‘ಅಮ್ಮನ ಮನೆ’ಯೊಂದಿಗೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ ರಾಘವೇಂದ್ರ ರಾಜಕುಮಾರ್

ನಟ ರಾಘವೇಂದ್ರ ರಾಜಕುಮಾರ್ ಹದಿನೈದು ವರ್ಷಗಳ ನಂತರ ‘ಅಮ್ಮನ ಮನೆ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ನಿಖಿಲ್ ಮಂಜು ನಿರ್ದೇಶನದ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ತಮ್ಮ ವಯಸ್ಸಿಗೆ ಹೊಂದುವಂತಹ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ

ರಾಘವೇಂದ್ರ ರಾಜಕುಮಾರ್‌ ‘ಅಮ್ಮನ ಮನೆ’ ಚಿತ್ರದೊಂದಿಗೆ ತೆರೆಗೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಇಂದು ಚಿತ್ರದಲ್ಲಿನ ಅವರ ಫಸ್ಟ್‌ ಲುಕ್‌ ರಿವೀಲ್‌ ಆಗಿದೆ. ಮಧ್ಯವಯಸ್ಕ ವ್ಯಕ್ತಿಯ ಲುಕ್‌ನಲ್ಲಿನ ಈ ಗೆಟಪ್‌ನಲ್ಲಿ ಮೊದಲ ನೋಟಕ್ಕೆ ಅವರ ಗುರುತು ಸಿಗದು. ಫಸ್ಟ್ ಲುಕ್‌ನ ಹಲವು ಫೋಟೋಗಳು ಬಿಡುಗಡೆಯಾಗಿದ್ದು, ಪಾತ್ರದ ಬಗ್ಗೆ ಕುತೂಹಲ ಮೂಡಿಸುತ್ತವೆ. ದಾಡಿ ಮತ್ತು ಕಪ್ಪು-ಬಿಳಿ ಕೂದಲಿನ ನೀಟಾಗಿ ಬಾಚಿದ ವಿಗ್‌ನಲ್ಲಿ ರಾಘವೇಂದ್ರ ಆತ್ಮವಿಶ್ವಾಸದ ವ್ಯಕ್ತಿಯಂತೆ ಗೋಚರಿಸುತ್ತಾರೆ. “ಚಿತ್ರದಲ್ಲಿನ ಅವರ ಪಾತ್ರವನ್ನೇ ಫೋಟೋಗಳು ಹೇಳುತ್ತವೆ,” ಎನ್ನುತ್ತಾರೆ ನಿರ್ದೇಶಕ ನಿಖಿಲ್ ಮಂಜು.

“ರಾಘವೇಂದ್ರ ರಾಜ್‌ ನಿಜ ಬದುಕಿನಲ್ಲೂ ಅಪಾರ ಆತ್ಮವಿಶ್ವಾಸವುಳ್ಳ ವ್ಯಕ್ತಿ. ಅನಾರೋಗ್ಯದ ಸನ್ನಿವೇಶಗಳನ್ನು ತಮ್ಮ ಮನಸ್ಥೈರ್ಯದಿಂದಲೇ ಗೆದ್ದವರು. ಚಿತ್ರದಲ್ಲಿಯೂ ಅವರ ಪಾತ್ರ ಹಾಗೆಯೇ ಇರುತ್ತದೆ. ‘ಅಮ್ಮನ ಮನೆ’ ಚಿತ್ರದಲ್ಲಿ ತಾಯಿ ಮತ್ತು ಮಗನ ಕತೆ ಇದೆ. ಸಂದಿಗ್ಧ ಸ್ಥಿತಿಯಲ್ಲೂ ಸಂಕಷ್ಟಗಳಿಗೆ ಬಲಿಯಾಗದೆ ಎದುರಿಸಿ ನಿಲ್ಲುವ ವ್ಯಕ್ತಿಯಾಗಿ ರಾಘಣ್ಣನ ಪಾತ್ರವಿರುತ್ತದೆ. ಇತರರಿಗೆ ಪ್ರೇರಣೆ ಆಗುವಂತಹ ಪಾತ್ರವಿದು,” ಎಂದು ತಮ್ಮ ಸಿನಿಮಾ ಕುರಿತು ಹೇಳುತ್ತಾರೆ ನಿರ್ದೇಶಕ ನಿಖಿಲ್‌. ಇದೇ ತಿಂಗಳ ಹದಿನೈದರಂದು ಚಿತ್ರಕ್ಕೆ ಅಧಿಕೃತ ಚಾಲನೆ ಸಿಗಲಿದೆ. ನಿಖಿಲ್ ಮಂಜು ಅವರೇ ಚಿತ್ರಕತೆ ರಚಿಸಿದ್ದು, ಬಿ ಶಿವಾನಂದ್ ಸಂಭಾಷಣೆ ರಚಿಸಿದ್ದಾರೆ. ಸಮೀರ್ ಕುಲಕರ್ಣಿ ಸಂಗೀತ ಸಂಯೋಜಿಸುತ್ತಿದ್ದು, ಛಾಯಾಗ್ರಹಣದ ಹೊಣೆ ಪಿ ವಿ ಆರ್ ಸ್ವಾಮಿ ಅವರದು.

ಮತ್ತೊಮ್ಮೆ "ಗೊಂಬೆ"ಗೆ ಜೀವ ತುಂಬಿದ ಅಪ್ಪಾಜಿ.....☺💃💕

Posted by Vinay Rajkumar on Tuesday, April 24, 2018

“ಇತ್ತೀಚೆಗಷ್ಟೇ ಅವರು ‘ಆಡುಗ ಗೊಂಬೆ’ ಚಿತ್ರದ ಗೀತೆಯೊಂದನ್ನು ಹಾಡಿದ್ದರು. ಈಗ ಕ್ಯಾಮೆರಾ ಎದುರು ಅಭಿನಯಿಸಲು ಸಿದ್ಧರಾಗಿದ್ದಾರೆ. ಅಪ್ಪಾಜಿ ತೆರೆಗೆ ಮರಳುತ್ತಿರುವುದು ವೈಯಕ್ತಿಕವಾಗಿ ನನಗೆ ಅಪಾರ ಸಂತಸ ತಂದಿದೆ” ಎನ್ನುತ್ತಾರೆ ರಾಘವೇಂದ್ರ ರಾಜ್‌ ಪುತ್ರ, ನಟ ವಿನಯ್‌ ರಾಜಕುಮಾರ್‌. ಹಿರಿಯ ನಿರ್ದೇಶಕ ಭಗವಾನ್‌ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಆಡುವ ಗೊಂಬೆ’ ಚಿತ್ರದ ಶೀರ್ಷಿಕೆ ಗೀತೆಯನ್ನು ರಾಘವೇಂದ್ರ ರಾಜಕುಮಾರ್ ಹಾಡಿದ್ದರು. ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆಗೆ ಒಳಗಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲು ಸೃಷ್ಟಿಸಿದ ‘ನಂಜುಂಡಿ ಕಲ್ಯಾಣ’ ಚಿತ್ರದ ಹೀರೋ ರಾಘವೇಂದ್ರ ರಾಜಕುಮಾರ್‌ ಇದೀಗ ತೆರೆಗೆ ಮರಳುತ್ತಿದ್ದಾರೆ.

ಇದನ್ನೂ ಓದಿ : ಹಿತಾ ಮನದ ಮಾತು | ಏಳುಬೀಳುಗಳ ನಡುವೆ ಶುರುವಾದ ಸಿನಿಪಯಣ ತಾಳ್ಮೆ ಕಲಿಸಿದೆ

‘ಅಮ್ಮನ ಮನೆ’ ಚಿತ್ರದ ರಾಘವೇಂದ್ರ ರಾಜಕುಮಾರ್‌ ಲುಕ್‌ ಫೋಟೋಗಳು

ದ್ವಾರಕೀಶ್ ಕೋಪದಲ್ಲಿ ಹೇಳಿದರೂ ಶಂಕರ್ ನಾಗ್ ಮಾತ್ರ ಬೇಸರಿಸಿಕೊಳ್ಳಲಿಲ್ಲ!
ದ್ವಾರಕೀಶ್‌- 76 | ಶೂಟಿಂಗ್‌ನಲ್ಲಿ ಕೊರಳಿಗೆ ಹಾವು ಸುತ್ತಿಕೊಂಡಿದ್ದ ಪ್ರಚಂಡ ಕುಳ್ಳ
ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್ ಜೊನಾಸ್‌ ಸಂಬಂಧಕ್ಕೆ ಅಧಿಕೃತ ಮುದ್ರೆ
Editor’s Pick More