ಟೀಸರ್‌ | ವೀರ ಸ್ವಾತಂತ್ರ್ಯ ಯೋಧ ‘ಸೈರಾ ನರಸಿಂಹ ರೆಡ್ಡಿ’ಯಾಗಿ ‌ಚಿರಂಜೀವಿ

ಚಿರಂಜೀವಿ ಅಭಿನಯದ ಮಹತ್ವಾಕಾಂಕ್ಷೆಯ ತೆಲುಗು ಸಿನಿಮಾ ‘ಸೈರಾ ನರಸಿಂಹ ರೆಡ್ಡಿ’ ಟೀಸರ್ ಬಿಡುಗಡೆಯಾಗಿದೆ. ಸುರೇಂದರ್ ರೆಡ್ಡಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದ ಟೀಸರ್ ಅದ್ಧೂರಿತನ, ಹಿನ್ನೆಲೆ ಸಂಗೀತ ಮತ್ತು ಆಕರ್ಷಕ ಮೇಕಿಂಗ್‌ನಿಂದ ಗಮನ ಸೆಳೆಯುತ್ತದೆ

ತೆಲುಗು ಸ್ಟಾರ್ ಹೀರೋ ಚಿರಂಜೀವಿ ಬುಧವಾರ (ಆ.22) ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ನಟನ ಜನ್ಮದಿನದ ಅಂಗವಾಗಿ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಬಯೋಪಿಕ್ ಇದು. ಬ್ರಿಟೀಷರ ವಿರುದ್ಧ ‌ದನಿಯೆತ್ತಿದ ಮೊದಲಿಗರ ಪಟ್ಟಿಯಲ್ಲಿ ನರಸಿಂಹ ರೆಡ್ಡಿ ಹೆಸರೂ ಇದೆ. ಚಿತ್ರದಲ್ಲಿ ಚಿರಂಜೀವಿ ಶೀರ್ಷಿಕೆ ಪಾತ್ರ ನಿರ್ವಹಿಸುತ್ತಿದ್ದು, ಟೀಸರ್‌ನಲ್ಲಿ ಅವರ ಲುಕ್ ರಿವೀಲ್ ಆಗಿದೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ‘ಡಾಲಿ ಡೇ’ ಬೇಡ, ಸಂತ್ರಸ್ತರಿಗೆ ನೆರವಾಗಿ ಎಂದ ನಟ ಧನಂಜಯ್

ಅದ್ಧೂರಿ ಟೀಸರ್‌ನಲ್ಲಿ ಸ್ವಾಭಿಮಾನಿ ಸ್ವಾತಂತ್ರ್ಯ ಯೋಧನಾಗಿ ಚಿರಂಜೀವಿ ಗಮನ ಸೆಳೆಯುತ್ತಾರೆ. ಬ್ರಿಟೀಷ್‌ ಅಧಿಕಾರಿ, ಸೈನಿಕರ ಮಧ್ಯೆ ಕುದುರೆ ಹತ್ತಿ ಬರುವ ನರಸಿಂಹ ರೆಡ್ಡಿ ಪಾತ್ರ ಉತ್ತಮ ಹಿನ್ನೆಲೆ ಸಂಗೀತ ಮತ್ತು ಮೇಕಿಂಗ್‌ನಿಂದಾಗಿ ಆಕರ್ಷಕವೆನಿಸುತ್ತದೆ. ದೊಡ್ಡ ತಾರಾಬಳಗದಿಂದಾಗಿಯೂ ಚಿತ್ರ ಕುತೂಹಲ ಮೂಡಿಸಿದೆ. ಬಾಲಿವುಡ್ ತಾರೆ ಅಮಿತಾಭ್ ಬಚ್ಚನ್‌, ನಯನತಾರಾ, ಕನ್ನಡ ನಟ ಸುದೀಪ್‌, ತಮನ್ನಾ, ವಿಜಯ್ ಸೇತುಪತಿ, ಜಗಪತಿ ಬಾಬು ಸೇರಿದಂತೆ ಚಿತ್ರದಲ್ಲಿ ಹತ್ತಾರು ಪ್ರಮುಖ ನಟ-ನಟಿಯರಿದ್ದಾರೆ. ಟೀಸರ್‌ನಲ್ಲಿ ಚಿರಂಜೀವಿ ಪಾತ್ರವಷ್ಟೇ ರಿವೀಲ್ ಆಗಿದೆ.

ಚಿರಂಜೀವಿ ತಾರಾಪುತ್ರ ರಾಮ್ ಚರಣ್‌ ತೇಜಾ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ‘ಖಿಲಾಡಿ 150’ ಚಿತ್ರದ ನಂತರ ಅವರ ಕೊನಿಡೇಲಾ ಬ್ಯಾನರ್‌ನಡಿ ತಯಾರಾಗುತ್ತಿರುವ ಎರಡನೇ ಸಿನಿಮಾ ಇದು. ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ‘ಸೈರಾ ನರಸಿಂಹ ರೆಡ್ಡಿ’ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಇದು ಅವರಿಗೆ ಚೊಚ್ಚಲ ತೆಲುಗು ಸಿನಿಮಾ. ನಟ, ಚಿತ್ರದ ನಿರ್ಮಾಪಕ ರಾಮ್ ಚರಣ್ ತೇಜಾ, ಸಾಯಿ ಧರಮ್ ತೇಜ್‌ ಸೇರಿದಂತೆ ಹಲವಾರು ತೆಲುಗು ತಾರೆಯರು ‘ಸೈರಾ ನರಸಿಂಹ ರೆಡ್ಡಿ’ ಟೀಸರ್ ಟ್ವೀಟ್ ಮಾಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More