ವಿಡಿಯೋ ಸ್ಟೋರಿ | ‘ಡಾಲಿ ಡೇ’ ಬೇಡ, ಸಂತ್ರಸ್ತರಿಗೆ ನೆರವಾಗಿ ಎಂದ ನಟ ಧನಂಜಯ್

ನಟ ಧನಂಜಯ್‌ ಅವರ ಹುಟ್ಟುಹಬ್ಬವನ್ನು (ಆಗಸ್ಟ್‌ 23) ‘ಡಾಲಿ ಡೇ’ ಎಂದು ಆಚರಿಸಲು ಅವರ ಅಭಿಮಾನಿಗಳು ನಿರ್ಧರಿಸಿದ್ದರು. ಇದೆಲ್ಲ ಬೇಡವೆಂದಿರುವ ಧನಂಜಯ್, ಇದು ಸಂಭ್ರಮಿಸುವ ಸಮಯವಲ್ಲ ಎಂದಿದ್ದಾರೆ. ಕೊಡಗು ಸಂತ್ರಸ್ತರಿಗೆ ನೆರವಾಗುವಂತೆ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ

‘ಟಗರು’ ಸಿನಿಮಾದ ದೊಡ್ಡ ಯಶಸ್ಸು ನಟ ಧನಂಜಯ್‌ ಅವರ ನಟನಾ ಬದುಕಿಗೆ ತಿರುವಾಯ್ತು. ಈ ಚಿತ್ರದಲ್ಲಿನ ‘ಡಾಲಿ’ ಪಾತ್ರದ ಮೂಲಕವೇ ಅಭಿಮಾನಿಗಳು ಅವರನ್ನು ಗುರುತಿಸುತ್ತಿದ್ದಾರೆ. ‘ಟಗರು’ ಗೆಲುವು ಅವರನ್ನು ತೆಲುಗು ಚಿತ್ರರಂಗಕ್ಕೂ ಕರೆದೊಯ್ದಿತು. ಸದ್ಯ ಅವರೀಗ ಖ್ಯಾತ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಬ್ಯಾನರ್‌ನಡಿ ತಯಾರಾಗುತ್ತಿರುವ ‘ಭೈರವ ಗೀತ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ, ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿರುವ ಆಕ್ಷನ್‌ ಎಂಟರ್‌ಟೇನರ್‌ ಇದು.

ರಾಜ್ಯದಲ್ಲಿ ಧನಂಜಯ್‌ ಅಭಿಮಾನಿಗಳು ಅವರ ಹುಟ್ಟುಹಬ್ಬದ ದಿನವನ್ನು ‘ಡಾಲಿ ಡೇ’ ಎಂದು ಆಚರಿಸಲು ಸಿದ್ಧತೆ ನಡೆಸಿದ್ದರು. ಈ ಕುರಿತು ತಿಂಗಳಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿತ್ತು. ಈಗ ಧನಂಜಯ್, “ಇದು ಸಂಭ್ರಮಾಚರಣೆಯ ಸಮಯವಲ್ಲ, ಸಹಾಯ ಮಾಡುವ ಸಮಯ,” ಎಂದಿದ್ದಾರೆ. “ಕೊಡಗು, ಕೇರಳದ ಪ್ರವಾಹದಿಂದಾಗಿ ಜನರು ಸಂತ್ರಸ್ತರಾಗಿದ್ದಾರೆ. ಅವರಿಗೆ ನಮ್ಮ ಕೈಲಾದ ನೆರವು ನೀಡಬೇಕಿದೆ. ಹುಟ್ಟುಹಬ್ಬಕ್ಕೆಂದು ಖರ್ಚು ಮಾಡುವ ಹಣದ ಜೊತೆ ಮತ್ತಷ್ಟು ಸೇರಿಸಿ ನನಗೆ ಕೊಡಿ. ಈ ಹಣ ಸಂತ್ರಸ್ತರ ನೆರವಿಗೆ ಬಳಕೆಯಾಗಲಿ. ಇದು ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆಯಾಗುತ್ತದೆ,” ಎಂದಿದ್ದಾರೆ ಧನಂಜಯ್‌.

ಇದನ್ನೂ ಓದಿ : ಪ್ರವಾಹ ಪೀಡಿತ ಕೊಡಗು ಜನತೆಗೆ ಕೂಡಲೇ ಸ್ಪಂದಿಸಲು ತಾರೆಯರ ಮನವಿ

‘ಭೈರವ ಗೀತ’ ಲುಕ್‌: ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ತಮ್ಮ ನಿರ್ಮಾಣದಲ್ಲಿ ಧನಂಜಯ್ ನಟಿಸುತ್ತಿರುವ ದ್ವಿಭಾಷಾ ಸಿನಿಮಾ ‘ಭೈರವ ಗೀತ’ ಪೋಸ್ಟರ್‌ಗಳನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಈ ಹಿಂದೆ ಧನಂಜಯ್‌ ಮತ್ತು ನಾಯಕಿ ಇರಾ ಲುಕ್‌ಗಳನ್ನು ಶೇರ್ ಮಾಡಿದ್ದ ವರ್ಮಾ, ಮೊನ್ನೆ ಸಹಕಲಾವಿದರೊಂದಿಗಿನ ಧನಂಜಯ್ ಫೋಟೋ ಹಾಕಿದ್ದರು. “ಪ್ರತಿಭಾವಂತ ಯುವಕ ಸಿದ್ಧಾರ್ಥ್‌ ಅವರನ್ನು ಹತ್ತು ವರ್ಷದಿಂದ ನೋಡುತ್ತಿದ್ದೇನೆ. ಅವರು ಭರವಸೆಯ ತಂತ್ರಜ್ಞ. ಇಬ್ಬರೂ ಒಗ್ಗೂಡಿರುವುದು ಅದೃಷ್ಟವೆಂದೇ ಹೇಳಬೇಕು,” ಎಂದಿದ್ದಾರೆ ವರ್ಮಾ.

ನಿರ್ದೇಶಕ ಆರ್‌ಜಿವಿ ಶೇರ್ ಮಾಡಿರುವ ‘ಭೈರವ ಗೀತ’ ಸಿನಿಮಾ ಲುಕ್‌ಗಳು

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More