ಪಾಕ್‌ನಲ್ಲಿ ಮರುಕಳಿಸಿದ ಕಲಾವಿದರ ಮೇಲಿನ ದಾಳಿ; ಗಾಯಕಿ ರೇಶ್ಮಾ ಖಾನ್‌ ಹತ್ಯೆ

ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರದೇಶದಲ್ಲಿ ಕಲಾವಿದೆಯರ ಮೇಲಿನ ಮತ್ತೊಂದು ಹಿಂಸಾತ್ಮಕ ಘಟನೆ ದಾಖಲಾಗಿದೆ. ಇದು ಅಂತಹ 15ನೇ ಘಟನೆ. ಜನಪ್ರಿಯ ಪಾಕಿಸ್ತಾನಿ ನಾಟಕ ‘ಘೊಬಾಲ್‌ ಗೊಲುನಾ’ ನಟಿ, ಪಾಶ್ಟೋ ಹಾಡುಗಳ ಗಾಯಕಿ ರೇಶ್ಮಾ ಖಾನ್‌ ಇಂದು ಬೆಳಗ್ಗೆ ಹತ್ಯೆಗೀಡಾಗಿದ್ದಾರೆ

ಜನಪ್ರಿಯ ಪಾಕಿಸ್ತಾನಿ ನಟಿ, ಗಾಯಕಿ ರೇಶ್ಮಾ ಖಾನ್‌ ಇಂದು (ಆ.9) ಬೆಳಗ್ಗೆ ಹತ್ಯೆಗೀಡಾಗಿದ್ದಾರೆ. ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರದೇಶದಲ್ಲಿ ಕಲಾವಿದೆಯರ ಮೇಲಿನ 15ನೇ ದಾಳಿ ಇದು. ಫೆ.3ರಂದು ಇಂಥದ್ದೇ ಘಟನೆಯೊಂದರಲ್ಲಿ ರಂಗಭೂಮಿ ನಟಿ ಸುನ್‌ಬುಲ್‌ ಹತರಾಗಿದ್ದರು. ಖಾಸಗಿ ಸಮಾರಂಭದಲ್ಲಿ ತನ್ನೊಂದಿಗೆ ಪಾಲ್ಗೊಳ್ಳಲು ಒಪ್ಪದ ಅವರನ್ನು ವ್ಯಕ್ತಿಯೊಬ್ಬ ಹತ್ಯೆಗೈದಿದ್ದ. ಈಗ ನಟಿ, ಗಾಯಕಿ ರೇಶ್ಮಾ ಹತ್ಯೆಯಾಗಿದೆ. ತಮ್ಮ ಪಾಶ್ಟೋ ಹಾಡುಗಳಿಂದ ಆಕೆ ಜನಪ್ರಿಯತೆ ಗಳಿಸಿದ್ದರು. ಜನಮೆಚ್ಚುಗೆಯ ಪಾಕಿಸ್ತಾನಿ ನಾಟಕ ‘ಘೊಬಾಲ್‌ ಗೊಲುನಾ’ನಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದರು.

ಇದನ್ನೂ ಓದಿ : ಗುಣಮುಖರಾದ ಪೂಜಾ; ಸಲ್ಮಾನ್‌ಗೆ ಧನ್ಯವಾದ ಅರ್ಪಿಸಿದ ‘ವೀರ್‌ಗತಿ’ ನಟಿ

ಕೌಟುಂಬಿಕ ಕಾರಣಗಳಿಗಾಗಿ ಈ ಹತ್ಯೆ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆ ಹೇಳುತ್ತದೆಯಾದರೂ ಮೂಲಭೂತವಾದದ ಶಂಕೆ ಇದೆ. ಹತ್ಯೆ ಮಾಡಿರುವ ವ್ಯಕ್ತಿಯ ನಾಲ್ಕನೇ ಪತ್ನಿ ರೇಶ್ಮಾ ಎನ್ನಲಾಗಿದೆ. ಪತಿಯೊಂದಿಗೆ ವೈಮನಸ್ಸು ಏರ್ಪಟ್ಟ ನಂತರ ರೇಶ್ಮಾ, ಹಕೀಮ್‌ಬಾದ್‌ ಪ್ರದೇಶದಲ್ಲಿ ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ಏಕಾಏಕಿ ಮನೆಗೆ ನುಗ್ಗಿದ ಪತಿ, ರೇಶ್ಮಾರ ಮೇಲೆ ಪಿಸ್ತೂಲಿನಿಂದ ಹಲವು ಸುತ್ತು ಗುಂಡು ಹಾರಿಸಿದ್ದಾನೆ. ರೇಶ್ಮಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಟ್ರೈಲರ್‌‌ | ಟೆಲಿಫಿಲ್ಮ್ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಶೇಕ್ಸ್‌ಪಿಯರ್‌ನ ‘ಕಿಂಗ್‌ ಲಿಯರ್’
ವಿಡಿಯೋ ಸ್ಟೋರಿ | ಯುವ ತಂತ್ರಜ್ಞರಿಗೆ ನೆರವಾಗಲು ಕಿರು ಚಿತ್ರೋತ್ಸವ
‘ಕಾಲ’ ನಿರ್ದೇಶಕ ಪಾ ರಂಜಿತ್‌ ನಿರ್ದೇಶನದಲ್ಲಿ ಸಿಲ್ಕ್‌ ಸ್ಮಿತಾ ವೆಬ್‌ ಸರಣಿ
Editor’s Pick More