ಆತ್ಮೀಯ ಗೆಳತಿ ಸೋನಾಲಿ ಬೇಂದ್ರೆ ಜೊತೆಗಿನ ಫೋಟೋ ಟ್ವೀಟ್ ಮಾಡಿದ ಸುಸೆನ್ನಾ

ಬಾಲಿವುಡ್‌‌ ನಟಿ ಸೋನಾಲಿ ಬೇಂದ್ರೆ ನ್ಯೂಯಾರ್ಕ್‌ನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋನಾಲಿ ಅತ್ಮೀಯ ಗೆಳತಿ ಸುಸೆನ್ನಾ ಖಾನ್‌ ಅಲ್ಲಿಗೆ ತೆರಳಿ ಹಲವು ದಿನಗಳ ಕಾಲ ನಟಿಯ ಜೊತೆಗಿದ್ದರು. ಭಾರತಕ್ಕೆ ಮರಳಿದ ಸುಸೆನ್ನಾ, ಅಲ್ಲಿನ ಫೊಟೋಗಳನ್ನು ಶೇರ್ ಮಾಡಿದ್ದಾರೆ.

ಕ್ಯಾನ್ಸರ್‌ಗೆ ತುತ್ತಾಗಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಚಿಕಿತ್ಸೆಗಾಗಿ ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ದಾಖಲಾಗಿ ತಿಂಗಳುಗಳೇ ಕಳೆದಿವೆ. ಈ ಮಧ್ಯೆ, ಸೋನಾಲಿ ಬೇಂದ್ರೆ ಅವರ ಆತ್ಮೀಯ ಸ್ನೇಹಿತೆಯರಾದ ಸುಸೆನ್ನಾ ಖಾನ್ (ನಟ ಹೃತಿಕ್‌ ರೋಷನ್ ಮಾಜಿ ಪತ್ನಿ) ಮತ್ತು ಗಾಯಿತ್ರಿ ಜೋಷಿ ನ್ಯೂಯಾರ್ಕ್‌ಗೆ ಭೇಟಿ ನೀಡಿದ್ದರು. ಅಲ್ಲಿ ಸೋನಾಲಿ ಜೊತೆ ಸ್ನೇಹಿತರ ದಿನ ಆಚರಿಸಿದ್ದರು. ನ್ಯೂಯಾರ್ಕ್‌ನಲ್ಲಿ ಸೋನಾಲಿಯೊಂದಿಗೆ ಕಳೆದ ಕ್ಷಣಗಳ ಫೋಟೊಗಳನ್ನು ಶೇರ್ ಮಾಡಿರುವ ಸುಸೆನ್ನಾ, “ಜೀವನದ ಸಾಗರದಲ್ಲಿ ನಮಗೆ ಹಲವು ಬಾರಿ ಅನಿರೀಕ್ಷಿತ ಘಟನೆಗಳು ಎದುರಾಗುತ್ತವೆ. ಇವನ್ನೆಲ್ಲ ಸಮಾಧಾನವಾಗಿ ಎದುರಿಸುತ್ತ ನಾವು ಧೈರ್ಯದಿಂದ ದಡ ಸೇರಬೇಕು. ಖಂಡಿತವಾಗಿ ಸ್ನೇಹಿತೆ ಸೋನಾಲಿಗೆ ಮುಂದಿನ ದಿನಗಳು ಚೆನ್ನಾಗಿರುತ್ತವೆ,” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಶ್ವೇತಾ, ನವ್ಯಾ ಫೋಟೋ ಶೇರ್ ಮಾಡಿದ ಕರಣ್‌ ಜೋಹರ್‌; ಸ್ವಜನ ಪಕ್ಷಪಾತದ ಟೀಕೆ

ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ನಟಿ ಸೋನಾಲಿ ಬೇಂದ್ರೆ ಮೊನ್ನೆಯಷ್ಟೇ ಟ್ವಿಟರ್‌ನಲ್ಲಿ ತಮ್ಮ ಪುತ್ರನೊಂದಿಗಿನ ಪೋಟೋ ಶೇರ್ ಮಾಡಿದ್ದರು. ಜೊತೆಗೊಂದು ಅಚ್ಚರಿಯ ಸಂದೇಶವೂ ಇತ್ತು. ಚಿಕಿತ್ಸೆಗಾಗಿ ತಮ್ಮ ಕೂದಲು ತೆಗೆಸಿರುವ ಸೋನಾಲಿ, “ನಾನು ಈ ಕ್ಷಣ ತುಂಬಾ ಸಂತೋಷವಾಗಿದ್ದೇನೆ. ನನ್ನ ಸ್ನೇಹಿತರೇ ನನ್ನ ಶಕ್ತಿ. ಬ್ಯುಸಿ ಶೆಡ್ಯೂಲ್‌ ನಡುವೆಯೂ ನನ್ನನ್ನು ಭೇಟಿ ಮಾಡಿ, ನನ್ನಲ್ಲಿ ಒಂಟಿತನದ ಭಾವ ಮೂಡದಂತೆ ನೋಡಿಕೊಂಡ ನಿಮ್ಮಂಥ ಸ್ನೇಹಿತರನ್ನು ಪಡೆದ ನಾನು ನಿಜಕ್ಕೂ ಅದೃಷ್ಟವಂತೆ” ಎಂದು ಹೇಳಿಕೊಂಡಿದ್ದರು. ತಮ್ಮ ಸ್ನೇಹಿತೆಯರ ಜೊತೆಗೆ ಕಳೆದ ಮಧುರ ಕ್ಷಣಗಳ ಫೋಟೋಗಳನ್ನು ಅವರು ತಮ್ಮ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದರು.

ಸುಸೆನ್ನಾ ಶೇರ್ ಮಾಡಿದ ನ್ಯೂಯಾರ್ಕ್ ಫೋಟೋಗಳು

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More