ಗುಣಮುಖರಾದ ಪೂಜಾ; ಸಲ್ಮಾನ್‌ಗೆ ಧನ್ಯವಾದ ಅರ್ಪಿಸಿದ ‘ವೀರ್‌ಗತಿ’ ನಟಿ

ಕ್ಷಯ ರೋಗದಿಂದ ಬಳಲುತ್ತಿದ್ದ ನಟಿ ಪೂಜಾ ದಡ್ವಾಲ್‌ ಸಹಾಯ ಅಪೇಕ್ಷಿಸಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿದ್ದರು. ನಟ ಸಲ್ಮಾನ್ ಖಾನ್‌ ಅವರ ಬೀಯಿಂಗ್ ಹ್ಯೂಮನ್‌ ಫೌಂಡೇಷನ್‌ ನಟಿಗೆ ಸಹಾಯ ನೀಡಿತ್ತು. ಗುಣಮುಖರಾಗಿರುವ ನಟಿ ಸಲ್ಮಾನ್‌ಗೆ ಧನ್ಯವಾದ ಹೇಳಿದ್ದಾರೆ

ತೊಂಬತ್ತರ ದಶಕದ ಸಲ್ಮಾನ್‌ ಖಾನ್‌ ಅಭಿನಯದ ‘ವೀರ್‌ಗತಿ’ (1995) ಹಿಂದಿ ಚಿತ್ರದಲ್ಲಿ ನಟಿಸಿದ್ದ ಪೂಜಾ ದಡ್ವಾಲ್‌ ಕ್ಷಯದಿಂದ ಗುಣಮುಖರಾಗಿದ್ದಾರೆ. ಇತ್ತೀಚೆಗೆ ಆಸ್ಪತ್ರೆಯಿಂದ ದಿಸ್ಚಾರ್ಜ್‌ ಆದ ನಟಿ ಸಹಾಯ ನೀಡಿದ ಸಲ್ಮಾನ್‌ಗೆ ಧನ್ಯವಾದ ಹೇಳಿದ್ದಾರೆ. ಈ ವರ್ಷದಾರಂಭದಲ್ಲಿ ನಟಿ ಸಹಾಯ ಅಪೇಕ್ಷಿಸಿ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಾಕಿದ್ದರು. ವಿಡಿಯೋದಲ್ಲಿ ಪೂಜಾ, “ಕುಟುಂಬ, ಆಪ್ತರು ನನ್ನನ್ನು ದೂರ ಮಾಡಿದ್ದಾರೆ. ಕ್ಷಯದಿಂದ ಬಳಲುತ್ತಿರುವ ನನಗೆ ಹಣಕಾಸಿನ ತೊಂದರೆಯಾಗಿದ್ದು, ಸಹಾಯದ ನಿರೀಕ್ಷೆಯಲ್ಲಿದ್ದೇನೆ” ಎಂದಿದ್ದರು. ಇದು ಸಲ್ಮಾನ್‌ ಖಾನ್‌ರ ಬೀಯಿಂಗ್ ಹ್ಯೂಮನ್‌ ಫೌಂಡೇಷನ್‌ ಗಮನಕ್ಕೆ ಬಂದು ಅವರು ನಟಿಯ ಆಸ್ಪತ್ರೆ ಹಾಗೂ ಇತರೆ ಖರ್ಚುವೆಚ್ಚಗಳನ್ನು ಭರಿಸಿದ್ದರು.

ಇದೀಗ ನಟಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ತಮಗೆ ಸಹಾಯ ಮಾಡಿದ ಸಲ್ಮಾನ್ ಫೌಂಡೇ‍ಷನ್‌ಗೆ ಧನ್ಯವಾದ ಹೇಳಿರುವ ಅವರು, “ಮಾರ್ಚ್‌ 2ರಂದು ಆಸ್ಪತ್ರೆ ಸೇರಿದ ನಾನು ಅಲ್ಲಿನ ವಾರ್ಡ್‌ನಲ್ಲಿ ಅಶಕ್ತಳಾಗಿ ಮಲಗಿದ್ದೆ. ಕುಟುಂಬದವರು, ಆಪ್ತರೆಲ್ಲರೂ ನನ್ನಿಂದ ದೂರವಾಗಿದ್ದರು. ಶ್ವಾಸಕೋಶದಲ್ಲಿ ತೀವ್ರ ಸೋಂಕಿದೆ ಎಂದು ಡಾಕ್ಟರ್‌ ಹೇಳಿದಾಗ ಬದುಕುವ ಎಲ್ಲಾ ಭರವಸೆಯನ್ನೂ ಕಳೆದುಕೊಂಡಿದ್ದೆ. ಆದರೆ ನಾನು ಬದುಕಬೇಕೆಂದು ನಿಶ್ಚಯಿಸಿದೆ. ಸಹಾಯ ಕೋರಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದೆ. ಸಲ್ಮಾನ್‌ರ ಬೀಯಿಂಗ್ ಹ್ಯೂಮನ್‌ ಫೌಂಡೇಶನ್ ನೆರವಿಗೆ ಬಂತು. ನನಗೆ ಮರುಜನ್ಮ ನೀಡಿದ ಸಲ್ಮಾನ್‌ಗೆ ಕೃತಜ್ಞಳಾಗಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿ : ವಿಡಿಯೋ ಸಾಂಗ್‌ | ಅಕ್ಷಯ್ ಮತ್ತು ಮೌನಿ ರಾಯ್‌ ಜೋಡಿಯ‌ ‘ಮೊನೊಬಿನಾ’ 

ಪೂಜಾ ದಡ್ವಾಲ್‌ ಕುರಿತು ಪ್ರಸ್ತಾಪವಾದಾಗ ಈ ಹಿಂದೆ ಸಲ್ಮಾನ್‌ ಖಾನ್‌, “ನನಗೆ ಈ ಬಗ್ಗೆ ಮಾಹಿತಿ ತಿಳಿಯಿತು. ನಾವೇನು ಸಹಾಯ ಮಾಡಬಹುದೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ನಮ್ಮ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದೆ. ಅವರು ಆರೋಗ್ಯವಾಗಿ ಮನೆಗೆ ಮರಳುತ್ತಾರೆ” ಎಂದಿದ್ದರು. ಸಲ್ಮಾನ್‌ ಹೇಳಿದಂತೆ ‘ವೀರ್‌ಗತಿ’ ನಟಿ ಪೂಜಾ ದಡ್ವಾಲ್‌ ಈಗ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಸಲ್ಮಾನ್‌ ಖಾನ್‌ ಫೌಂಡೇಷನ್‌ ಕೆಲಸಕ್ಕೆ ಬಾಲಿವುಡ್ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಸಹಾಯ ಅಪೇಕ್ಷಿಸಿ ಪೂಜಾ ಹಾಕಿದ್ದ ವಿಡಿಯೋ

‘ವೀರ್‌ಗತಿ’ ಚಿತ್ರದಲ್ಲಿ ಅತುಲ್ ಅಗ್ನಿಹೋತ್ರಿ ಜೊತೆ ಪೂಜಾ ದಡ್ವಾಲ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More