‘ನಿಮ್ಮ ಗಾಡಿಯ ವ್ಹೀಲು ಆಗ್ಲಿ ಪಂಚರು’; ಸಿನಿಮಾಗೆ ಹಾಡಿದ ಜ್ಞಾನೇಶ್ವರ್‌‌

ಸರಿಗಮಪ ಲಿಟ್ಲ್‌ ಚಾಂಪ್ಸ್‌ ರಿಯಾಲಿಟಿ ಶೋನಲ್ಲಿ ಹಂಸಲೇಖ ಅವರಿಂದ ‘ಶಿಶು ತಾನ್‌ಸೇನ್‌’ ಎಂದೇ ಕರೆಸಿಕೊಂಡಿದ್ದ ಹುಡುಗ ಜ್ಞಾನೇಶ್ವರ್‌‌. ಈ ಪುಟ್ಟ ಗಾಯಕನೀಗ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆಯಲ್ಲಿ ಹಾಡಿದ್ದಾನೆ. 

‘ಕ್ರಾಪು ಕೂದಲು ಕೂಲಿಂಗ್ ಗ್ಲಾಸು ಹಳೆಯ ನಿಕ್ಕರು’ ಎಂದು ಶುರುವಾಗುವ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದ ಹಾಡಿಗೆ ಜ್ಞಾನೇಶ್ವರ್‌ ದನಿಯಾಗಿದ್ದಾನೆ. ಸರಿಗಮಪ ಲಿಟ್ಲ್ ಚಾಂಪ್ಸ್‌ 14ನೇ ಸೀಸನ್‌ನಲ್ಲಿ ರನ್ನರ್ ಅಪ್‌ ಆಗಿದ್ದ ಹುಡುಗನೀತ. ಶೋನಲ್ಲಿ ಪ್ರತಿ ವಾರ ಜ್ಞಾನೇಶ್ವರ್‌ ಹಾಡುಗಳನ್ನು ವೀಕ್ಷಕರು ಪ್ರೀತಿಯಿಂದ ಕೇಳುತ್ತಿದ್ದರು. ಬಳ್ಳಾರಿ ಮೂಲದ ಹುಡುಗ ಹಿಂದೂಸ್ತಾನಿ ಸಂಗೀತದಲ್ಲಿ ಪರಿಣತಿ ಹೊಂದಿದ್ದಾನೆ. ಹುಡುಗನ ಗಾಯನಕ್ಕೆ ಮನಸೋತ ಹಿರಿಯ ಸಂಗೀತ ಸಂಯೋಜಕ ಹಂಸಲೇಖ ಅವರು ಜ್ಞಾನೇಶ್ವರ್‌ನನ್ನು ‘ಶಿಶು ತಾನ್‌ಸೇನ್‌’ ಎಂದು ಕರೆದಿದ್ದರು. ಹುಡುಗನೀಗ ಸಿನಿಮಾಗೆ ಹಾಡುವ ಮೂಲಕ ಮತ್ತೊಂದು ಮೆಟ್ಟಿಲು ಹತ್ತಿದ್ದಾನೆ.

“ಚಿತ್ರದ ಹಾಡನ್ನು ಯಾರಿಂದ ಹಾಡಿಸಬೇಕೆಂದು ನಾವು ಹುಡುಕಾಟದಲ್ಲಿದ್ದೆವು. ಆಗ ನಿರ್ದೇಶಕ ವಾಸುಕಿ ವೈಭವ್‌ ಅವರು ಜ್ಞಾನೇಶ್ವರ್‌ ಧ್ವನಿಯಲ್ಲಿ ರೆಕಾರ್ಡ್‌ ಆಗಿದ್ದ ಹಾಡೊಂದನ್ನು ಕಳುಹಿಸಿದ್ದರು. ನನಗೂ ತುಂಬಾ ಇಷ್ಟವಾಗಿ ಅವನಿಂದ ಹಾಡಿಸಿದೆವು. ಉತ್ತಮ ಸ್ವರಜ್ಞಾನವಿರುವ ಹುಡುಗ ಹಾಡಿಗೆ ಜೀವ ತುಂಬಿದ್ದಾನೆ” ಎನ್ನುತ್ತಾರೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ನಿರ್ದೇಶಕ ರಿಷಬ್‌ ಶೆಟ್ಟಿ. ಅವರು ಈ ಹಾಡಿನ ಸನ್ನಿವೇಶ ಬಿಟ್ಟುಕೊಟ್ಟಿಲ್ಲ. ಹಾಡಿನ ಸನ್ನಿವೇಶದ ಬಗ್ಗೆ ಹೇಳಿದರೆ ಕತೆಯನ್ನೇ ರಿವೀಲ್ ಮಾಡಿದಂತಾಗುತ್ತದೆ ಎನ್ನುತ್ತಾರವರು.

ಇದನ್ನೂ ಓದಿ : ಕಾಡು ನುಂಗಿದ ಕಳ್ಳ ಊರಿನಲ್ಲಿ ನಡೆಯುತ್ತದೆ ‘ಒಂದಲ್ಲಾ ಎರಡಲ್ಲಾ’ ಕತೆ

ಕೆಲವು ದಿನಗಳ ಹಿಂದೆ ತೆರೆಕಂಡ ಚಿತ್ರದ ‘ದಡ್ಡ ದಡ್ಡ’ ಹಾಡು ಕ್ಲಿಕ್ಕಾಗಿತ್ತು. ಈಗ ಜ್ಞಾನೇಶ್ವರ್‌ ಹಾಡು ಕೂಡ ವಿಶಿಷ್ಟವಾಗಿದ್ದು, ಮತ್ತೊಮ್ಮೆ ಕೇಳುವಂತಿದೆ. ಮೇಕಿಂಗ್ ವಿಡಿಯೋದಲ್ಲಿನ ಚಿತ್ರದ ವಿಡಿಯೋ ತುಣುಕುಗಳು ಕುತೂಹಲಕಾರಿಯಾಗಿವೆ. “ಹಾಗೆ ನೋಡಿದರೆ ಇದೊಂದು ಪ್ಯಾಥೋ ಸಾಂಗ್‌. ಅದನ್ನು ಹುಡುಗನೊಬ್ಬನ ದೃಷ್ಟಿಕೋನದಲ್ಲಿ ಬೇರೆಯದ್ದೇ ರೀತಿ ಮಾಡಿದ್ದೇವೆ” ಎನ್ನುತ್ತಾರೆ ನಿರ್ದೇಶಕ ರಿಷಬ್‌. ವೀರೇಶ್ ಮತ್ತು ತ್ರಿಲೋಕ್‌ ರಚನೆಯ ಈ ಹಾಡನ್ನು ಅವರು ‘ಬಲೂನ್‌ ಸಾಂಗ್‌’ ಎಂದು ಕರೆಯುತ್ತಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More