ವಿಡಿಯೋ | ಶಿವರಾಜ್‌-ಸುದೀಪ್‌ ‘ದಿ ವಿಲನ್’ ಮೂರನೇ ಹಾಡು‌ ರಿಲೀಸ್‌

‘ದಿ ವಿಲನ್’ ಚಿತ್ರದ ಮೊದಲೆರೆಡು ಹಾಡುಗಳ ಮೂಲಕ ನಿರ್ದೇಶಕ ಪ್ರೇಮ್ ವಿವಾದ ಸೃಷ್ಟಿಸಿದ್ದರು. ಈಗ ಚಿತ್ರದ ಮೂರನೇ ಹಾಡಿನಲ್ಲಿ ರೊಮ್ಯಾಂಟಿಕ್‌ ಸಾಲುಗಳಿವೆ. ಪ್ರೇಮ್‌ ಅವರೇ ಗೀತೆ ರಚಿಸಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಹಾಡು ಪ್ರೇಮ್‌ ಶೈಲಿಯಲ್ಲೇ ಇದೆ

ಪ್ರೇಮ್‌ ನಿರ್ದೇಶನದ ‘ದಿ ವಿಲನ್‌’ ಸಿನಿಮಾದ ಮೂರನೇ ಹಾಡು ಬಿಡುಗಡೆಯಾಗಿದೆ. ಈ ಹಿಂದೆ ಬಿಡುಗಡೆಯಾದ ಎರಡು ಹಾಡುಗಳೂ ವಿವಾದಕ್ಕೆ ಸಿಲುಕಿದ್ದವು. ಸಿನಿಮಾದ ಎರಡು ಪ್ರತ್ಯೇಕ ಟೀಸರ್ ಬಿಡುಗಡೆಯಾದಾಗ ಶಿವರಾಜಕುಮಾರ್ ಮತ್ತು ಸುದೀಪ್‌ ಅಭಿಮಾನಿಗಳು ಪರಸ್ಪರ ಜಗಳ ಮಾಡಿಕೊಂಡಿದ್ದರು. ಸುದೀಪ್‌ ಟೀಸರ್‌ಗೆ ಹೆಚ್ಚು ಹಿಟ್ಸ್ ಸಿಕ್ಕಿವೆ ಎನ್ನುವ ವಿಚಾರದಿಂದ ಹಿಡಿದು, ತಮ್ಮ ಹೀರೋಗಳಿಗೆ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲ ಎನ್ನುವವರೆಗೂ ಹೇಳಿಕೆಗಳು ಕೇಳಿಬಂದಿದ್ದವು. ಸೋಷಿಯಲ್ ಮೀಡಿಯಾದಲ್ಲಿ ಗಲಾಟೆ ಹೆಚ್ಚಾದಾಗ ಅಭಿಮಾನಿಗಳಿಗೆ ಸ್ವತಃ ಶಿವರಾಜಕುಮಾರ್‌ ಬುದ್ಧಿ ಹೇಳಬೇಕಾಗಿ ಬಂದಿತ್ತು. ಟೀಸರ್ ವಿವಾದ ಚಿತ್ರದ ಮೊದಲೆರೆಡು ಹಾಡುಗಳಲ್ಲಿಯೂ ಮುಂದುವರಿಯಿತು.

ಮೊದಲೆರೆಡು ಹಾಡುಗಳಲ್ಲಿ ನಟರಿಬ್ಬರನ್ನು ಮಾಸ್ ಇಮೇಜ್‌ನಲ್ಲಿ ತೋರಿಸಿದ್ದರು ಪ್ರೇಮ್‌. ಈಗ ರೊಮ್ಯಾಂಟಿಕ್ ಸಾಂಗ್‌ ಬಿಡುಗಡೆಯಾಗಿದೆ. ಪ್ರೇಮ್‌ ಗೀತೆ ರಚಿಸಿದ್ದು, ಅವರೇ ಹಾಡಿದ್ದಾರೆ. ಜೊತೆಗೆ ಮೂವರು ಗಾಯಕರ ಕೋರಸ್‌ ಇದೆ. ‘ಲವ್ ಆಗೋಯ್ತು ನಿನ್‌ ಮ್ಯಾಲೆ’ ಲಿರಿಕಲ್ ಹಾಡಿನಲ್ಲಿ ಏಮಿ ಜಾಕ್ಸನ್‌ ಜೊತೆ ಇಬ್ಬರ ಹೀರೋಗಳ ಫೋಟೋಗಳು ಕಾಣಿಸುತ್ತವೆ. ಸುದೀಪ್‌ ಟ್ರೆಂಡೀಯಾಗಿದ್ದರೆ, ಶಿವರಾಜ್‌ಕುಮಾರ್‌ ರೆಟ್ರೋ ಲುಕ್‌ನಲ್ಲಿದ್ದಾರೆ. ಇದು ಯಾವ ಹೀರೋ ಮೇಲೆ ಚಿತ್ರಿಸಿರುವ ಹಾಡೆನ್ನುವ ಗುಟ್ಟನ್ನು ಪ್ರೇಮ್ ಬಿಟ್ಟುಕೊಟ್ಟಿಲ್ಲ. ಮೇಕಿಂಗ್ ವಿಡಿಯೋದಲ್ಲಿ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರೊಂದಿಗೆ ಪ್ರೇಮ್‌ ಹಾಗೂ ಕೋರಸ್ ಗಾಯಕರನ್ನು ನೋಡಬಹುದಾಗಿದೆ.

ಆರ್ ಮನೋಹರ್‌ ನಿರ್ಮಾಣದಲ್ಲಿ ತಯಾರಾಗುತ್ತಿರುವ ‘ದಿ ವಿಲನ್‌’ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಶಿವರಾಜಕುಮಾರ್ ಮತ್ತು ಸುದೀಪ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ಈ ಚಿತ್ರದ ನಾಯಕಿ ಏಮಿ ಜಾಕ್ಸನ್‌. ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ಎರಡನೇ ಹಾಡನ್ನು ಪ್ರೇಮ್, ನಟ‌ ಶಿವರಾಜಕುಮಾರ್ ಗುಣಗಾನಕ್ಕೆ ಮೀಸಲಿಟ್ಟಿದ್ದರು. ಹಾಡಿನಲ್ಲಿ ಪ್ರೇಮ್‌ ಸ್ಯಾಂಡಲ್‌ವುಡ್‌ನ ಇತರ ಹೀರೋಗಳ ಕಾಲೆಳೆದಿದ್ದರು. ‘‘ನಿನ್ನೆ-ಮೊನ್ನೆ ಬಂದೋರೆಲ್ಲ ನಂ.1 ಅಂತಾರೋ’ ಎನ್ನುವ ಸಾಲುಗಳು ಯಾರನ್ನು ಉದ್ದೇಶಿಸಿದ್ದು ಎನ್ನುವ ಪ್ರಶ್ನೆಗೆ ಉತ್ತರವಿನ್ನೂ ಸಿಕ್ಕಿಲ್ಲ. ಇದೀಗ ಮೂರನೇ ಹಾಡಿನೊಂದಿಗೆ ಚಿತ್ರ ಸುದ್ದಿಯಾಗಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More