ವೆಬ್‌ ಸರಣಿಯಲ್ಲಿ ಇಂದಿರಾ ಗಾಂಧಿ ಪಾತ್ರ ನಿರ್ವಹಿಸಲಿರುವ ವಿದ್ಯಾ ಬಾಲನ್

ವೆಬ್‌ ಸರಣಿಯೊಂದರಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್‌ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಗರಿಕಾ ಘೋಷ್‌ ಅವರ ‘ಇಂದಿರಾ: ಇಂಡಿಯಾಸ್ ಮೋಸ್ಟ್ ಪವರ್‌ಫುಲ್‌ ಪ್ರೈಮ್ ಮಿನಿಸ್ಟರ್‌’ ಕೃತಿಯನ್ನು ಆಧರಿಸಿ ತಯಾರಾಗುತ್ತಿರುವ ಸರಣಿ ಇದು

ಬಾಲಿವುಡ್ ನಟಿ ವಿದ್ಯಾ ಬಾಲನ್ ವೆಬ್ ಸರಣಿಯಲ್ಲಿ‌ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಸುದ್ದಿಯನ್ನು ಅವರು ಖಚಿತಪಡಿಸಿದ್ದಾರೆ. ಸಾಗರಿಕಾ ಘೋಷ್‌ ಅವರ ‘ಇಂದಿರಾ: ಇಂಡಿಯಾಸ್‌ ಮೋಸ್ಟ್‌ ಪವರ್ಫುಲ್‌ ಪ್ರೈಮ್ ಮಿನಿಸ್ಟರ್‌’ ಕೃತಿಯನ್ನು ಆಧರಿಸಿ ಸರಣಿ ತಯಾರಾಗಲಿದೆ. ಈ ಕೃತಿಯನ್ನು ಆಧರಿಸಿ ಸಿನಿಮಾ ಮಾಡುವುದೆಂದು ಮೊದಲು ನಿರ್ಧಾರವಾಗಿತ್ತಂತೆ. ಅದರೆ ಕೃತಿಯಲ್ಲಿ ಹೆಚ್ಚು ಕಂಟೆಂಟ್ ಇದ್ದು, ವೆಬ್ ಸರಣಿಯೇ ಸೂಕ್ತ ಎಂದು ಯೋಜನೆ ಬದಲಾಗಿದೆ.

“ಕೃತಿಯಲ್ಲಿ ಅತಿ ಹೆಚ್ಚು ಸನ್ನಿವೇಶಗಳನ್ನು ಸೃಷ್ಟಿಸಬಹುದಾದಷ್ಟು ಕಂಟೆಂಟ್ ಇದೆ. ಹಾಗಾಗಿ ವೆಬ್ ಸರಣಿ ಮಾಡುವುದೆಂದು ನಿರ್ಧಾರವಾಗಿದೆ. ಎಷ್ಟು ಸೀಸನ್‌ಗಳು, ಸಂಚಿಕೆಗಳನ್ನು ಮಾಡುವುದು ಎನ್ನುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಸದ್ಯ ತಾಂತ್ರಿಕ ಕೆಲಸಗಳು ನಡೆಯುತ್ತಿವೆ,” ಎನ್ನುತ್ತಾರೆ ವಿದ್ಯಾ. ರೋನ್ನಿ ಸ್ಕ್ರ್ಯೂವಾಲಾ ಸರಣಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಪ್ರಾಥಮಿಕ ಹಂತದ ಕೆಲಸಗಳು ನಡೆಯುತ್ತಿದ್ದು, ಚಿತ್ರೀಕರಣದ ದಿನಾಂಕವಿನ್ನೂ ಘೋಷಣೆಯಾಗಿಲ್ಲ. ಈಗಾಗಲೇ ನಿರ್ಮಾಪಕರು ಕೃತಿಯ ಹಕ್ಕು ಖರೀದಿಸಿದ್ದಾರೆ. ಪ್ರತ್ಯೇಕವಾಗಿ ಗಾಂಧಿ ಕುಟುಂಬದವರನ್ನು ಸಂಪರ್ಕಿಸಿ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದಿದ್ದಾರೆ ನಿರ್ಮಾಪಕ ರೋನ್ನಿ.

ಇದನ್ನೂ ಓದಿ : ಬಾಲಿವುಡ್‌ ಗೀತೆ ಹಾಡಿದ ಪಾಕಿಸ್ತಾನಿ ಗಾಯಕ ಅತಿಫ್‌ ವಿರುದ್ಧ ಟ್ರಾಲ್

ವೆಬ್‌ ಸರಣಿಯಲ್ಲಿನ ಇಂದಿರಾ ಪಾತ್ರಕ್ಕಾಗಿ ವಿದ್ಯಾ ಬಾಲನ್‌ ಸಿದ್ಧತೆ ನಡೆಸಿದ್ದಾರೆ. ಈ ಮಧ್ಯೆ ಅವರು ‘ಎನ್‌ಟಿಆರ್‌’ ತೆಲುಗು ಬಯೋಪಿಕ್ ಸಿನಿಮಾದಲ್ಲಿ ಎನ್‌ಟಿಆರ್ ಪತ್ನಿ ಬಸವತಾರಕಮ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. “ಇದು ನನ್ನ ಮೊದಲ ತೆಲುಗು ಸಿನಿಮಾ. ನಾನೆಂದೂ ತೆಲುಗು ಭಾಷೆಯಲ್ಲಿ ಸಂಭಾಷಣೆ ಹೇಳಿಲ್ಲ. ತೆಲುಗು ಭಾಷೆ, ಪಾತ್ರದ ಬಗ್ಗೆ ನನಗೆ ಕುತೂಹಲವಿದೆ. ಹಿಂದೆ ಮಲಯಾಳಂ ಚಿತ್ರವೊಂದರ ಪುಟ್ಟ ಪಾತ್ರದಲ್ಲಿ ನಟಿಸಿದ್ದೆ. ಅದರೆ, ಈಗ ತೆಲುಗಿನಲ್ಲಿ ದೊಡ್ಡ ಪಾತ್ರವಿದೆ. ಇದೊಂದು ರೀತಿ ಸವಾಲು,” ಎನ್ನುತ್ತಾರೆ ವಿದ್ಯಾ ಬಾಲನ್‌.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More