ಟೀಸರ್‌ | ‘ಮಹರ್ಷಿ’ ಸಿನಿಮಾದಲ್ಲಿ ಲವರ್ ಬಾಯ್‌ ಇಮೇಜ್‌ನ ಮಹೇಶ್‌ ಬಾಬು

‘ಭರತ್‌ ಅನೆ ನೇನು’ ಚಿತ್ರದ ದೊಡ್ಡ ಯಶಸ್ಸಿನ ನಂತರ ಮಹೇಶ್ ಬಾಬು ‘ಮಹರ್ಷಿ’ಯಲ್ಲಿ ನಟಿಸುತ್ತಿದ್ದಾರೆ. ನಟನ ಜನ್ಮದಿನದಂದು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇಲ್ಲಿ ಕಾಲೇಜ್ ಸ್ಟೂಡೆಂಟ್ ಪಾತ್ರದಲ್ಲಿ ಲವರ್ ಬಾಯ್ ಇಮೇಜಿಗೆ ಮಹೇಶ್‌ ಬಾಬು ಮರಳಿರುವುದು ವಿಶೇಷ

ಟಾಲಿವುಡ್ ಸ್ಟಾರ್ ಹೀರೋ ಮಹೇಶ್‌ ಬಾಬು ನಿನ್ನೆ (ಆ.9) 43ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ದಿನದಂತು ಅವರ ನೂತನ ‘ಮಹರ್ಷಿ’ ತೆಲುಗು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ತಮ್ಮ ಟ್ವಿಟರ್‌ನಲ್ಲಿ ಟೀಸರ್ ಶೇರ್ ಮಾಡಿರುವ ಮಹೇಶ್ ಬಾಬು, “ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಹೀಗೇ ಬೆಂಗಾವಲಾಗಿರಲಿ,” ಎಂದಿದ್ದಾರೆ. ‘ಭರತ್‌ ಅನೆ ನೇನು’ ಯಶಸ್ವಿ ಚಿತ್ರದ ನಂತರ ತಯಾರಾಗುತ್ತಿರುವ ಮಹೇಶ್ ಬಾಬು ಸಿನಿಮಾ ಇದು. ಈ ಫಸ್ಟ್‌ ಲುಕ್‌ ವಿಡಿಯೋದಲ್ಲಿ ಮಹೇಶ್‌ ಕಾಲೇಜ್ ವಿದ್ಯಾರ್ಥಿಯಂತೆ ಕಾಣಿಸಿಕೊಂಡಿದ್ದು, ಈ ಲುಕ್‌ ಅವರ 43ರ ಹರೆಯವನ್ನು ಮರೆಮಾಚುವಂತಿದೆ.

ಇದನ್ನೂ ಓದಿ : ಸೆಟ್‌ ವಿಸಿಟ್‌ ವಿಡಿಯೋ | ನಿಖಿಲ್‌-ರಚಿತಾ ಅಭಿನಯದ ‘ಸೀತಾರಾಮ ಕಲ್ಯಾಣ’

43 ಸೆಕೆಂಡುಗಳ ಈ ಟೀಸರ್‌, ಮಹೇಶ್ ಬಾಬು ಅವರ ಪಾತ್ರವನ್ನು ಪರಿಚಯಿಸುತ್ತದೆ. ತಲೆಗೂದಲಿನಲ್ಲಿ ಕೈಯಾಡಿಸುತ್ತ ಕಾಲೇಜು ಕಾರಿಡಾರಿನಲ್ಲಿ ಮಹೇಶ್ ನಡೆದಿದ್ದಾರೆ. ಕೈಲಿ ಲ್ಯಾಪ್‌ಟಾಪ್ ಹಿಡಿದು ಯುವತಿಯೊಬ್ಬಳಿಗೆ ಸ್ಮೈಲ್ ಮಾಡುವ ಮಹೇಶ್ ಬಾಬು, ಮತ್ತೊಮ್ಮೆ ಲವರ್ ಬಾಯ್‌ ಇಮೇಜಿಗೆ ಮರಳಿರುವಂತಿದೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಚಿತ್ರದ ನಾಯಕಿಯಾಗಿ ಕನ್ನಡ ಮೂಲದ ಪೂಜಾ ಹೆಗ್ಡೆ ನಟಿಸಿದ್ದಾರೆ. ನಟ ಅಲ್ಲು ನರೇಶ್‌ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಟೀಸರ್ ಟ್ವೀಟ್ ಮಾಡಿರುವ ನಿರ್ದೇಶಕ ವಂಶಿ ಪೈಡಿಪಲ್ಲಿ, “ಇದು ಮಹೇಶ್ ಬಾಬು ಅವರ 25ನೇ ಸಿನಿಮಾ. ಈ ಚಿತ್ರದಿಂದ ಅವರ ಸಿನಿಮಾ ಹಾದಿ ಮತ್ತಷ್ಟು ಹೊಳಪು ಪಡೆಯಲಿದೆ,” ಎಂದಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More