ಬಾಲಿವುಡ್‌ ಗೀತೆ ಹಾಡಿದ ಪಾಕಿಸ್ತಾನಿ ಗಾಯಕ ಅತಿಫ್‌ ವಿರುದ್ಧ ಟ್ರಾಲ್

ಪಾಕಿಸ್ತಾನಿ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಬಾಲಿವುಡ್‌ ಹಾಡಿಗೆ ದನಿಯಾದ ಅತಿಫ್‌ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಪಾಕಿಸ್ತಾನಿ ಮಾಧ್ಯಮಗಳೂ ಅವರ ನಿಲುವನ್ನು ಖಂಡಿಸಿವೆ. ಪಾಕಿಸ್ತಾನಿ ಗಾಯಕರು ಮತ್ತು ಸಿನಿಮಾರಂಗದವರು ಅತಿಫ್‌ ಬೆಂಬಲಕ್ಕೆ ನಿಂತಿದ್ದಾರೆ

ನ್ಯೂಯಾರ್ಕ್‌ನಲ್ಲಿ ನಡೆದ ಪಾಕಿಸ್ತಾನ ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಹಿಂದಿ ಸಿನಿಮಾ ಹಾಡಿಗೆ ದನಿಯಾದ ಗಾಯಕ ಅತಿಫ್‌ ಅಸ್ಲಾಮ್‌ ಟ್ರಾಲ್‌ಗೆ ಒಳಗಾಗಿದ್ದಾರೆ. ಸೋಷಿಯಲ್‌ ಮೀಡಿಯಾ ಮಾತ್ರವಲ್ಲದೆ, ಪಾಕಿಸ್ತಾನದ ಮುಖ್ಯವಾಹಿನಿ ಮಾಧ್ಯಮಗಳು ಕೂಡ ಅತಿಫ್‌ ನಡೆಯನ್ನು ಟೀಕಿಸಿವೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಅತಿಫ್‌, ‘ಅಜಬ್ ಪ್ರೇಮ್‌ ಕಿ ಘಜಬ್ ಕಹಾನಿ’ (2009) ಹಿಂದಿ ಸಿನಿಮಾದ ‘ತೇರಾ ಹೂ ಲಗಾ ಹೂ’ ಹಾಡನ್ನು ಹಾಡಿದ್ದರು. ಇದು ಹಿಂದಿ ಚಿತ್ರಕ್ಕೆ ಅವರೇ ಹಾಡಿದ್ದ ಗೀತೆ. ಈ ಹಾಡಿನ ಕಾರಣಕ್ಕಾಗಿ ಅತಿಫ್ ಟ್ರಾಲ್‌ಗೀಡಾಗಿದ್ದಾರೆ.

ಅತಿಫ್ ಗಾಯನದ ಒಂದು ಹಳೆಯ ವಿಡಿಯೋ

ಪಾಕಿಸ್ತಾನದಲ್ಲಿ ಅತಿಫ್ ಅಭಿಮಾನಿಗಳು ಗಾಯಕನ ದೇಶಭಕ್ತಿಯನ್ನು ಪ್ರಶ್ನಿಸುತ್ತಿದ್ದಾರೆ. ಟ್ವಿಟರ್‌ಗಳಲ್ಲಿ ಅತಿಫ್‌ ಹಾಡುಗಳನ್ನು ಬಹಿಷ್ಕರಿಸುವುದಾಗಿ ಹಲವರು ಹೇಳಿದ್ದಾರೆ. ಮೂವತ್ತೈದರ ಹರೆಯದ ಗಾಯಕ ಅತಿಫ್‌ ಇನ್‌ಸ್ಟಾಗ್ರಾಂನಲ್ಲಿ ಪತ್ರ ಬರೆದಿದ್ದು, “ಪಾಕಿಸ್ತಾನಿ ಧ್ವಜ ನನ್ನ ಅಸ್ತಿತ್ವ. ನಾನು ದೇಶವನ್ನು ಎಷ್ಟು ಪ್ರೀತಿಸುತ್ತೇನೆ ಎನ್ನುವುದು ನನ್ನೆಲ್ಲ ಅಭಿಮಾನಿಗಳಿಗೆ ಗೊತ್ತಿದೆ. ನನ್ನ ವಿರುದ್ಧದ ಈ ಮಸಲತ್ತನ್ನು ಅಭಿಮಾನಿಗಳು ವಿರೋಧಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ನಾವೆಲ್ಲರೂ ಸೇರಿ ಹೊಸ ಪಾಕಿಸ್ತಾನ ನಿರ್ಮಿಸೋಣ. ದೇಶಕ್ಕೆ ಹೆಮ್ಮೆ ತರುವ ಕಲಾವಿದರನ್ನು ಗೌರವಿಸುವುದನ್ನು ಅರಿಯೋಣ,” ಎಂದಿದ್ದಾರೆ.

ಇದನ್ನೂ ಓದಿ : ಪಾಕ್‌ನಲ್ಲಿ ಮರುಕಳಿಸಿದ ಕಲಾವಿದರ ಮೇಲಿನ ದಾಳಿ; ಗಾಯಕಿ ರೇಶ್ಮಾ ಖಾನ್‌ ಹತ್ಯೆ

ಬಾಲಿವುಡ್‌ ಸಿನಿಮಾಗಳಿಗೆ ಹಾಡಿರುವ ಮತ್ತೊಬ್ಬ ಪಾಕಿಸ್ತಾನಿ ಗಾಯಕ ಶಫ್ಖತ್‌ ಅಮಾನತ್‌ ಅಲಿ ಅವರು ಅತಿಫ್‌ರನ್ನು ಸಮರ್ಥಿಸಿಕೊಂಡಿದ್ದಾರೆ. “ಹಿಂದಿ ಸಿನಿಮಾಗೆ ತಾವು ದನಿಯಾಗಿರುವ ಗೀತೆಯನ್ನು ಸಮಾರಂಭದಲ್ಲಿ ಹಾಡಿರುವ ಅತಿಫ್‌ಗೆ ನನ್ನ ಬೆಂಬಲವಿದೆ. ಸಂಗೀತಕ್ಕೆ ದೇಶ, ಭಾಷೆಗಳ ಚೌಕಟ್ಟು ಹಾಕುವುದು ಸರಿಯಲ್ಲ,” ಎಂದಿದ್ದಾರೆ ಅಲಿ. ಪಾಕಿಸ್ತಾನಿ ಸಿನಿಮಾ ವಿಶ್ಲೇಷಕ ಒಮರ್ ಕೂಡ ಗಾಯಕ ಅತಿಫ್‌ ಬೆಂಬಲಕ್ಕೆ ನಿಂತಿದ್ದಾರೆ. “ಪಾಕಿಸ್ತಾನಿಯರು ಬಾಲಿವುಡ್ ಚಿತ್ರಗಳನ್ನು ನೋಡುವುದಿಲ್ಲವೇ? ಕಲೆ, ಸಿನಿಮಾ, ಸಂಗೀತ ಕ್ಷೇತ್ರಗಳಿಗೆ ಮೂಲಭೂತವಾದ ಸಲ್ಲದು,” ಎಂದಿದ್ದಾರೆ.

ಸಂಗೀತ ಕಾರ್ಯಕ್ರಮವೊಂದರಲ್ಲಿ ಗಾಯಕರಾದ ಸೋನು ನಿಗಮ್‌ ಮತ್ತು ಅತಿಫ್‌ ಅಸ್ಲಾಮ್‌

ಗಾಯಕ ಅತಿಫ್ ಅಸ್ಲಾಮ್ ಪರ-ವಿರೋಧದ ಟ್ವೀಟ್‌ಗಳು

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More