ಟೀಸರ್‌ | ಟ್ರೆಂಡ್‌ ಆಯ್ತು ನಿಖಿಲ್‌ ಕುಮಾರ್‌ ನಟನೆಯ ‘ಸೀತಾರಾಮ ಕಲ್ಯಾಣ’

ನಿನ್ನೆ (ಜು 31) ರಾತ್ರಿ ರಾಮನಗರದಲ್ಲಿ ಬಿಡುಗಡೆಯಾದ ‘ಸೀತಾರಾಮ ಕಲ್ಯಾಣ’ ಸಿನಿಮಾ ಟೀಸರ್ ಟ್ರೆಂಡ್‌ನಲ್ಲಿದೆ. ಆಕ್ಷನ್‌ ಸನ್ನಿವೇಶಗಳೇ ಹೆಚ್ಚಾಗಿರುವ ಟೀಸರ್‌ ರಿಚ್‌ನೆಸ್ ಮತ್ತು ಮೇಕಿಂಗ್‌ನಿಂದ ಗಮನಸೆಳೆಯುತ್ತದೆ. ಇಲ್ಲಿ ನಿಖಿಲ್‌ ಪಾತ್ರದ ಹೊರತಾಗಿ ಇತರೆ ಪಾತ್ರಗಳ ಪರಿಚಯವಿಲ್ಲ.

ನಿಖಿಲ್‌ ಕುಮಾರ್‌ ಅಭಿನಯದ ‘ಸೀತಾರಾಮ ಕಲ್ಯಾಣ’ ಸಿನಿಮಾ ಟೀಸರ್ ನಿನ್ನೆ ಬಿಡುಗಡೆಯಾಗಿದೆ. ರಾಮನಗರ ಕರಗ ಮಹೋತ್ಸವದಲ್ಲಿ ಟೀಸರ್ ಬಿಡುಗಡೆ ಮಾಡುವುದಾಗಿ ಇತ್ತೀಚೆಗೆ ನಡೆದ ಚಿತ್ರದ ಸುದ್ದಿಗೋಷ್ಠಿಯಲ್ಲಿ ‘ಸೀತಾರಾಮ ಕಲ್ಯಾಣ’ ನಿರ್ಮಾಪಕರೂ ಆದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹೇಳಿದ್ದರು. ಅಂತೆಯೇ ಟೀಸರ್‌ ಬಿಡುಗಡೆಯಾಗಿದ್ದು ಮೇಕಿಂಗ್‌ ಮತ್ತು ರಿಚ್‌ನೆಸ್‌ನಿಂದ ವಿಡಿಯೋ ಗಮನ ಸೆಳೆಯುತ್ತದೆ. “ಮೊದಲ ಟೀಸರ್‌ನಲ್ಲಿ ಆಕ್ಷನ್‌ ದೃಶ್ಯಗಳೇ ಹೆಚ್ಚಾಗಿರುತ್ತವೆ. ಹಾಗೆಂದು ಇದು ಆಕ್ಷನ್ ಚಿತ್ರವಲ್ಲ, ಫ್ಯಾಮಿಲಿ ಎಂಟರ್‌ಟೇನರ್‌ ಸಿನಿಮಾ” ಎಂದು ಹಿಂದಿನ ಸುದ್ದಿಗೋಷ್ಠಿಯಲ್ಲೇ ಕುಮಾರಸ್ವಾಮಿ ಹೇಳಿದ್ದರು. ಅವರು ಹೇಳಿದಂತೆ ಟೀಸರ್‌ ತುಂಬಾ ಆಕ್ಷನ್‌, ಸ್ಟಂಟ್‌ಗಳೇ ಇವೆ. ನಿಖಿಲ್ ಹೊರತಾಗಿ ಇತರೆ ಪಾತ್ರಗಳ ಪರಿಚಯವಿಲ್ಲ.

ಟೀಸರ್‌ನಲ್ಲಿನ ಕೆಲವು ಸ್ಟಂಟ್‌ಗಳು ಅಲ್ಲು ಅರ್ಜುನ್‌ ಅಭಿನಯದ ‘ಸರೈನೋಡು’ ತೆಲುಗು ಸಿನಿಮಾ ಹೋಲುತ್ತವೆ ಎಂದಿದ್ದಾರೆ ಹಲವರು. ಚಿತ್ರೀಕರಣ ಆರಂಭವಾಗುವುಕ್ಕೆ ಮುನ್ನವೇ ಇದು ತೆಲುಗು ಸಿನಿಮಾ ರೀಮೇಕ್‌ ಎನ್ನುವ ವದಂತಿಯಿತ್ತು. ಆದರೆ ಇದು ರೀಮೇಕಲ್ಲ, ಅಪ್ಪಟ ಸ್ವಮೇಕ್‌ ಎನ್ನುತ್ತಾರೆ ನಿಖಿಲ್ ಕುಮಾರ್‌. “ಸೋಷಿಯಲ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಇದು ರೀಮೇಕ್‌ ಎಂದು ಹೇಳಳಾಗಿತ್ತು. ಇದೊಂದು ಅಪ್ಪಟ ಸ್ವಮೇಕ್‌ ಚಿತ್ರವಾಗಿದ್ದು, ಚಿತ್ರಕತೆಗಾಗಿ ಐದಾರು ತಿಂಗಳು ಕೆಲಸ ಮಾಡಿದ್ದೇವೆ” ಎನ್ನುತ್ತಾರೆ ನಿಖಿಲ್‌. ಅವರಿಗಿದು ಮೂರನೇ ಸಿನಿಮಾ. ‘ಜಾಗ್ವಾರ್‌’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ನಿಖಿಲ್‌, ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಪೌರಾಣಿಕ ಚಿತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : ಜನುಮದಿನ | ದುರಂತ ನಾಯಕಿ ಇಮೇಜಿನ ಸುಂದರ ಹಿಂದಿ ನಟಿ ಮೀನಾಕುಮಾರಿ

ನಿರ್ದೇಶಕ ಹರ್ಷ ಅವರಿಗೆ ‘ಸೀತಾರಾಮ ಕಲ್ಯಾಣ’ ದೊಡ್ಡ ಪ್ರಾಜೆಕ್ಟ್‌. ಈಗಾಗಲೇ ಮಾತಿನ ಭಾಗದ ಸನ್ನಿವೇಶಗಳನ್ನು ಅವರು ಪೂರ್ಣಗೊಳಿಸಿದ್ದಾರೆ. ಶೀಘ್ರ ಚಿತ್ರೀಕರಣ ಮುಗಿಸಿ ದಸರಾ ಹಬ್ಬಕ್ಕೆ ಸಿನಿಮಾ ಬಿಡುಗಡೆಗೊಳಿಸುವುದು ಅವರ ಯೋಜನೆ. ರಚಿತಾ ರಾಮ್‌ ನಾಯಕಿಯಾಗಿ ಅಭಿನಯಿಸುತ್ತಿದ್ದು, ಉಳಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಸ್ವಾಮಿ ಛಾಯಾಗ್ರಹಣ ಮಾಡಿದ್ದಾರೆ. “ಚಿತ್ರದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಹಿನ್ನೆಲೆಯ ಕಥಾಹಂದರವಿದೆ. ಕೂಡುಕುಟುಂಬದ ಒಳಿತು, ಅಲ್ಲಿನ ಬಾಂಧವ್ಯದ ಆಕರ್ಷಕ ನಿರೂಪಣೆ ಇರಲಿದೆ” ಎನ್ನುವುದು ಚಿತ್ರದ ನಿರ್ಮಾಪಕ, ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ಹೇಳಿಕೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More