ವಿಡಿಯೋ ಸ್ಟೋರಿ | ಯುವ ತಂತ್ರಜ್ಞರಿಗೆ ನೆರವಾಗಲು ಕಿರು ಚಿತ್ರೋತ್ಸವ

ಸಿನಿಮಾ ನಿರ್ದೇಶನ ಮಾಡುವ ಕನಸು ಹೊತ್ತು ಬರುವವರಿಗೆ ಕಿರುಚಿತ್ರಗಳು ಪ್ರವೇಶ ದೊರಕಿಸುತ್ತವೆ. ಕಿರುಚಿತ್ರೋತ್ಸವಗಳು ಯುವ ತಂತ್ರಜ್ಞರಿಗೆ ನೆರವಾಗುತ್ತವೆ. ಈಗ ಮತ್ತೊಂದು ಚಿತ್ರೋತ್ಸವ ಆಯೋಜನೆಗೊಂಡಿದ್ದು, ನಟಿ ಸೋನು ಗೌಡ ಚಿತ್ರೋತ್ಸವದ ರಾಯಭಾರಿದ್ದಾರೆ

ಕೆಲವೇ ನಿಮಿಷಗಳಲ್ಲಿ ಕೂತುಹಲ ಕೆರಳಿಸುವ, ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಿರುಚಿತ್ರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಕಿರುಚಿತ್ರಗಳ ಮೂಲಕ ಗಮನ ಸೆಳೆದ ಹಲವರು ಚಿತ್ರನಿರ್ದೇಶಕರಾಗಿ ಯಶಸ್ಸು ಕಂಡಿದ್ದಾರೆ. ಸಾಕಷ್ಟು ಬಾರಿ ಕಿರುಚಿತ್ರ ತಯಾರಿಸುವರಿಗೆ ಸೂಕ್ತ ವೇದಿಕ ಸಿಗದು. ಕನ್ನಡದ ಪ್ರತಿಭೆಗಳಿಗೆ ಐಫಾ, ಸೈಮಾದಂತಹ ದೊಡ್ಡ ಚಿತ್ರೋತ್ಸವಗಳಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶಿಸುವುದು ಕನಸಿನ ಮಾತು. ಈ ನಿಟ್ಟಿನಲ್ಲಿ ಕ್ರಿಯಾಶೀಲರಿಗೆ ಅವಕಾಶ ಕಲ್ಪಿಸುವ ಹಾದಿಯಲ್ಲಿ ಸ್ಟೋನ್ಡ್‌ ಮಂಕಿ ಎಂಟರ್‌ಟೇನ್‌ಮೆಂಟ್‌ ಹೊಸ ಪ್ರಯತ್ನಕ್ಕೆ ಅಣಿಯಾಗಿದೆ. ಅವರು ಕನ್ನಡದಲ್ಲಿ ಮೊದಲ ಬಾರಿಗೆ ಜಾಗತಿಕ ಮಟ್ಟದ ಕಿರುಚಿತ್ರೋತ್ಸವ ಹಮ್ಮಿಕೊಳ್ಳುತ್ತಿದ್ದಾರೆ.

ಈ ಆಲೋಚನೆಯ ಹಿಂದಿನ ರೂವಾರಿಗಳಲ್ಲೊಬ್ಬರು ‘ದಯವಿಟ್ಟು ಗಮನಿಸಿ’ ಸಿನಿಮಾ ಖ್ಯಾತಿಯ ನಿರ್ದೇಶಕ ರೋಹಿತ್‌ ಪದಕಿ. ತಮ್ಮ ಯೋಜನೆಯ ಬಗ್ಗೆ ಮಾತನಾಡುತ್ತ, “ನಾನು ಸೇರಿದಂತೆ ಇಂದು ಚಿತ್ರನಿರ್ದೇಶಕರಾಗಿರುವ ಹಲವರಿಗೆ ಕಿರುಚಿತ್ರಗಳೇ ಮೊದಲ ಹಾದಿ ತೆರೆದುದ್ದು. ಹಲವು ಬಾರಿ ಕ್ರಿಯಾಶೀಲ ಮನಸ್ಸುಗಳಿಗೆ ತಮ್ಮ ಕಿರುಚಿತ್ರಗಳನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಸಿಗುವುದಿಲ್ಲ. ಅಂಥವರಿಗಾಗಿ ಕಿರುಚಿತ್ರೋತ್ಸವ ನೆರವಾಗಲಿದೆ,” ಎನ್ನುತ್ತಾರೆ. ಚಿತ್ರೋತ್ಸವದಲ್ಲಿ ಕನ್ನಡದ ಚಿತ್ರಗಳಿಗೆ ಮತ್ತು ಕನ್ನಡದ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಉಳಿದಂತೆ ತಮಿಳು, ತೆಲುಗು ಸೇರಿದಂತೆ ಇತರ ಭಾಷೆಗಳ ಚಿತ್ರಗಳನ್ನೂ ಪ್ರದರ್ಶಿಸಬಹುದು.

ಇದನ್ನೂ ಓದಿ : ಟ್ರೈಲರ್‌ | ಕನ್ನಡ ಶಾಲೆಗಳ ಸ್ಥಿತಿ ಬಗ್ಗೆ ಮಾತಾಡುವ ‘ಸಹಿಪ್ರಾ ಶಾಲೆ ಕಾಸರಗೋಡು’

ಕಿರುಚಿತ್ರ ಪ್ರದರ್ಶನಕ್ಕೆ ಪ್ರವೇಶ ಶುಲ್ಕ 500 ರೂಪಾಯಿ ಎಂದು ನಿಗದಿಯಾಗಿದೆ. ಅತ್ಯುತ್ತಮ ಕನ್ನಡ ಕಿರುಚಿತ್ರ, ಅತ್ಯುತ್ತಮ ಕನ್ನಡೇತರ ಕಿರುಚಿತ್ರ, ಅತ್ಯುತ್ತಮ ನಾಯಕ, ನಾಯಕಿ, ಪೋಷಕ ನಟ, ನಟಿ ಹಾಗೂ ಅತ್ಯುತ್ತಮ ಛಾಯಾಗ್ರಣ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಚಿತ್ರರಂಗದ ಪ್ರಮುಖರು ಚಿತ್ರೋತ್ಸವದ ಜ್ಯೂರಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಟಿ ಸೋನು ಗೌಡ ಕಿರುಚಿತ್ರೋತ್ಸವದ ರಾಯಭಾರಿ. ಈಗಾಗಲೇ ಜ್ಯೂರಿಗಳು ಕಿರುಚಿತ್ರಗಳನ್ನು ನೋಡುತ್ತಿದ್ದಾರೆ. ಆಯ್ದ ಅತ್ಯುತ್ತಮ ಕಿರುಚಿತ್ರಗಳನ್ನು ಆಗಸ್ಟ್‌ 27ರ ಕಿರುಚಿತ್ರೋತ್ಸವದಂದು ಪ್ರದರ್ಶಿಸಲಾಗುವುದು.

ಹಲವು ಪ್ರಶಸ್ತಿಗಳನ್ನು ಗೆದ್ದ ರಾಘು ಶಿವಮೊಗ್ಗ ನಿರ್ದೇಶನದ ‘ಚೌಕಬಾರ’ ಕಿರುಚಿತ್ರ. ಈ ಕಿರುಚಿತ್ರದಲ್ಲಿ ಗುರುತಿಸಿಕೊಂಡ ರಾಘು, ‘ಚೂರಿಕಟ್ಟೆ’ ಸಿನಿಮಾ ನಿರ್ದೇಶನದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಸದ್ಯ ಅವರೀಗ ದುನಿಯಾ ವಿಜಯ್ ನಟನೆಯ ‘ಕುಸ್ತಿ’ ಸಿನಿಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More