ಪುತ್ರಿ ಸುಹಾನಾ ಫೋಟೋಶೂಟ್ ವಿಡಿಯೋ ಶೇರ್‌ ಮಾಡಿದ ನಟ ಶಾರುಖ್‌ಖಾನ್‌

ಬಾಲಿವುಡ್ ಸ್ಟಾರ್‌ ಶಾರುಖ್‌ ಖಾನ್‌ ಪುತ್ರಿ ಸುಹಾನಾ ಖಾನ್‌ ಜನಪ್ರಿಯ ‘ವೋಗ್’ ಫ್ಯಾಷನ್ ಮ್ಯಾಗಜಿನ್‌ಗೆ ‌ರೂಪದರ್ಶಿಯಾಗಿದ್ದಾರೆ. ಈ ಮೂಲಕ ಆಕೆ ಅಧಿಕೃತವಾಗಿ ಫ್ಯಾಷನ್‌ ಜಗತ್ತಿಗೆ ಕಾಲಿಟ್ಟಂತಾಗಿದೆ. ಶಾರುಖ್‌ ಪತ್ರಿಕೆ ಬಿಡುಗಡೆ ಮಾಡಿ ಫೋಟೋಶೂಟ್ ವಿಡಿಯೋ ಶೇರ್ ಮಾಡಿದ್ದಾರೆ. 

ಇತ್ತೀಚೆಗಷ್ಟೇ ಶಾರುಖ್‌ ಖಾನ್‌ ಪುತ್ರಿ ಸುಹಾನಾ ಖಾನ್‌ರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿದ್ದವು. ಹದಿನೆಂಟರ ಹರೆಯದ ಸುಹಾನಾ ಇದೀಗ ‘ವೋಗ್‌’ ಫ್ಯಾಷನ್‌ ಮ್ಯಾಗಜಿನ್‌ ಆಗಸ್ಟ್‌ ಸಂಚಿಕೆಯ ಕವರ್‌ಗೆ ರೂಪದರ್ಶಿಯಾಗಿದ್ದಾರೆ. ಅವರ ಮೊದಲ ಫೋಟೋಶೂಟ್‌ನ ವಿಡಿಯೋ ಬಿಡುಗಡೆಯಾಗಿದ್ದು, ಗೌರಿ ಖಾನ್‌ ಈ ವಿಡಿಯೋ ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ. ಒಂದು ನಿಮಿಷ ಮೂವತ್ತು ಸೆಕೆಂಡ್‌ಗಳ ಈ ಫೋಟೋಶೂಟ್‌ ವಿಡಿಯೋದಲ್ಲಿ ಸುಹಾನಾ ಆಕರ್ಷಕವಾಗಿ ಕಾಣಿಸಕೊಂಡಿದ್ದಾರೆ. ವಿಡಿಯೋ ಮಧ್ಯೆ ಸುಹಾನಾರ ಕೆಲವು ಮಾತುಗಳಿವೆ. ‘ವಿದ್ಯಾರ್ಥಿನಿ, ರಂಗಭೂಮಿ ಪ್ರೇಮಿ, ಭವಿಷ್ಯದ ಸ್ಟಾರ್‌’ ಎಂದು ‘ವೋಗ್‌’ ಹೇಳಿದೆ.

ಗ್ಲ್ಯಾಮರ್ ಜಗತ್ತಿಗೆ ಕಾಲಿಟ್ಟಿರುವ ಪುತ್ರಿ ಸುಹಾನಾ ಬಗ್ಗೆ ಶಾರುಖ್ ಹೆಮ್ಮೆಯಿಂದ ಮಾತನಾಡಿದ್ದಾರೆ. ಪುತ್ರಿಯ ಫೋಟೋ ಹೊತ್ತು ಬಂದಿರುವ ‘ವೋಗ್‌’ ಸಂಚಿಕೆ ಬಿಡುಗಡೆ ಮಾಡಿದ ಶಾರುಖ್‌, “ಆಕೆಯನ್ನು ಈಗ ಮತ್ತೊಮ್ಮೆ ಪ್ರೀತಿಯಿಂದ ಕೈಲಿ ಹಿಡಿದಿದ್ದೇನೆ. ಈ ಅವಕಾಶ ಒದಗಿಸಿದ ವೋಗ್‌ ಪತ್ರಿಕೆಗೆ ಧನ್ಯವಾದ. ಸುಹಾನಾಳ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಹೆಮ್ಮೆಯಿದೆ!” ಎಂದು ಟ್ವೀಟ್ ಮಾಡಿದ್ದಾರೆ. ಶಾರುಖ್ ಪತ್ನಿ ಗೌರಿ ಖಾನ್‌ ಪುತ್ರಿಯ ಫೋಟೋಶೂಟ್‌ ವಿಡಿಯೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಬಾಲಿವುಡ್ ತಾರೆಯರು ಸುಹಾನಾ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಗ್ಲ್ಯಾಮರ್ ಜಗತ್ತಿಗೆ ಆಹ್ವಾನಿಸಿದ್ದಾರೆ.

ಇದನ್ನೂ ಓದಿ : ಒತ್ತಡಕ್ಕೆ ಮಣಿದು ‘ಅಚ್ಛೇ ದಿನ್‌’ ಹಾಡಿನ ಸಾಹಿತ್ಯ ಬದಲಿಸಿದ ‘ಫನ್ನೇ ಖಾನ್‌’
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More