ಟ್ರೈಲರ್‌‌ | ಟೆಲಿಫಿಲ್ಮ್ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಶೇಕ್ಸ್‌ಪಿಯರ್‌ನ ‘ಕಿಂಗ್‌ ಲಿಯರ್’

ಶೇಕ್ಸ್‌ಪಿಯರ್‌ ರಚಿತ ‘ದಿ ಟ್ರ್ಯಾಜಿಡಿ ಆಫ್‌ ಕಿಂಗ್ ಲಿಯರ್‌’ ಆಧರಿಸಿ ನಾಟಕ, ಸಿನಿಮಾಗಳು ತಯಾರಾಗಿವೆ. ಈಗ ಮತ್ತೊಮ್ಮೆ ಈ ಕೃತಿ ಟೆಲಿಫಿಲ್ಮ್ ಆಗಿ ಅಮೇಜಾನ್‌ ಪ್ರೈಂನಲ್ಲಿ ಸ್ಟ್ರೀಮ್ ಆಗಲಿದೆ. ಆಂಥೋನಿ ಹಾಪ್‌ಕಿನ್ಸ್ ಪ್ರಮುಖ ಪಾತ್ರದಲ್ಲಿರುವ ‘ಕಿಂಗ್‌ ಲಿಯರ್‌’ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ

ಶೇಕ್ಸ್‌ಪಿಯರ್‌ ಕೃತಿ ‘ದಿ ಟ್ರ್ಯಾಜಿಡಿ ಆಫ್‌ ಕಿಂಗ್ ಲಿಯರ್‌’ ಆಧರಿಸಿ ತಯಾರಾಗಿರುವ ಟೆಲಿಫಿಲ್ಮ್ ಟ್ರೈಲರ್ ಬಿಡುಗಡೆಯಾಗಿದೆ. ಅಮೇಜಾನ್‌ ಪ್ರೈಂನಲ್ಲಿ ಸೆಪ್ಟೆಂಬರ್‌ 28ರಂದು ಸ್ಟ್ರೀಮ್ ಆಗಲಿರುವ ಸಿನಿಮಾದ ಶೀರ್ಷಿಕೆ ಪಾತ್ರದಲ್ಲಿ ಜನಪ್ರಿಯ ಹಾಲಿವುಡ್ ನಟ ಆಂಥೋನಿ ಹಾಪ್‌ಕಿನ್ಸ್‌ ನಟಿಸುತ್ತಿದ್ದಾರೆ. ಎಮ್ಮಾ ಥಾಮ್ಸನ್‌, ಎಮಿಲಿ ವಾಟ್ಸನ್‌, ಜಿಮ್ ಬ್ರಾಡ್‌ಬೆಂಟ್‌ ಮತ್ತಿತರ ಜನಪ್ರಿಯ ನಟ-ನಟಿಯರು ಅಭಿನಯಿಸಿದ್ದಾರೆ. ಈ ಜನಪ್ರಿಯ ತಾರಾಬಳಗವೇ ‘ಕಿಂಗ್ ಲಿಯರ್‌’ನ ಪ್ರಮುಖ ಆಕರ್ಷಣೆಯಾಗಿದೆ.

ಇದನ್ನೂ ಓದಿ : ಟೀಸರ್‌ | ವೀರ ಸ್ವಾತಂತ್ರ್ಯ ಯೋಧ ‘ಸೈರಾ ನರಸಿಂಹ ರೆಡ್ಡಿ’ಯಾಗಿ ‌ಚಿರಂಜೀವಿ

ಗಮನ ಸೆಳೆಯುವ ಟ್ರೈಲರ್‌, ಶೇಕ್ಸ್‌ಪಿಯರ್‌ ಅವರ ಕೃತಿಗಳು ಸಾರ್ವಕಾಲಿಕ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸುತ್ತದೆ. 17ನೇ ಶತಮಾನದಲ್ಲಿ ರಚಿತವಾದ ಕೃತಿಯಿದು. ಈ ಕೃತಿಯನ್ನು ಆಧರಿಸಿ ಜಗತ್ತಿನ ಹಲವು ಭಾಷೆಗಳಲ್ಲಿ ನಾಟಕಗಳು, ಸಿನಿಮಾಗಳು ತಯಾರಾಗಿವೆ. ಈಗ 21ನೇ ಶತಮಾನಕ್ಕೂ ನಾಟಕ ಪ್ರಸ್ತುತವೆನಿಸುತ್ತದೆ. ರಿಚರ್ಡ್‌ ಐರ್‌ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದ ಟ್ರೈಲರ್ ಅತ್ಯುತ್ತಮ ಹಿನ್ನೆಲೆ ಸಂಗೀತ ಮತ್ತು ಮೇಕಿಂಗ್‌ನಲ್ಲಿನ ಶ್ರೀಮಂತಿಕೆಯಿಂದ ಗಮನ ಸೆಳೆಯುತ್ತದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More