ಸೆಟ್‌ ವಿಸಿಟ್‌ ವಿಡಿಯೋ | ನಿಖಿಲ್‌-ರಚಿತಾ ಅಭಿನಯದ ‘ಸೀತಾರಾಮ ಕಲ್ಯಾಣ’

ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರದ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದೆ. ಶೂಟಿಂಗ್‌ ಸೆಟ್‌ಗೆ ಭೇಟಿ ನೀಡಿದ್ದ ‘ದಿ ಸ್ಟೇಟ್‌’ಗೆ ಸೆರೆಸಿಕ್ಕ ವಿಡಿಯೋ ತುಣುಕುಗಳು ಇಲ್ಲಿವೆ

ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘ಸೀತಾರಾಮ ಕಲ್ಯಾಣ’ ಸಿನಿಮಾ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಕ್ಲ್ಯೈಮ್ಯಾಕ್ಸ್‌ ಚಿತ್ರೀಕರಣ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದು, ಸೆಟ್‌ಗೆ ‘ದಿ ಸ್ಟೇಟ್‌’ ಭೇಟಿ ನೀಡಿತ್ತು. ಅರಮನೆ ಮೈದಾನದಲ್ಲಿ ಹಳೆಯ ದೇವಾಲಯಗಳನ್ನು ಹೋಲುವ ಸೆಟ್‌ಗಳಿದ್ದವು. ‘ಸೀತಾ ರಾಮ’ರ ಕಲ್ಯಾಣಕ್ಕೆ ದೊಡ್ಡ ತಾರಾಬಳಗವೇ ಸಾಕ್ಷಿಯಾಗಿತ್ತು. ಕನ್ನಡದ ಹಿರಿಯನಟಿ ಗಿರಿಜಾ ಲೋಕೇಶ್‌, ತಮಿಳು ನಟ ಶರತ್ ಕುಮಾರ್, ಆದಿತ್ಯ ಮೆನನ್, ರವಿಶಂಕರ್ ಸೇರಿದಂತೆ ಹತ್ತಾರು ಕಿರುತೆರೆ ನಟ-ನಟಿಯರು ಇದ್ದರು. ಹೀರೋ ನಿಖಿಲ್‌ ಮತ್ತು ನಾಯಕಿ ರಚಿತಾ ರಾಮ್ ಪ್ರಮುಖ ಆಕರ್ಷಣೆ.

ಇದನ್ನೂ ಓದಿ : ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸುವಂತೆ ಸಿಎಂ ಎಚ್‌ಡಿಕೆಗೆ ಸಿದ್ದರಾಮಯ್ಯ ಪತ್ರ

ಚಿತ್ರದ ನಿರ್ದೇಶಕ ಹರ್ಷ ಅವರು, ಶರತ್ ಕುಮಾರ್ ಹಾಗೂ ರಚಿತಾ ರಾಮ್ ನಡುವಿನ ಭಾವನಾತ್ಮಕ ಸನ್ನಿವೇಶವೊಂದನ್ನು ಸೆರೆಹಿಡಿಯುವಲ್ಲಿ ಮಗ್ನರಾಗಿದ್ದರು. ಹತ್ತಾರು ಕಲಾವಿದರಿದ್ದ ಸನ್ನಿವೇಶ ಇದು. ನಟ-ನಟಿಯರ ಸೂಕ್ತ ಹೊಂದಾಣಿಕೆ ಇಲ್ಲದ ಕಾರಣ ನಾಲ್ಕು ಪ್ರಯತ್ನಗಳ ನಂತರ ಐದನೇ ಬಾರಿ ಟೇಕ್ ಓಕೆ ಆಯ್ತು. ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಸೇರಿದಂತೆ ಅಲ್ಲಿ ದೊಡ್ಡ ಜನಸಂದಣಿಯೇ ಇತ್ತು. ಇದೊಂದು ಸನ್ನಿವೇಶ ಚಿತ್ರಿಸಿದ ನಿರ್ದೇಶಕರು ಯೂನಿಟ್‌ಗೆ ‘ಬ್ರೇಕ್‌’ ಹೇಳಿದರು. ಶೂಟಿಂಗ್ ಮೂಡ್‌ನಿಂದ ಹೊರಬಂದ ಕಲಾವಿದರು ಪತ್ರಿಕಾಗೋಷ್ಠಿಗೆ ಹಾಜರಾದರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More