ಜನುಮದಿನ | ಸೋನು ನಿಗಮ್‌ ಜನಪ್ರಿಯ ಕನ್ನಡ ಸಿನಿಮಾ ವಿಡಿಯೋ ಹಾಡುಗಳು

‘ಮಾಡ್ರನ್‌ ಮೊಹಮ್ಮದ್ ರಫಿ’ ಎಂದೇ ಕರೆಸಿಕೊಳ್ಳುವ ಸೋನು ನಿಗಮ್‌, ಹಿಂದಿ ಚಿತ್ರರಂಗ ಕಂಡ ವರ್ಸೈಟೈಲ್‌ ಗಾಯಕ. ಇಂದು (ಜು.30) ಅವರಿಗೆ ನಲವತ್ತೈದು ವರ್ಷ ತುಂಬುತ್ತಿದೆ. ಸೋನು ನಿಗಮ್ ಹಾಡಿರುವ ನೂರಾರು ಕನ್ನಡ ಹಾಡುಗಳ ಪೈಕಿ ಆಯ್ದ ಹತ್ತು ವಿಡಿಯೋ ಹಾಡುಗಳು ಇಲ್ಲಿವೆ

“ಕನ್ನಡದ ಸಿನಿಮಾ ಸಂಗೀತ ಸಂಯೋಜಕರ ಬಗ್ಗೆ ನನಗೆ ಅಪಾರ ಹೆಮ್ಮೆ, ಗೌರವ. ನನ್ನ ಫೇವರಿಟ್ ಹಾಡುಗಳ ಪೈಕಿ ಕನ್ನಡದಲ್ಲಿ ನಾನು ಹಾಡಿರುವ ಹಾಡುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಕನ್ನಡ ಹಾಡುಗಳು ನನ್ನಲ್ಲಿ ಸಕಾರಾತ್ಮಕ ಭಾವನೆ ಹೊಮ್ಮಿಸುತ್ತವೆ,” ಎನ್ನುತ್ತಾರೆ ಗಾಯಕ ಸೋನು ನಿಗಮ್‌. ಕನ್ನಡ ಸಿನಿಪ್ರೇಕ್ಷಕರಿಗೂ ಅವರ ಹಾಡುಗಳೆಂದರೆ ಬಲು ಇಷ್ಟ. ಸೋನು ಹಾಡಿದ ಮೊದಲ ಕನ್ನಡ ಹಾಡು ‘ಎಲ್ಲೋ ಯಾರೋ ಹೇಗೋ...’ ಇದು ಆರ್ ಎನ್‌ ಜಯಗೋಪಾಲ್‌ ರಚಿಸಿಸಿ ‘ಜೀವನದಿ’ (1996) ಸಿನಿಮಾದ ಹಾಡು. ಅಲ್ಲಿಂದ ಮುಂದೆ ಸಾಲುಸಾಲಾಗಿ ಸೋನು ಕನ್ನಡಕ್ಕೆ ಹಾಡುತ್ತ ಬಂದಿದ್ದಾರೆ. ಕನ್ನಡ ಟಿವಿ ರಿಯಾಲಿಟಿ ಶೋಗಳ ಪ್ರತಿ ಸಂಚಿಕೆಗಳಲ್ಲಿ ಸೋನು ಹಾಡುಗಳು ಕಡ್ಡಾಯವಾಗಿ ಕೇಳಿಸುತ್ತವೆ. ಆಲ್ಬಂಗಳೂ ಸೇರಿದಂತೆ ಅವರು ಐನೂರಕ್ಕೂ ಹೆಚ್ಚು ಕನ್ನಡ ಹಾಡುಗಳಿಗೆ ದನಿಯಾಗಿದ್ದಾರೆ. ಸೋನು ಅವರ ಆಯ್ದ ಹತ್ತು ಕನ್ನಡ ಸಿನಿಮಾ ವಿಡಿಯೋ ಹಾಡುಗಳು ಇಲ್ಲಿವೆ.

ಫಸ್ಟ್‌ ರ‍್ಯಾಂಕ್‌ ರಾಜು

ಮೈನಾ

ಬೆಂಗಳೂರು 23

ಮಾದ ಮತ್ತು ಮಾನಸಿ

ಮಿಲನ

ಗಜ

ಸರ್ಕಸ್‌

ಜಂಗ್ಲಿ

ನಾನು ನನ್ನ ಕನಸು

ಮುಗುಳು ನಗೆ

ಇದನ್ನೂ ಓದಿ : ವಿಡಿಯೋ | ಸಿನಿಮಾ ಮಾಡುವವರಿಗೆ ವಾಣಿಜ್ಯ ಮಂಡಳಿ ಮಾರ್ಗದರ್ಶನ ನೀಡಲಿ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More