ಜನುಮದಿನ | ಶ್ರೀದೇವಿ ಅಭಿನಯದ ಜನಪ್ರಿಯ ಹಿಂದಿ ಸಿನಿಮಾಗಳ ವಿಡಿಯೋ ಹಾಡುಗಳು

ತೊಂಬತ್ತರ ದಶಕದಲ್ಲಿ ಬಾಲಿವುಡ್‌ನ ಸ್ಟಾರ್ ಹಿರೋಯಿನ್ ಎನಿಸಿಕೊಂಡವರು ಶ್ರೀದೇವಿ. ಅವರಿಂದು ನಮ್ಮೊಂದಿಗೆ ಇದ್ದಿದ್ದರೆ 55ನೇ ಜನ್ಮದಿನ (ಆ.13) ಆಚರಿಸಿಕೊಳ್ಳುತ್ತಿದ್ದರು. ಅವರ ಅಭಿನಯದ ಹಲವಾರು ಸೂಪರ್‌ಹಿಟ್ ಹಾಡುಗಳ ಪಟ್ಟಿಯಲ್ಲಿನ ಆಯ್ದ ಹತ್ತು ವಿಡಿಯೋ ಹಾಡುಗಳು ಇಲ್ಲಿವೆ

ಶ್ರೀದೇವಿ ಹಿಂದಿ ಸಿನಿಮಾ ಅಭಿಯಾನ ಆರಂಭವಾಗಿದ್ದು ‘ಜ್ಯೂಲಿ’ ಚಿತ್ರದ ಬಾಲನಟಿಯಾಗಿ. ‘ಸೋಲ್ವಾ ಸಾವನ್’ (1979) ಚಿತ್ರದೊಂದಿಗೆ ನಾಯಕಿಯಾಗಿ ಬಾಲಿವುಡ್‌ಗೆ ಪರಿಚಯವಾದರು. ಈ ಚಿತ್ರದ ಸೋಲಿನೊಂದಿಗೆ ಶ್ರೀದೇವಿ ತೆಲುಗು ಚಿತ್ರರಂಗಕ್ಕೆ ವಾಪಸಾದರು. ‘ಹಿಮ್ಮತ್‌ವಾಲಾ’ (1983) ಹಿಂದಿ ಸಿನಿಮಾ ಅವರ ನಟನಾ ಜೀವನಕ್ಕೆ ಮಹತ್ವದ ತಿರುವು. ಜಿತೇಂದ್ರ ಹೀರೋ ಆಗಿದ್ದ ಚಿತ್ರದೊಂದಿಗೆ ಆಕೆ ಸ್ಟಾರ್ ಹಿರೋಯಿನ್ ಆದರು. ಮುಂದೆ ಶ್ರೀದೇವಿ-ಜಿತೇಂದ್ರ ಜೋಡಿಯ ‘ತೋಫಾ’ ಮತ್ತು ‘ಮಾವಾಲಿ’ ಚಿತ್ರಗಳೂ ಯಶಸ್ವಿಯಾದವು. ಸತತ ಮೂರು ಚಿತ್ರಗಳ ಗೆಲುವಿನೊಂದಿಗೆ ಶ್ರೀದೇವಿ ಸ್ಟಾರ್‌ ಎನಿಸಿಕೊಂಡರು.

ಅದ್ಭುತವಾಗಿ ನೃತ್ಯ ಮಾಡುತ್ತಿದ್ದ ಶ್ರೀದೇವಿ, ಹಿಂದಿ ಚಿತ್ರರಂಗದ ನಂ.1 ನಟಿಯಾಗಿ ಸ್ಥಾಪಿತರಾದರು. ಅಲ್ಲಿಯವರೆಗೆ ರೇಖಾ, ಹೇಮಾಮಾಲಿನಿ ಅವರ ಮುಡಿಯಲ್ಲಿದ್ದ ಕಿರೀಟ ಶ್ರೀದೇವಿ ಮುಡಿಗೇರಿತು. ಮುಂದೆ ಮಾಧುರಿ ದೀಕ್ಷಿತ್ ಸ್ಟಾರ್‌ ನಾಯಕನಟಿಯಾಗಿ ಗುರುತಿಸಿಕೊಳ್ಳುವವರೆಗೂ ಶ್ರೀದೇವಿ ಹಿಂದಿ ಚಿತ್ರರಂಗದ ಮುಂಚೂಣಿ ನಾಯಕಿಯಾಗಿದ್ದರು. ಮದುವೆ, ಸಂಸಾರಕ್ಕೆಂದು ನಟನೆಗೆ ವಿದಾಯ ಹೇಳಿದ್ದ ನಟಿ, ‘ಇಂಗ್ಲಿಷ್‌ ವಿಂಗ್ಲಿಷ್‌’ (2012) ಹಿಂದಿ ಚಿತ್ರದೊಂದಿಗೆ ತೆರೆಗೆ ಮರಳಿದ್ದರು. 2018ರ ಫೆಬ್ರವರಿ 14ರಂದು ಅವರು ಅಕಾಲಿಕ ನಿಧನರಾದರು. ‘ಮಾಮ್‌’ (2017) ಹಿಂದಿ ಚಿತ್ರದ ಉತ್ತಮ ನಟನೆಗೆ ಅವರಿಗೆ ಮರಣೋತ್ತರ ಶ್ರೇಷ್ಠ ನಟಿ ರಾಷ್ಟ್ರಪ್ರಶಸ್ತಿ ಗೌರವ ಘೋಷಣೆಯಾಯ್ತು. ಶ್ರೀದೇವಿ ಜನಪ್ರಿಯ ಸಿನಿಮಾ ಹಾಡುಗಳ ಪೈಕಿ ಆಯ್ದ ಹತ್ತು ವಿಡಿಯೋ ಹಾಡುಗಳು ಇಲ್ಲಿವೆ.

ಗೀತೆ: ಏಕ್ ದಫಾ ಏಕ್ ಜಂಗಲ್‌ ಥಾ | ಸಿನಿಮಾ: ಸದ್ಮಾ(1983) | ಸಾಹಿತ್ಯ: ಗುಲ್ಜಾರ್ | ಸಂಗೀತ: ಇಳಯರಾಜ | ಗಾಯನ: ಕಮಲ ಹಾಸನ್‌, ಶ್ರೀದೇವಿ

ಗೀತೆ: ಮೇ ತೇರಿ ದುಷ್ಮನ್‌ | ಸಿನಿಮಾ: ನಾಗೀನಾ (1986) | ಸಾಹಿತ್ಯ: ಆನಂದ್ ಭಕ್ಷಿ | ಸಂಗೀತ: ಲಕ್ಷ್ಮೀಕಾಂತ್ ಪ್ಯಾರೇಲಾಲ್‌ | ಗಾಯನ: ಲತಾ ಮಂಗೇಶ್ಕರ್‌

ಗೀತೆ: ತು ನಾ ಜಾ ಮೇರೆ ಬಾದ್‌ಷಾ | ಸಿನಿಮಾ: ಖುದಾ ಗವಾಹ್‌ (1992) | ಸಾಹಿತ್ಯ: ಆನಂದ್ ಭಕ್ಷಿ | ಸಂಗೀತ: ಲಕ್ಷ್ಮೀಕಾಂತ್ ಪ್ಯಾರೇಲಾಲ್‌ | ಗಾಯನ: ಅಲ್ಕಾ ಯಾಜ್ಞಿಕ್‌, ಮೊಹಮ್ಮದ್ ಅಜೀಜ್‌

ಗೀತೆ: ಕಬ್‌ ಆಯೇಗಾ ಮೇರೆ | ಸಿನಿಮಾ: ಬಂಜಾರನ್‌ (1991) | ಸಂಗೀತ: ಲಕ್ಷ್ಮೀಕಾಂತ್ ಪ್ಯಾರೇಲಾಲ್‌ | ಗಾಯನ: ಅಲ್ಕಾ ಯಾಜ್ಞಿಕ್‌

ಗೀತೆ: ಫೂಲ್ ಜಹಾ ಜಹಾ | ಸಿನಿಮಾ: ನಯಾ ಕದಮ್‌ (1984) | ಸಂಗೀತ: ಬಪ್ಪಿ ಲಹರಿ | ಗಾಯನ: ಕಿಶೋರ್ ಕುಮಾರ್, ಆಶಾ ಬೋಸ್ಲೆ

ಇದನ್ನೂ ಓದಿ : ಚಿತ್ರನಿರ್ದೇಶಕ ಆರ್‌ಜಿವಿ ನಟಿ ಶ್ರೀದೇವಿಗೆ ಬರೆದ ಸೆಲ್ಯುಲಾಯ್ಡ್‌ ಪ್ರೇಮಪತ್ರ!

ಗೀತೆ: ಹವಾ ಹವಾಯಿ | ಸಿನಿಮಾ: ಮಿಸ್ಟರ್ ಇಂಡಿಯಾ (1987) | ಸಾಹಿತ್ಯ: ಜಾವೆದ್ ಆಖ್ತರ್‌ | ಸಂಗೀತ: ಲಕ್ಷ್ಮೀಕಾಂತ್ ಪ್ಯಾರೇಲಾಲ್‌ | ಗಾಯನ: ಕವಿತಾ ಕೃಷ್ಣಮೂರ್ತಿ

ಗೀತೆ: ಘರ್ ತೇರಿ ಆವೂಂಗಿ | ಸಿನಿಮಾ: ಘರ್ ಸನ್ಸಾರ್‌ (1986) | ಸಂಗೀತ: ರಾಜೇಶ್ ರೋಷನ್‌ | ಗಾಯನ: ಸಾಧನಾ ಸರ್ಗಮ್‌

ಗೀತೆ: ಮೇ ಹೂ ರೂಪ್‌ ಕಿ ರಾಣಿ | ಸಿನಿಮಾ: ರೂಪ್ ಕಿ ರಾಣಿ ಚೋರೋನ್ ಕಾ ರಾಜಾ (1983) | ಸಂಗೀತ: ಲಕ್ಷ್ಮೀಕಾಂತ್‌-ಪ್ಯಾರೇಲಾಲ್‌ | ಗಾಯನ: ಕವಿತಾ ಕೃಷ್ಣಮೂರ್ತಿ

ಗೀತೆ: ಸೂರಜ್ ನಾಚೆ ಸಾಗರ್ ನಾಚೆ | ಸಿನಿಮಾ: ಪತ್ಥರ್ ಕೆ ಇನ್ಸಾನ್‌ (1990) | ಸಂಗೀತ: ಬಪ್ಪಿ ಲಹರಿ | ಗಾಯನ: ಕವಿತಾ ಕೃಷ್ಣಮೂರ್ತಿ

ಗೀತೆ: ನವ್ರಾಯ್‌ ಮಾಝಿ | ಸಿನಿಮಾ: ಇಂಗ್ಲಿಷ್‌ ವಿಂಗ್ಲಿಷ್‌ (2012) | ಸಂಗೀತ: ಅಮಿತ್‌ ತ್ರಿವೇದಿ | ಗಾಯನ: ಸುನಿಧಿ ಚೌವ್ಹಾಣ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More