‘ಕಾಲ’ ನಿರ್ದೇಶಕ ಪಾ ರಂಜಿತ್‌ ನಿರ್ದೇಶನದಲ್ಲಿ ಸಿಲ್ಕ್‌ ಸ್ಮಿತಾ ವೆಬ್‌ ಸರಣಿ

ರಜನೀಕಾಂತ್ ಅಭಿನಯದ ‘ಕಾಲ’ ಸಿನಿಮಾ ನಿರ್ದೇಶಿಸಿದ್ದ ಪಾ ರಂಜಿತ್‌ ವೆಬ್ ಸರಣಿಗೆ ಸಿದ್ಧತೆ ನಡೆಸಿದ್ದಾರೆ. 90ರ ದಶಕದ ಐಟಂ ಡ್ಯಾನ್ಸರ್‌, ನಟಿ ಸಿಲ್ಕ್‌ ಸ್ಮಿತಾ ಜೀವನವನ್ನು ನಿರೂಪಿಸುವುದು ಅವರ ಯೋಜನೆ. ಸಿಲ್ಕ್‌ ಸ್ಮಿತಾ ವೃತ್ತಿಬದುಕಿನ ವಿವಿಧ ಆಯಾಮಗಳನ್ನು ಪರಿಚಯಿಸುವುದಾಗಿ ಹೇಳುತ್ತಾರವರು

ದಕ್ಷಿಣದ ನಟಿ, ಐಟಂ ಡ್ಯಾನ್ಸರ್‌ ಸಿಲ್ಮ್‌ ಸ್ಮಿತಾ ಬಯೋಪಿಕ್ ಈ ಹಿಂದೆ‌ ತಯಾರಾಗಿತ್ತು. ಏಕ್ತಾ ಕಪೂರ್ ನಿರ್ಮಾಣದ ಹಿಂದಿ ಬಯೋಪಿಕ್‌ ‘ದಿ ಡರ್ಟಿ ಪಿಕ್ಚರ್‌’ನಲ್ಲಿ ವಿದ್ಯಾ ಬಾಲನ್‌ ಮುಖ್ಯಪಾತ್ರದಲ್ಲಿದ್ದರು. ತದನಂತರ ಕನ್ನಡದಲ್ಲೂ ‘ಡರ್ಟಿ ಪಿಕ್ಚರ್‌’ ಶೀರ್ಷಿಕೆಯಡಿ ಸಿಲ್ಮ್ ಸ್ಮಿತಾ ಬಯೋಪಿಕ್‌ ಬಂದಿತ್ತು. ಪಾಕಿಸ್ತಾನಿ ನಟಿ ವೀಣಾ ಮಲಿಕ್ ಮುಖ್ಯಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾ ತೆಲುಗು, ತಮಿಳಿಗೂ ಡಬ್ ಆಗಿತ್ತು. ಇದೀಗ ಸಿಲ್ಕ್ ಸ್ಮಿತಾ ಬದುಕು, ಸಿನಿಮಾ ವೆಬ್‌ ಸರಣಿ ರೂಪದಲ್ಲಿ ಬರಲಿದೆ. ‘ಕಾಲ’ ತಮಿಳು ಚಿತ್ರ ನಿರ್ದೇಶಿಸಿದ್ದ ಪಾ ರಂಜಿತ್‌ ಈ ವೆಬ್‌ ಸರಣಿ ಕೈಗೆತ್ತಿಕೊಂಡಿದ್ದಾರೆ.

ಹಿಂದಿ ಬಯೋಪಿಕ್ ತೆರೆಕಂಡಾಗ, ಸಿಲ್ಕ್ ಸ್ಮಿತಾ ಸಂಬಂಧಿಗಳು ಚಿತ್ರಕತೆ ಕುರಿತು ಚಕಾರ ಎತ್ತಿದ್ದರು. ಚಿತ್ರದಲ್ಲಿ ಸ್ಮಿತಾರ ಸಮರ್ಪಕ ಚಿತ್ರಣವಿಲ್ಲ ಎಂದು ಅವರು ದೂರಿದ್ದರು. ಈಗ ಸಾಮಾಜಿಕ ಕಳಕಳಿಯ ನಿರ್ದೇಶಕ ಎಂದೇ ಕರೆಸಿಕೊಳ್ಳುವ ಪಾ ರಂಜಿತ್ ನಿರ್ದೇಶನದಲ್ಲಿ ಸ್ಮಿತಾ ಹೇಗೆ ಕಾಣಿಸಬಹುದು ಎನ್ನುವ ಕುತೂಹಲವಿದೆ. ತಮ್ಮ ಚಿತ್ರಗಳಲ್ಲಿ ಮಹಿಳೆಯರನ್ನು ಗೌರವಯುತವಾಗಿ ಚಿತ್ರಿಸುವ ಪಾ ರಂಜಿತ್‌, ರಿಯಲಿಸ್ಟಿಕ್‌ ನಿರೂಪಣೆಯಿಂದ ಗಮನ ಸೆಳೆದಿರುವ ತಂತ್ರಜ್ಞ. ಹಾಗಾಗಿ, ಸಹಜವಾಗಿಯೇ ಸರಣಿ ನಿರೀಕ್ಷೆ ಹೆಚ್ಚಿಸಿದೆ.

ಇದನ್ನೂ ಓದಿ : ಟೀಸರ್‌ | ವೀರ ಸ್ವಾತಂತ್ರ್ಯ ಯೋಧ ‘ಸೈರಾ ನರಸಿಂಹ ರೆಡ್ಡಿ’ಯಾಗಿ ‌ಚಿರಂಜೀವಿ

‘ದಿ ಡರ್ಟಿ ಪಿಕ್ಚರ್‌’ ಹಿಂದಿ ಬಯೋಪಿಕ್ ಟ್ರೈಲರ್‌

ವೆಬ್ ಸರಣಿಯಲ್ಲಿ ಸ್ಮಿತಾರ ಬಾಲ್ಯದ ಚಿತ್ರಣವೂ ಇರುತ್ತದೆ ಎನ್ನಲಾಗಿದೆ. ಉಳಿದಂತೆ ಸರಣಿಯಲ್ಲಿನ ತಾರಾಬಳಗ, ತಂತ್ರಜ್ಞರ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ‘ಕಾಲ’ ತಮಿಳು ಚಿತ್ರದ ಯಶಸ್ಸಿನ ನಂತರ ಪಾ ರಂಜಿತ್‌ ಬಾಲಿವುಡ್ ಚಿತ್ರವೊಂದನ್ನು ನಿರ್ದೇಶಿಸುವ ಸೂಚನೆ ನೀಡಿದ್ದಾರೆ. ತಮ್ಮ ‘ನೀಲಂ ಪ್ರೊಡಕ್ಷನ್ಸ್‌’ ನಿರ್ಮಾಣ ಸಂಸ್ಥೆಯಡಿ ರಂಜಿತ್ ‘ಪರಿಯೇರುಮ್‌ ಪೆರುಮಾಳ್‌’ ತಮಿಳು ಸಿನಿಮಾ ನಿರ್ಮಿಸುತ್ತಿದ್ದಾರೆ. ಮಾರಿ ಸೆಲ್ವರಾಜ್‌ ನಿರ್ದೇಶಿಸುತ್ತಿರುವ ಚಿತ್ರ ತೆರೆಗೆ ಸಿದ್ಧವಾಗಿದೆ. ಮಾಲಿನಿ ಜೀವರತ್ನಂ ನಿರ್ದೇಶನದ ‘ಲೇಡೀಸ್ ಅಂಡ್‌ ಜೆಂಟಲ್‌ವುಮನ್‌’ ಸಾಕ್ಷ್ಯಚಿತ್ರಕ್ಕೂ ಅವರು ಬಂಡವಾಳ ಹೂಡಿದ್ದಾರೆ.

‘ದಿ ಡರ್ಟಿ ಪಿಕ್ಚರ್‌’ ಹಿಂದಿ ಬಯೋಪಿಕ್ ಸಾಂಗ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More