ಟೀಸರ್‌ | ವಿಜಯ್ ಸೇತುಪತಿ, ತ್ರಿಷಾ ಅಭಿನಯದ ‘96’ ಎಮೋಷನಲ್‌ ವಿಡಿಯೋ ತುಣುಕು

ವಿಜಯ್‌ ಸೇತುಪತಿ ಮತ್ತು ತ್ರಿಷಾ ಅಭಿನಯದ ‘96’ ತಮಿಳು ಸಿನಿಮಾದ ಟೀಸರ್‌ ತನ್ನ ಸರಳತೆ ಮತ್ತು ಕಾವ್ಯಾತ್ಮಕ ಶೈಲಿಯಿಂದಾಗಿ ಇಷ್ಟವಾಗುತ್ತದೆ. ಪ್ರೇಮ್‌ಕುಮಾರ್‌ ನಿರ್ದೇಶನದ ಚಿತ್ರದ ಬಿಡುಗಡೆ ದಿನಾಂಕವಿನ್ನೂ ನಿಗದಿಯಾಗಿಲ್ಲ. ಚಿತ್ರಕ್ಕೆ ಗೋವಿಂದ್ ಮೆನನ್‌ ಸಂಗೀತ ಸಂಯೋಜಿಸಿದ್ದಾರೆ

ಕೆಲವು ಸಿನಿಮಾ ಟೀಸರ್‌ಗಳು ಪದೇಪದೇ ನೋಡಬೇಕಿನಿಸುತ್ತವೆ. ಕತೆಯನ್ನು ಬಿಟ್ಟುಕೊಡದೆ ಹೇಳಬೇಕಾದ್ದನ್ನು ಸೂಚ್ಯವಾಗಿ ಹೇಳುವ ಟೀಸರ್‌ಗಳನ್ನು ಸಿನಿಪ್ರಿಯರು ಇಷ್ಟಪಡುತ್ತಾರೆ. ‘96’ ತಮಿಳು ಸಿನಿಮಾದ ಟೀಸರ್‌ ಅಂಥದ್ದೊಂದು ಪೀಲ್‌ ನೀಡುತ್ತದೆ. ವಿಜಯ್‌ ಸೇತುಪತಿ ಮತ್ತು ತ್ರಿಷಾ ಎರಡು ಪಾತ್ರಗಳಿರುವ ಟೀಸರ್‌ ಕಾವ್ಯಾತ್ಮಕವಾಗಿದೆ. ಸಂಭಾಷಣೆ ಇಲ್ಲದ, ಆಕರ್ಷಕ ಹಿನ್ನೆಲೆ ಸಂಗೀತದೊಂದಿಗಿನ ವಿಜಯ್‌ ಸೇತುಪತಿ ಮತ್ತು ತ್ರಿಷಾ ಮಧ್ಯೆಯ ಪ್ರೀತಿಯ ಭಾವನೆಗಳು ಆಪ್ತವೆನಿಸುತ್ತವೆ. ವಿಜಯ್ ಬದುಕಿನಲ್ಲಿ ಬದಲಾವಣೆ ತರುವ ತ್ರಿಷಾ, ಆ ಪಾತ್ರದ ಮೇಕ್‌ಓವರ್‌ಗೂ ಕಾರಣವಾಗುತ್ತಾರೆ. ಇದು ಪ್ರೀತಿಯೇ? ಎಂದುಕೊಳ್ಳುವ ವೇಳೆಗೆ ಕತೆಯಲ್ಲೊಂದು ತಿರುವು ಕಾಣಿಸುತ್ತದೆ. ಕುತೂಹಲಕಾರಿಯಾಗಿರುವ ಟ್ರೈಲರ್‌ ಸಿನಿಮಾದ ಬಗ್ಗೆ ನಿರೀಕ್ಷೆ ಹುಟ್ಟುಹಾಕುತ್ತದೆ.

ಇದನ್ನೂ ಓದಿ : ಹತ್ತು ವರ್ಷದ ನಂತರವೂ ‘ಸುಬ್ರಹ್ಮಣ್ಯಪುರಂ’ ಎಲ್ಲರನ್ನೂ ಸೆಳೆಯುತ್ತಿರುವುದೇಕೆ?

ವರ್ಸಟೈಲ್ ನಟ ಎಂದೇ ಕರೆಸಿಕೊಳ್ಳುವ ವಿಜಯ್‌ ಸೇತುಪತಿ ಇಲ್ಲಿ ಮೊದಲ ಬಾರಿಗೆ ತ್ರಿಷಾ ಜೊತೆ ನಟಿಸುತ್ತಿದ್ದಾರೆ. ವಿಜಯ್‌ಗೆ ಭಿನ್ನ ಲುಕ್‌ಗಳಿದ್ದು, ತ್ರಿಷಾ ಸರಳವಾಗಿ ಕಾಣಿಸಿಕೊಂಡಿದ್ದಾರೆ. ಸರಳತೆಯಲ್ಲೇ ಅವರ ಪ್ರೀತಿಯ ನೋಟ, ಇಬ್ಬರ ಕೆಮಿಸ್ಟ್ರಿ ಮುದ ನೀಡುತ್ತದೆ. ವಿಜಯ್‌ ಸೇತುಪತಿ ಅವರ ‘ನಡುವುಲ ಕೊಂಜಂ ಪಕ್ಕಥ ಕಾನಂ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಪ್ರೇಮ್‌ಕುಮಾರ್ ನಿರ್ದೇಶನದ ಚೊಚ್ಚಲ ಸಿನಿಮಾ ‘96’. 2016ರಲ್ಲಿ ‘ಕೋಡಿ’ ತಮಿಳು ಚಿತ್ರದ ನಂತರ ತ್ರಿಷಾ ನಟಿಸುತ್ತಿರುವ ಚಿತ್ರವಿದು. ಮದ್ರಾಸ್‌ ಎಂಟರ್‌ಪ್ರೈಸಸ್‌ ನಿರ್ಮಿಸುತ್ತಿರುವ ಚಿತ್ರಕ್ಕೆ ಗೋವಿಂದ್‌ ಮೆನನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಜನಾಗರಾಜ್‌, ಜಾನಕಿ, ವಿಷ್ಣು ಪ್ರಸಾದ್‌, ಕಾಳಿ ವೆಂಟಕ್‌, ಆಡುಕುಲುಂ ಮುರುಘದಾಸ್‌ ಮತ್ತಿತರರು ತಾರಾಬಳಗದಲ್ಲಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವಿನ್ನೂ ನಿಗದಿಯಾಗಿಲ್ಲ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More