‘ದಿ ಸ್ಕೈ ಈಸ್ ಪಿಂಕ್‌’ಗೆ ಚಾಲನೆ; ಫೋಟೋ ಟ್ವೀಟ್‌ ಮಾಡಿದ ಪ್ರಿಯಾಂಕಾ

ಶೋನಾಲಿ ಬೋಸ್ ನಿರ್ದೇಶನದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿರುವ ‘ದಿ ಸ್ಕೈ ಈಸ್‌ ಪಿಂಕ್‌’ ಹಿಂದಿ ಸಿನಿಮಾ ಸೆಟ್ಟೇರಿದೆ. ನಟಿ ಚಿತ್ರತಂಡದೊಂದಿಗಿನ ಫೋಟೋ ಟ್ವೀಟ್ ಮಾಡಿದ್ದಾರೆ. ರೋನ್ನಿ ಸ್ಕ್ರ್ಯೂವಾಲಾ ಮತ್ತು ಸಿದ್ದಾರ್ಥ್ ರಾಯ್ ಕಪೂರ್ ಈ ಬಯೋಪಿಕ್ ನಿರ್ಮಾಪಕರು

ಸಲ್ಮಾನ್ ಖಾನ್‌ ಅಭಿನಯದ ‘ಭಾರತ್‌’ ಹಿಂದಿ ಚಿತ್ರದಿಂದ ಹೊರನಡೆದು ಸುದ್ದಿಯಾಗಿದ್ದರು ಪ್ರಿಯಾಂಕಾ ಚೋಪ್ರಾ. ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಸ್ಕೋಪ್‌ ಇಲ್ಲವೆಂದು ಪ್ರಿಯಾಂಕಾ ಹೊರನಡೆದಿದ್ದಾರೆ ಎನ್ನುವ ವದಂತಿಗಳೂ ಹರಡಿದ್ದವು. ನಟಿಯ ಈ ನಿರ್ಧಾರಕ್ಕೆ ಚಿತ್ರತಂಡದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಇದಾಗಿ ಮೂರ್ನಾಲ್ಕು ದಿನಗಳಲ್ಲೇ ಪ್ರಿಯಾಂಕಾ ತಮ್ಮ ಹೊಸ ಹಾಲಿವುಡ್ ಸಿನಿಮಾ ‘ಕೌಬಾಯ್‌ ನಿಂಜಾ ವೈಕಿಂಗ್‌’ ಘೋಷಿಸಿದ್ದರು. ಹಾಲಿವುಡ್ ಚಿತ್ರಕ್ಕೂ ಮುನ್ನ ಇದೀಗ ಅವರ ಬಾಲಿವುಡ್‌ ಸಿನಿಮಾ ‘ದಿ ಸ್ಕೈ ಈಸ್ ಪಿಂಕ್‌’ ಸೆಟ್ಟೇರಿದೆ. ಪ್ರಿಯಾಂಕಾ ತಮ್ಮ ಚಿತ್ರದ ಸಹಕಲಾವಿದರು, ನಿರ್ಮಾಪಕ, ನಿರ್ದೇಶಕರೊಂದಿಗಿನ ಫೋಟೋ ಶೇರ್‌ ಮಾಡಿದ್ದಾರೆ.‌

ಇದನ್ನೂ ಓದಿ : ಜನಪ್ರಿಯ ಕ್ವಾಂಟಿಕೋ ಸರಣಿಗೆ ನಟಿ ಪ್ರಿಯಾಂಕಾ ಚೋಪ್ರಾ ಭಾವುಕ ವಿದಾಯ

‘ದಿ ಸ್ಕೈ ಈಸ್ ಪಿಂಕ್’ ಬಯೋಪಿಕ್‌ ಸಿನಿಮಾ. 13ನೇ ವಯಸ್ಸಿಗೆ ಶ್ವಾಸಕೋಶ ಸಂಬಂಧಿ ಕಾಯಿಲೆಗೆ ತುತ್ತಾದರೂ ಜೀವನೋತ್ಸಾಹ ಕಳೆದುಕೊಳ್ಳದೆ ಮೋಟಿವೇಷನಲ್ ಸ್ಪೀಕರ್ ಆಗಿ ಹೆಸರು ಮಾಡಿದ ಆಯೇಷಾ ಚೌಧರಿ ಜೀವನ ಆಧರಿಸಿದ ಕತೆ. ‘ದಂಗಲ್’ ಸಿನಿಮಾ ಖ್ಯಾತಿಯ ಝೈರಾ ವಾಸಿಂ ಅವರು ಆಯೇಷಾ ಚೌಧರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಝೈರಾ ಪೋಷಕರ ಪಾತ್ರಗಳಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಫರ್ಹಾನ್ ಅಖ್ತರ್‌ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ವಿಶೇಷ. ಈ ಹಿಂದೆ “ಮಾರ್ಗರೀಟಾ ವಿಥ್ ಎ ಸ್ಟ್ರಾ” ನಿರ್ದೇಶಿಸಿದ್ದ ಶೋನಾಲಿ ಬೋಸ್‌ ‘ದಿ ಸ್ಕೈ ಈಸ್ ಪಿಂಕ್’ಗೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ರೋನ್ನಿ ಸ್ಕ್ರ್ಯೂವಾಲಾ ಮತ್ತು ಸಿದ್ದಾರ್ಥ್ ರಾಯ್ ಕಪೂರ್ ನಿರ್ಮಾಣದ ಚಿತ್ರವಿದು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More