ಟ್ರೈಲರ್‌| ಬಾಲಿವುಡ್‌ ಲವ್‌ಸ್ಟೋರಿಗಳಿಗೆ ತಿರುವು ಕೊಡಲಿದೆಯೇ ‘ಲೈಲಾ ಮಜ್ನೂ’?

ಸಾಜಿದ್‌ ಅಲಿ ನಿರ್ದೇಶನದ ‘ಲೈಲಾ ಮಜ್ನೂ’ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಪ್ರೀತಿಯ ಕತೆಗಳ ಮಾದರಿಯಲ್ಲಿ ಟ್ರೆಂಡ್ ಸೃಷ್ಟಿಸಲಿದೆ ಎಂದು ಹೇಳಲಾಗಿದ್ದರೂ, ಟ್ರೈಲರ್‌ ಅಂತಹ ಭರವಸೆಯನ್ನೇನೂ ಮೂಡಿಸುವುದಿಲ್ಲ. ಇದೇ ಸೆಪ್ಟೆಂಬರ್‌ 7ರಂದು ಸಿನಿಮಾ ತೆರೆಕಾಣಲಿದೆ

ಬಾಲಿವುಡ್‌ನ ಆಧುನಿಕ ಪ್ರೇಮಕತೆಗಳ ಸಿನಿಮಾಗಳ ಬಗ್ಗೆ ಹೇಳುವಾಗ ನಿರ್ದೇಶಕ ಇಮ್ಲಿಯಾಜ್‌ ಅಲಿ ಹೆಸರು ಪ್ರಸ್ತಾಪವಾಗುತ್ತದೆ. ಅವರೀಗ ಮತ್ತೊಂದು ತಾಜಾ ಪ್ರೇಮಕತೆಯನ್ನು ಅರ್ಪಿಸುತ್ತಿದ್ದಾರೆ. ಅವರ ಸಲಹೆ, ಸೂಚನೆ ಮೇರೆಗೆ ಸಾಜಿದ್ ಅಲಿ ನಿರ್ದೇಶಿಸಿರುವ ‘ಲೈಲಾ ಮಜ್ನೂ’ ಸಿನಿಮಾ ತಯಾರಾಗಿದ್ದು ಟ್ರೈಲರ್ ಬಿಡುಗಡೆಯಾಗಿದೆ. ಬಾಲಿವುಡ್‌ನ ಆಧುನಿಕ ಲವ್‌ ಸಿನಿಮಾ ಮಾದರಿಗೆ ಈ ಸಿನಿಮಾ ತಿರುವು ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಅವಿನಾಶ್ ತಿವಾರಿ ಮತ್ತು ತ್ರಿಪಾಠಿ ಡಿಮ್ರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು. ಟ್ರೈಲರ್‌ನಲ್ಲಿ ಇಬ್ಬರ ಮಧ್ಯೆ ಅರಳುವ ಪ್ರೀತಿ, ಇವರ ಪ್ರೀತಿಗೆ ಎದುರಾಗುವ ಕಂಟಕ, ಈ ಅಡೆತಡೆಗಳನ್ನು ಮೀರುವ ಪ್ರೇಮಿಗಳ ಕಥನವಿದೆ. ಪ್ರೀತಿಯ ಕತೆಗಳ ಮಾದರಿಯಲ್ಲಿ ಟ್ರೆಂಡ್ ಸೃಷ್ಟಿಸಲಿದೆ ಎಂದು ಹೇಳಿದ್ದರೂ, ಟ್ರೈಲರ್‌ ಅಂತಹ ಭರವಸೆಯನ್ನೇನೂ ಮೂಡಿಸುವುದಿಲ್ಲ. ಹಿನ್ನೆಲೆ ಸಂಗೀತದಲ್ಲಿ ತಾಜಾತನ ಕಾಣಿಸಿದರೂ ಎಂದಿನ ಸಾಧಾರಣ ಪ್ರೇಮಕತೆಗಳಂತೆಯೇ ಭಾಸವಾಗುತ್ತದೆ.

ಇದನ್ನೂ ಓದಿ : ಬಾಲಿವುಡ್‌ ಸಿನಿಮಾಗಳಲ್ಲಿ ಮಿಂಚಿದ ಅಸಾಂಪ್ರದಾಯಿಕ ಜೋಡಿಗಳು

ಚಿತ್ರದ ಬಹುಪಾಲು ಚಿತ್ರೀಕರಣ ಕಾಶ್ಮೀರದಲ್ಲಿ ನಡೆದಿದೆ. ಹಾಗಾಗಿ, ಪ್ರೇಕ್ಷಕರು ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಗಡಿರಾಜ್ಯದ ಹಿನ್ನೆಲೆ ಇರುವುದರಿಂದ ಕತೆಗೆ ಉಗ್ರಗಾಮಿ ನಂಟು ಇರುವ ಸಾಧ್ಯತೆಗಳೂ ಇಲ್ಲದಿಲ್ಲ. ತಿವಾರಿ ಈ ಹಿಂದೆ ‘ತು ಹೈ ಮೇರಾ ಸಂಡೇ’ ಚಿತ್ರದಲ್ಲಿ ನಟಿಸಿದ್ದರು. ಅಮಿತಾಭ್ ಬಚ್ಚನ್‌ ಅವರೊಂದಿಗೆ ‘ಯುದ್ಧ್‌’ ಟಿವಿ ಶೋನಲ್ಲೂ ಅವರು ಕಾಣಿಸಿಕೊಂಡಿದ್ದರು. ತ್ರಿಪಾಠಿ ಡಿಮ್ರಿ ‘ಪೋಸ್ಟರ್‌ ಬಾಯ್ಸ್‌’ ಚಿತ್ರದಲ್ಲಿ ನಟಿಸಿದ್ದರು. ಬಾಲಾಜಿ ಮೋಷನ್‌ ನಿರ್ಮಿಸಿರುವ ‘ಲೈಲಾ ಮಜ್ನೂ’ ಸೆಪ್ಟೆಂಬರ್‌ 7ರಂದು ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More