ಸಲ್ಮಾನ್‌ - ಅಲಿ ಜಾಫರ್‌‌ ‘ಭರತ್‌’ ಸಿನಿಮಾದಲ್ಲಿ ಅರವತ್ತರ ದಶಕದ ಚಿತ್ರಣ

ಸಲ್ಮಾನ್ ಖಾನ್‌ ಅಭಿನಯದ ‘ಭರತ್‌’ ಸಿನಿಮಾದ ಮೊದಲ ಶೆಡ್ಯೂಲ್‌ ಆರಂಭವಾಗಿದೆ. ನಿರ್ದೇಶಕ ಅಲಿ ಅಬ್ಬಾಸ್ ಜಾಫರ್‌ ಟ್ವಿಟರ್‌ನಲ್ಲಿ ಚಿತ್ರೀಕರಣದಲ್ಲಿನ ಒಂದು ಫೋಟೋ ಶೇರ್ ಮಾಡಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ 2019ರ ಈದ್‌ನಲ್ಲಿ ತೆರೆಕಾಣಲಿದೆ

ಅಲಿ ಅಬ್ಬಾಸ್ ಜಾಫರ್‌ ನಿರ್ದೇಶನದಲ್ಲಿ ಸಲ್ಮಾನ್‌ ಖಾನ್‌ ನಟಿಸುತ್ತಿರುವ ‘ಭರತ್‌’ ಚಿತ್ರೀಕರಣ ಆರಂಭವಾಗಿದೆ. ಅಲಿ ಟ್ವಿಟರ್‌ನಲ್ಲಿ ಶೇರ್ ಮಾಡಿರುವ ಚಿತ್ರದ ಸರ್ಕಸ್‌ ಸನ್ನಿವೇಶವೊಂದರಲ್ಲಿನ ಫೋಟೋ ಸಿನಿಪ್ರಿಯರ ಗಮನ ಸೆಳೆದಿದೆ. ಬೆಂಕಿಯ ರಿಂಗ್‌ ಅನ್ನು ಬೈಕ್‌ನಲ್ಲಿ ಕ್ರಾಸ್ ಮಾಡುತ್ತಿರುವ ಸಲ್ಮಾನ್ ಫೋಟೋ ಚಿತ್ರದ ಕತೆಯ ಬಗ್ಗೆ ಕುತೂಹಲ ಮೂಡಿಸಿದೆ. ಚಿತ್ರಕ್ಕಾಗಿ ಅರವತ್ತರ ದಶಕದ ಭೂಮಿಕೆಯನ್ನು ಸಿದ್ಧಪಡಿಸಲಾಗಿದೆ. ಜಗತ್ತಿನ ವಿವಿಧೆಡೆಯ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವುದು ಲೇಟೆಸ್ಟ್‌ ಮಾಹಿತಿ. ಮೊದಲ ಶೆಡ್ಯೂಲ್‌ನ ಚಿತ್ರೀಕರಣದಲ್ಲಿ ನಟಿ ದಿಶಾ ಪಟಾನಿ ಟ್ರಾಪೆಜ್‌ ಕಲಾವಿದೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರಕ್ಕೆ ಬೆಂಕಿಯೊಂದಿಗಿನ ಸ್ಟಂಟ್ ದೃಶ್ಯಗಳಿವೆ.

ಚಿತ್ರದಲ್ಲಿ ಸಲ್ಮಾನ್ ಜೊತೆ ಪ್ರಿಯಾಂಕಾ ಚೋಪ್ರಾ, ತಬು ಮತ್ತು ಸುನೀಲ್ ಗ್ರೋವರ್ ಪ್ರಮುಖ ಪಾತ್ರಗಳಲ್ಲಿರುತ್ತಾರೆ. ಹಾಲಿವುಡ್‌ಗೆ ಹಾರಿದ್ದ ಪ್ರಿಯಾಂಕಾ ಮತ್ತೆ ಬಾಲಿವುಡ್‌ ಪ್ರವೇಶಿಸುತ್ತಿರುವ ಚಿತ್ರವಿದು. ಅಬುದಾಬಿ, ಸ್ಪೇನ್‌, ಪಂಜಾಬ್‌ ಮತ್ತು ದಿಲ್ಲಿಯಲ್ಲಿ ಸಿನಿಮಾದ ಬಹುಪಾಲು ಚಿತ್ರೀಕರಣ ನಡೆಯಲಿದ್ದು, ಸಲ್ಮಾನ್‌ಗೆ ಇಲ್ಲಿ ‘ಮೈನೆ ಪ್ಯಾರ್ ಕಿಯಾ’ ದಿನಗಳ ಲುಕ್‌ ಕೂಡ ಇರಲಿದೆ. ‘ಓಡ್‌ ಟು ಮೈ ಫಾದರ್‌’ (2014) ಕೊರಿಯಾ ಸಿನಿಮಾದ ರೀಮೇಕ್‌ ‘ಭರತ್‌’. ಸಲ್ಮಾನ್‌ ಮತ್ತು ಅಲಿ ಅಬ್ಬಾಸ್‌ ಜಾಫರ್‌ ಜೋಡಿಯಲ್ಲಿ ಇದು ಮೂರನೇ ಸಿನಿಮಾ. ಈ ಹಿಂದೆ ಅಲಿ ಅವರು ಸಲ್ಮಾನ್‌ಗೆ ‘ಸುಲ್ತಾನ್‌’, ‘ಟೈಗರ್ ಜಿಂದಾ ಹೈ’ ಸಿನಿಮಾಗಳನ್ನು ನಿರ್ದೇಶಿಸಿದ್ದರು. ‘ಭರತ್‌’ 2019ರ ಈದ್‌ನಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ : ಸ್ಮರಣೆ | ಚಿತ್ರಸಾಹಿತಿ ನೀರಜ್‌ ರಚನೆಯ ಹತ್ತು ಪ್ರಸಿದ್ಧ ಸಿನಿಮಾ ವಿಡಿಯೋ ಹಾಡು
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More