ಕಾಜೋಲ್ ಜನ್ಮದಿನದಂದು ‘ಹೆಲಿಕಾಪ್ಟರ್‌ ಈಲಾ’ ಟ್ರೈಲರ್ ಬಿಡುಗಡೆ

ಕಾಜೋಲ್ ಸಿಂಗಲ್ ಮದರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಹೆಲಿಕಾಪ್ಟರ್ ಈಲಾ’ ಸಿನಿಮಾ ಟ್ರೈಲರ್ ಭಾನುವಾರ ಬಿಡುಗಡೆಯಾಗಿದೆ. ಆಧುನಿಕ ಕಾಲಘಟ್ಟದಲ್ಲಿ ತಾಯಿ ಮತ್ತು ಮಗನ ನಡುವಿನ ಸಂಬಂಧದ ಏರಿಳಿತಗಳನ್ನು ನಿರೂಪಿಸಲಿರುವ ಈ ಚಿತ್ರ ಸೆಪ್ಟೆಂಬರ್ ೭ರಂದು ತೆರೆಕಾಣಲಿದೆ

ಬಾಲಿವುಡ್ ನಟಿ ಕಾಜೋಲ್ ಜನ್ಮದಿನವಾದ ಆಗಸ್ಟ್ ೫ರಂದು ಅವರ ಹೊಸ ಹಿಂದಿ ಸಿನಿಮಾ ‘ಹೆಲಿಕಾಪ್ಟರ್ ಈಲಾ’ ಟ್ರೈಲರ್ ಬಿಡುಗಡೆಯಾಗಿದೆ. ಸಿಂಗಲ್ ಮದರ್ ಆಗಿ ಬದುಕುವ ಸಂಕಷ್ಟಗಳನ್ನು ವಿವರಿಸುವ ಕತೆಯನ್ನು ಹೊಂದಿದೆ ‘ಹೆಲಿಕಾಪ್ಟರ್ ಈಲಾ.’ ತಾಯಿ ಮತ್ತು ಮಗನ ಸಂಬಂಧದ ಸುತ್ತ ತಿರುಗುವ ಈ ಹಾಸ್ಯಮಯ ಚಿತ್ರ ಸೆಪ್ಟೆಂಬರ್ ೭ರಂದು ತೆರೆ ಕಾಣಲಿದೆ.

ಸಾಮಾನ್ಯವಾಗಿ ಹೆತ್ತವರು ಮಕ್ಕಳ ಜೀವನದಲ್ಲಿ ಅಗತ್ಯಕ್ಕಿಂತ ಹೆಚ್ಚು ತೊಡಗಿಸಿಕೊಂಡಿರುತ್ತಾರೆ. ಸಿನಿಮಾದಲ್ಲಿ ಕಾಜೋಲ್ ತಮ್ಮ ಮಗನ ಜೀವನದಲ್ಲೂ ಇಂತಹುದೇ ಪ್ರಭಾವ ಹೊಂದಿರುತ್ತಾರೆ. ಕಾಜೋಲ್ ತಮ್ಮ ಮಗನ ಕ್ಲಾಸ್‌ಗೆ ವಿದ್ಯಾರ್ಥಿಯಾಗಿ ಭಡ್ತಿಯಾದಾಗ ಮಗನಿಗೆ ಮುಜುಗರವಾಗುತ್ತದೆ. ತಾಯಿ ಎಲ್ಲ ಕಡೆ ತನ್ನನ್ನು ಹಿಂಬಾಲಿಸುವುದು ಮಗ ವಿವಾನ್‌ನಿಗೆ ಇಷ್ಟವಾಗುವುದಿಲ್ಲ. ಇದು ತಾಯಿ ಮತ್ತು ಮಗನ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿ ಮಗ ಮನೆಬಿಟ್ಟು ಹೋಗುತ್ತಾನೆ. ಎರಡೂವರೆ ನಿಮಿಷಗಳ ಟ್ರೈಲರ್‌ನಲ್ಲಿ ಈ ಎಲ್ಲ ವಿವರಗಳೂ ಬಂದುಹೋಗುತ್ತವೆ. ಸಂಪೂರ್ಣ ಸಿನಿಮಾದ ಹಂದರವನ್ನು ಎರಡೂವರೆ ನಿಮಿಷಗಳಲ್ಲಿ ಮುಂದಿಟ್ಟಿರುವ ಟ್ರೈಲರ್ ಸಿನಿಮಾದ ಬಗ್ಗೆ ಆಸಕ್ತಿ ಮೂಡಿಸುತ್ತದೆ.

ಇದನ್ನೂ ಓದಿ : ಟ್ರೈಲರ್ | ಖ್ಯಾತ ಹಾಕಿ ಆಟಗಾರ ಸಂದೀಪ್‌ ಸಿಂಗ್‌ ಬಯೋಪಿಕ್‌ ‘ಸೂರ್ಮಾ’

ಪ್ರದೀಪ್ ಸರ್ಕಾರ್ ನಿರ್ದೇಶನದ ಈ ಚಿತ್ರದಲ್ಲಿ ಕಾಜೋಲ್‌ರ ಮಗನಾಗಿ ರಾಷ್ಟ್ರಪ್ರಶಸ್ತಿ ವಿಜೇತ ಪ್ರತಿಭಾವಂತ ಬಂಗಾಳಿ ನಟ ರಿದ್ಧಿ ಸೇನ್ ನಟಿಸಿದ್ದಾರೆ. ಸಿನಿಮಾವನ್ನು ಕಾಜೋಲ್‌ರ ಪತಿ ಅಜಯ್ ದೇವಗನ್ ನಿರ್ಮಿಸುತ್ತಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More