ಸ್ಮರಣೆ | ಚಿತ್ರಸಾಹಿತಿ ನೀರಜ್‌ ರಚನೆಯ ಹತ್ತು ಪ್ರಸಿದ್ಧ ಸಿನಿಮಾ ವಿಡಿಯೋ ಹಾಡು

ಕಳೆದ ವಾರ (ಜು.19) ನಿಧನರಾದ ಕವಿ, ಚಿತ್ರಸಾಹಿತಿ ಗೋಪಾಲ್‌ ದಾಸ್ ಸಕ್ಸೇನಾ ರಚನೆಯ ಕವಿತ್ವಗುಣದ ಸಿನಿಮಾ ಗೀತೆಗಳು ಚಿತ್ರಪ್ರಿಯರ ಮನದಲ್ಲಿ ಎಂದೆಂದಿಗೂ ಅಮರ. ‘ನೀರಜ್‌’ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಸಕ್ಸೇನಾ ರಚನೆಯ ಆಯ್ದ ಹತ್ತು ವಿಡಿಯೋ ಸಿನಿಮಾ ಹಾಡುಗಳು ಇಲ್ಲಿವೆ

ಕವಿ ಗೋಪಾಲ್ ದಾಸ್ ಸಕ್ಸೇನಾ ಹಿಂದಿ ಮತ್ತು ಉರ್ದು ಸಾಹಿತ್ಯದಲ್ಲಿ ಅಪಾರ ಪರಿಣತಿ ಹೊಂದಿದ್ದವರು. ಆರಂಭದಲ್ಲಿ ಹಿಂದಿ ಚಿತ್ರನಿರ್ದೇಶಕರು ಅವರ ಕವಿತೆಗಳನ್ನು ತಮ್ಮ ಸಿನಿಮಾಗಳಲ್ಲಿ ಅಳವಡಿಸಿಕೊಂಡರು. ಗೀತಸಾಹಿತ್ಯದತ್ತ ಆಸಕ್ತರಾಗಲು ಇದು ನೀರಜ್‌ರಿಗೆ (ಗೋಪಾಲ್ ದಾಸ್ ಸಕ್ಸೇನಾ ಅವರ ಕಾವ್ಯನಾಮ) ಪ್ರೇರಣೆಯಾಯ್ತು. ಹೆಚ್ಚು ಗೀತೆಗಳನ್ನು ರಚಿಸದಿದ್ದರೂ ಅವರು ರಚಿಸಿದ ಹಾಡುಗಳೆಲ್ಲವೂ ಜನಪ್ರಿಯವಾಗಿವೆ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಗೋಪಾಲ್ ದಾಸ್‌ ಬರೆದ ಚಿತ್ರಗೀತೆಗಳಲ್ಲಿ ಬದುಕಿನ ಅನುಭವಗಳು ಆಪ್ತವಾಗಿ ಅಡಕವಾಗಿವೆ. ಅವರ ಬಹುಪಾಲು ರಚನೆಗಳು ಶಂಕರ್‌-ಜೈಕಿಶನ್‌, ಎಸ್ ಡಿ ಬರ್ಮನ್‌ ಸಂಗೀತ ಸಂಯೋಜನೆಯೊಂದಿಗೆ ಸಿನಿಮಾಗಳಿಗೆ ಅಳವಡಿಸಲ್ಪಟ್ಟಿವೆ. ಪದ್ಮಶ್ರೀ (1991), ಪದ್ಮಭೂಷಣ (2007) ಪುರಸ್ಕೃತ ನೀರಜ್‌ ರಚನೆಯ ಆಯ್ದ ಹತ್ತು ವಿಡಿಯೋ ಹಾಡುಗಳು ಇಲ್ಲಿವೆ.

ಪ್ರೇಮ್ ಪೂಜಾರಿ (1970)

ಶರ್ಮಿಲಿ (1971)

ಕನ್ಯಾದಾನ್‌ (1968)

ಪೆಹಚಾನ್‌ (1970)

ಇದನ್ನೂ ಓದಿ : ಜನುಮದಿನ | ಶಾಟ್‌ ಓಕೆ ಆಗುತ್ತಿದ್ದಂತೆ ಹಂಡೆಯಿಂದ ಹೊರಜಿಗಿದ ಹಾಸ್ಯಚಕ್ರವರ್ತಿ

ಚುಪಾ ರುಸ್ತುಂ (1973)

ತೇರೆ ಮೇರೆ ಸಪ್ನೆ (1971)

ಮೇರಾ ನಾಮ್ ಜೋಕರ್‌ (1970)

ನಯೀ ಉಮರ್ ಕಿ ನಯೀ ಫಜಲ್ (1966)

ತೇರೆ ಮೇರೆ ಸಪ್ನೆ (1971)

ಶರ್ಮಿಲಿ (1971)

ಕಿರುತೆರೆ ಹಿಂದಿ ಕಾರ್ಯಕ್ರಮವೊಂದರಲ್ಲಿ ನೀರಜ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More