದರಂತೆ. ಈ ವಿಷಯವನ್ನು ನರಸಿಂಹರಾಜು ಅವರ ಪತ್ನಿ ಶಾರದಮ್ಮ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ : ಶೀತಲ್ ಶೆಟ್ಟಿ ಮನದ ಮಾತು | ಬದುಕು ಹರಿವ ನದಿಯಂತೆಯೇ ಸಾಗಿದೆ

ನರಸಿಂಹರಾಜು ಅಭಿನಯದ ಸಿನಿಮಾ ಹಾಡು, ಹಾಸ್ಯದ ತುಣುಕುಗಳ ವಿಡಿಯೋಗಳು ಇಲ್ಲಿವೆ

‘ರತ್ನಮಂಜರಿ’ ಚಿತ್ರದ ‘ಯಾರು ಯಾರು ನೀ ಯಾರು’ ಹಾಡಿನಲ್ಲಿ ನರಸಿಂಹರಾಜು, ಎಂ ಎನ್ ಲಕ್ಷ್ಮೀದೇವಿ

‘ಕಿತ್ತೂರು ರಾಣಿ ಚೆನ್ನಮ್ಮ’ ಚಿತ್ರದಲ್ಲಿ ಬಾಲಣ್ಣ-ನರಸಿಂಹರಾಜು ಹಾಸ್ಯ

‘ಶ್ರೀಕೃಷ್ಣದೇವರಾಯ’ ಚಿತ್ರದ ಒಂದು ಹಾಸ್ಯದೃಶ್ಯ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More