‘ಡೋಂಟ್‌ ವರಿ ಕೇರಳ’: ಸಂತ್ರಸ್ತರಿಗೆ ಧೈರ್ಯ ತುಂಬಿದ ಎ ಆರ್ ರೆಹಮಾನ್

ಪ್ರವಾಹದಿಂದ ಸಂತ್ರಸ್ತರಾಗಿರುವ ಕೇರಳ ಜನತೆಗೆ ಜಗತ್ತಿನ ಹಲವೆಡೆಯಿಂದ ನೆರವು ಸಿಗುತ್ತಿದೆ. ಆಸ್ಕರ್ ಪುರಸ್ಕೃತ ಸಂಗೀತ ಸಂಯೋಜಕ ಎ ಆರ್ ರೆಹಮಾನ್‌ ಕ್ಯಾಲಿಫೋರ್ನಿಯಾದ ಸಂಗೀತ ಕಾರ್ಯಕ್ರಮದಲ್ಲಿ ‘ಕೇರಳ ಕೇರಳ ಡೋಂಟ್ ವರೀ ಕೇರಳ’ ಎಂದು ಹಾಡಿರುವ ವಿಡಿಯೋ ಟ್ವೀಟ್ ಮಾಡಿದ್ದಾರೆ.

ಕೇರಳ ಸಂತ್ರಸ್ತರಿಗಾಗಿ ಜಗತ್ತಿನಾದ್ಯಂತ ಜನರು ಮಿಡಿಯುತ್ತಿದ್ದಾರೆ. ದೇಶದ ಸಿನಿಮಾ ತಾರೆಯರು ಹಾಗೂ ತಂತ್ರಜ್ಞರು ಹಣಕಾಸಿನ ನೆರವು ನೀಡುತ್ತಿರುವುದು ಸರಿಯಷ್ಟೆ. ಈ ಮಧ್ಯೆ ಆಸ್ಕರ್ ಪುರಸ್ಕೃತ ಭಾರತೀಯ ಸಂಗೀತ ಸಂಯೋಜಕ ಎ ಆರ್ ರೆಹಮಾನ್‌ ಸಂಗೀತದ ಮೂಲಕವೇ ಕೇರಳ ನಾಡಿಗೆ ಸಾಂತ್ವನ ಹೇಳಿದ್ದಾರೆ. ತಮ್ಮ ಸಂಯೋಜನೆಯ ಹಾಡೊಂದರ ಸಾಹಿತ್ಯ ಬದಲಿಸಿ ‘ಕೇರಳ ಕೇರಳ ಡೋಂಟ್ ವರೀ ಕೇರಳ’ ಎಂದು ಹಾಡಿದರೆ, ಅವರೊಂದಿಗೆ ಸಹಗಾಯಕರು ದನಿಗೂಡಿಸಿದ್ದಾರೆ.

ಟ್ವಿಟರ್‌ನಲ್ಲಿ ಈ ವಿಡಿಯೋ ಶೇರ್ ಮಾಡಿರುವ ರೆಹಮಾನ್‌, “ಕೇರಳ, ನಿಮಗಾಗಿ ನಾವು ಪ್ರಾರ್ಥಿಸುತ್ತಿದ್ದೇವೆ. ಬದುಕಿನಲ್ಲಿ ಇದೆಲ್ಲವೂ ಸಹಜ. ಧೈರ್ಯವಾಗಿರಿ!” ಎನ್ನುವ ಸಂದೇಶ ಬರೆದಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ನಡೆದ ಸಂಗೀತ ಸಮಾರಂಭದಲ್ಲಿ ರೆಹಮಾನ್‌ ‘ಕಾದಲ್ ದೇಸಂ’ ಚಿತ್ರದ ‘ಮುಸ್ತಾಫಾ ಮುಸ್ತಾಫಾ’ ಹಾಡಿನ ಪಲ್ಲವಿ ಬದಲಿಸಿ ‘ಕೇರಳ ಕೇರಳ ಡೋಂಟ್‌ ವರೀ ಕೇರಳ’ ಎಂದು ಹಾಡಿದ್ದಾರೆ. ಈ ಹಾಡಿನ ಕ್ಲಿಪ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ : ಟ್ರೈಲರ್‌ | ಟ್ರೆಂಡ್‌ ಆದ ತೆಲುಗಿನ ‘ಯೂ ಟರ್ನ್‌’, ‘ಅರವಿಂದ ಸಮೇತ’‌ ವಿಡಿಯೋಗಳು
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More