ಗೆಳತಿಯರಿಗೆ ಆಸ್ಪತ್ರೆಯಿಂದಲೇ ಭಾವುಕ ಸಂದೇಶ ಬರೆದ ಸೋನಾಲಿ ಬೇಂದ್ರೆ

ನ್ಯೂಯಾರ್ಕ್‌ನಲ್ಲಿ ಕ್ಯಾನ್ಸರ್‌ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಸೋನಾಲಿ ಬೇಂದ್ರೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್‌ನಲ್ಲಿ ತಮ್ಮ ಆತ್ಮಗೆಳತಿಯರಾದ ಸುಜಾನೆ ಖಾನ್ ಮತ್ತು ಗಾಯತ್ರಿ ಒಬೆರಾಯ್ ಅವರಿಗೆ ಸ್ನೇಹಿತರ ದಿನದ ಶುಭಾಶಯ ಹೇಳಿದ್ದಾರೆ

ಕ್ಯಾನ್ಸರ್‌ ರೋಗದಿಂದ ಬಳಲುತ್ತಿರುವ ಬಾಲಿವುಡ್‌ನ ಹಿರಿಯ ನಟಿ ಸೋನಾಲಿ ಬೇಂದ್ರೆ ಆಗಸ್ಟ್ ೫ರ ಸ್ನೇಹಿತರ ದಿನದಂದು ತಮ್ಮ ಕಷ್ಟದ ಕಾಲದಲ್ಲಿ ಜೊತೆಯಲ್ಲಿ ನಿಂತಿರುವ ಸ್ನೇಹಿತರನ್ನು ನೆನೆದು ಭಾವುಕರಾಗಿದ್ದಾರೆ. ನ್ಯೂಯಾರ್ಕ್‌ನಲ್ಲಿ ಕ್ಯಾನ್ಸರ್‌ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಸೋನಾಲಿ, ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್‌ನಲ್ಲಿ ತಮ್ಮ ಆತ್ಮಗೆಳತಿಯರಾದ ಸುಜಾನೆ ಖಾನ್ ಮತ್ತು ಗಾಯತ್ರಿ ಒಬೆರಾಯ್ ಅವರಿಗೆ ಸ್ನೇಹಿತರ ದಿನದ ಶುಭಾಶಯ ಹೇಳಿದ್ದಾರೆ.

ಹೃತಿಕ ರೋಶನ್ ಮಾಜಿ ಪತ್ನಿ ಸುಜಾನೆ ಖಾನ್ ಅವರು ಸೋನಾಲಿ ಬೇಂದ್ರೆಯವರ ಪ್ರಿಯ ಸ್ನೇಹಿತೆ. ಸುಜಾನೆ ಮತ್ತು ಗಾಯತ್ರಿಯ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಸೋನಾಲಿ, ಜೊತೆಗೆ ಒಂದು ಸಂದೇಶವನ್ನೂ ಬರೆದಿದ್ದಾರೆ. “ಇದು ನಾನು. ಈ ಕ್ಷಣದಲ್ಲಿ ನಾನು ಬಹಳ ಖುಷಿಯಾಗಿದ್ದೇನೆ. ಜನರು ನನ್ನನ್ನು ವಿಚಿತ್ರವಾಗಿ ನೋಡಿದ್ದರು. ಈಗ ಇದನ್ನು ನಾನು ಹೇಳುತ್ತಿದ್ದೇನೆ. ಇದು ನಿಜ. ಏಕೆ ಎಂದು ಹೇಳುತ್ತೇನೆ. ನಾನು ಈಗ ಪ್ರತಿಕ್ಷಣಕ್ಕೂ ಪ್ರಾಮುಖ್ಯತೆ ನೀಡುತ್ತಿದ್ದೇನೆ. ಸಂತೋಷದಿಂದ ಕಳೆಯುವ ಯಾವುದೇ ಅವಕಾಶವನ್ನೂ ಬಿಡುವುದಿಲ್ಲ. ಹೌದು, ನೋವು ಮತ್ತು ನಿರುತ್ಸಾಹದ ಕ್ಷಣಗಳೂ ಇವೆ. ಆದರೆ, ನಾನು ನನ್ನ ಪ್ರಿಯ ಜನರ ಜೊತೆ ಕಾಲ ಕಳೆಯುತ್ತ, ಅವರ ಪ್ರೀತಿಯಲ್ಲಿ ಸಂತೃಪ್ತಿ ಪಡೆಯುತ್ತಿದ್ದೇನೆ. ನನ್ನ ಅನಾರೋಗ್ಯ ತಿಳಿದು ನನ್ನ ಬಳಿಗೆ ಬಂದು, ನನ್ನ ಜೊತೆಗಿದ್ದು ನೆರವಾಗಿ, ನನಗೆ ಧೈರ್ಯ ತುಂಬಿದ ಸ್ನೇಹಿತರಿಗೆ ನಾನು ಆಭಾರಿಯಾಗಿದ್ದೇನೆ. ತಮ್ಮ ಬ್ಯುಸಿಯಾದ ಕೆಲಸಗಳ ನಡುವೆ ನನ್ನನ್ನು ಭೇಟಿಯಾಗಲು, ಕರೆ ಮಾಡಲು, ಸಂದೇಶ ಕೊಡಲು, ವಿಡಿಯೋ ಕರೆ ಮಾಡಲು ಅವರು ಸಮಯ ಮಾಡಿಕೊಂಡಿದ್ದಾರೆ. ಮುಖ್ಯವಾಗಿ, ನಾನು ಒಂಟಿಯಾಗುವ ಅವಕಾಶವನ್ನೇ ಅವರು ನೀಡಲಿಲ್ಲ. ಇಂತಹ ನಿಜವಾದ ಸ್ನೇಹವನ್ನು ತೋರಿಸಿರುವುದಕ್ಕಾಗಿ ಧನ್ಯವಾದಗಳು. ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು. ನೀವೆಲ್ಲರೂ ನನ್ನ ಜೀವನದಲ್ಲಿರುವುದೇ ದೊಡ್ಡ ಆಶೀರ್ವಾದ (ಈ ಚಿತ್ರದಲ್ಲಿ ಇಲ್ಲದವರಿಗೂ ಸೇರಿ ಹೇಳುತ್ತಿದ್ದೇನೆ),” ಎಂದು ಸೋನಾಲಿ ಬರೆದುಕೊಂಡಿದ್ದಾರೆ.

This is me. And in this moment, I am really happy. People give me strange looks when I say that now, but it's true and I'll tell you why. I am now paying attention to every moment, looking for every opportunity to find joy and #SwitchOnTheSunshine. Yes, there are moments of pain and low energy, but I am doing what I like, spending time with people I love, and feeling very loved and happy. I am extremely grateful to my friends, my pillars of strength, who at a moment's notice, arrived to be with me and help me through this. In between their busy schedules they find time to visit, call, message, FaceTime... basically never leaving a moment for me to feel alone. Thank you for showing me what true friendship is. #HappyFriendshipDay, ladies. Blessed to have you all in my life (including the ones not in the picture... You know who you are) @gayatrioberoi @suzkr P.S. Nowadays I spend far less time getting ready because I don't have to fuss over my hair! 😜#BaldIsBeautiful #FindThePositive #OneDayAtATime Picture credit: @hrithikroshan

A post shared by Sonali Bendre (@iamsonalibendre) on

ಇದನ್ನೂ ಓದಿ : ಫಂಕಿ‌ ಹೇರ್‌ಕಟ್ ವಿಡಿಯೋ ಶೇರ್‌ ಮಾಡಿ ‘ಕ್ಯಾನ್ಸರ್‌ ಗೆಲ್ಲುತ್ತೇನೆ’ ಎಂದ ಸೋನಾಲಿ

ಸೋನಾಲಿ ಬೇಂದ್ರೆ ಕ್ಯಾನ್ಸರ್ ಚಿಕಿತ್ಸೆಗಾಗಿ ಕೂದಲು ಕಳೆದುಕೊಂಡಿರುವ ಬಗ್ಗೆಯೂ ಸಂದೇಶ ಹಾಕಿದ್ದಾರೆ. “ಇತ್ತೀಚೆಗೆ ನನಗೆ ಕೂದಲೇ ಇಲ್ಲದ ಕಾರಣ ಸುಂದರಿಯಾಗಿ ಕಾಣಲು ಕಡಿಮೆ ಸಮಯ ತೆಗೆದುಕೊಳ್ಳುತ್ತಿದ್ದೇನೆ. ಬೋಳುತಲೆಯೇ ಸುಂದರ,” ಎಂದೂ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ಸೋನಾಲಿ ಬೇಂದ್ರೆಯ ಜೊತೆಗೆ ಸುಜಾನೆ ಮತ್ತು ಗಾಯತ್ರಿ ಕುಳಿತ ಚಿತ್ರವನ್ನು ಹೃತಿಕ್ ರೋಶನ್ ತೆಗೆದಿದ್ದರು ಎನ್ನುವುದನ್ನೂ ಸೋನಾಲಿ ಹೇಳಿದ್ದಾರೆ.

ಸೋನಾಲಿ ಬೇಂದ್ರೆ ಈಗ ಆರೋಗ್ಯವಾಗಿದ್ದಾರೆ ಎಂದು ಆಕೆಯ ಪತಿ ಗೋಲ್ಡಿ ಬೆಹ್ಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಗೋಲ್ಡಿ ಬೆಹ್ಲ್ ಅವರೂ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳು ಸೋನಾಲಿಯ ಅನಾರೋಗ್ಯದ ಸಂದರ್ಭ ಆಕೆಯ ಜೊತೆಗಿದ್ದು ಧೈರ್ಯ ಹೇಳಿರುವುದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ. ಎರಡು ದಿನಗಳ ಹಿಂದೆ ಟ್ವಿಟರ್ ಮೂಲಕ ಸಂದೇಶ ಕಳುಹಿಸಿದ ಗೋಲ್ಡಿ, “ಸೋನಾಲಿಗೆ ನಿಮ್ಮ ಪ್ರೀತಿಗೆ ಧನ್ಯವಾದಗಳು. ಆಕೆ ಈಗ ಸ್ಥಿರವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಧೀರ್ಘಕಾಲ ಚಿಕಿತ್ಸೆ ಅಗತ್ಯವಿರುವುದು ನಿಜ. ಆದರೆ, ನಾವು ಭರವಸೆ ಕಳೆದುಕೊಳ್ಳುವುದಿಲ್ಲ,” ಎಂದು ಹೇಳಿದ್ದಾರೆ.

ಟ್ರೈಲರ್‌‌ | ಟೆಲಿಫಿಲ್ಮ್ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಶೇಕ್ಸ್‌ಪಿಯರ್‌ನ ‘ಕಿಂಗ್‌ ಲಿಯರ್’
ವಿಡಿಯೋ ಸ್ಟೋರಿ | ಯುವ ತಂತ್ರಜ್ಞರಿಗೆ ನೆರವಾಗಲು ಕಿರು ಚಿತ್ರೋತ್ಸವ
‘ಕಾಲ’ ನಿರ್ದೇಶಕ ಪಾ ರಂಜಿತ್‌ ನಿರ್ದೇಶನದಲ್ಲಿ ಸಿಲ್ಕ್‌ ಸ್ಮಿತಾ ವೆಬ್‌ ಸರಣಿ
Editor’s Pick More