ವಿಡಿಯೋ ಸ್ಟೋರಿ | ‘ಕನ್ನಡಿಗರು ನನ್ನನ್ನು ಇಲ್ಲೇ ಉಳಿಸಿಕೊಳ್ಳಲಿ’ ಎನ್ನುವ ಅದಿತಿ

ಸ್ಯಾಂಡಲ್‌ವುಡ್‌ನ ಭರವಸೆಯ ಯುವನಟಿಯರ ಪಟ್ಟಿಯಲ್ಲಿ ಅದಿತಿ ಪ್ರಭುದೇವ ಹೆಸರೂ ಇದೆ. ಕಿರುತೆರೆ ಮೂಲದ ನಟಿ ‘ಧೈರ್ಯಂ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. ಪ್ರಸ್ತುತ ಅವರ ‘ಬಜಾರ್’ ಸಿನಿಮಾ ಪೂರ್ಣಗೊಂಡಿದ್ದು, ತಮ್ಮ ಸಿನಿಮಾ ಕುರಿತು ಅವರಿಲ್ಲಿ ಮಾತನಾಡಿದ್ದಾರೆ

ಇಂಜಿನಿಯರಿಂಗ್‌ ನಂತರ ಎಂಬಿಎ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಕ್ಯಾಮೆರಾ ಎದುರಿಸಿದವರು ಅದಿತಿ ಪ್ರಭುದೇವ. ಕಿರುತೆರೆಯಲ್ಲಿ ಕ್ಯಾಮೆರಾ ಎದುರಿಸಿದ ಅವರು ನಟ ಅಜಯ್ ರಾವ್‌ಗೆ ಜೋಡಿಯಾಗಿ ‘ಧೈರ್ಯಂ’ ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯ್ತು. ‘ನಾಗಕನ್ನಿಕೆ’ ಚಿತ್ರದೊಂದಿಗೆ ಅವರು ಮತ್ತೆ ಕಿರುತೆರೆಗೆ ಮರಳಿದರು. ಈ ಧಾರಾವಾಹಿಯೊಂದಿಗೆ ಅವರು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರಾದರು. ಈ ಯಶಸ್ಸು ‘ಬಜಾರ್‌’ ಚಿತ್ರದೊಂದಿಗೆ ಅವರನ್ನು ಮತ್ತೆ ಹಿರಿತೆರೆಗೆ ಕರೆತಂದಿತು. ಈ ಚಿತ್ರ ಪೂರ್ಣಗೊಂಡಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.

“ನಿರ್ದೇಶಕ ಸುನಿ ಅವರ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ನನ್ನ ವೃತ್ತಿಬದುಕಿಗೆ ದೊಡ್ಡ ತಿರುವು” ಎನ್ನುವ ಅವರ ಕೈಲಿಗ ಮತ್ತೆರೆಡು ಹೊಸ ಸಿನಿಮಾಗಳಿವೆ. ಕೆಲವೇ ದಿನಗಳಲ್ಲಿ ತಮ್ಮ ಸಿನಿಮಾಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳುತ್ತಾರವರು. ಕನ್ನಡ ಸಿನಿಮಾಗಳಿಗೆ ಪರಭಾಷಾ ನಟಿಯರನ್ನು ಕರೆತರುವ ಧೋರಣೆ ಬಗ್ಗೆ ಅವರಿಗೆ ಮುನಿಸಿದೆ. “ಕನ್ನಡದಲ್ಲೇ ಪ್ರತಿಭಾವಂತ ನಟಿಯರಿದ್ದಾರೆ. ಇಲ್ಲಿನವರಿಗೇ ಅವಕಾಶ ಸಿಗಬೇಕು” ಎನ್ನುವುದು ಅವರ ಪ್ರತಿಪಾದನೆ.

ಇದನ್ನೂ ಓದಿ : ಟೀಸರ್‌ | ವೀರ ಸ್ವಾತಂತ್ರ್ಯ ಯೋಧ ‘ಸೈರಾ ನರಸಿಂಹ ರೆಡ್ಡಿ’ಯಾಗಿ ‌ಚಿರಂಜೀವಿ

ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ ಅವರೀಗ ಸಿನಿಮಾ ನಟಿ. ಹಾಗೆಂದು ಮತ್ತೆ ಕಿರುತೆರೆಯಲ್ಲಿ ನಟಿಸಲು ಅವರಿಗೆ ಅಭ್ಯಂತರವೇನಿಲ್ಲ. “ಕಿರುತೆರೆ, ಹಿರಿತೆರೆ ಎನ್ನುವ ವಿಂಗಡಣೆಯೇ ಸರಿಯಲ್ಲ. ನಾನಂತೂ ಎರಡೂ ಬೇರೆ ಬೇರೆ ಮಾಧ್ಯಮ ಎಂದು ಭಾವಿಸಿಲ್ಲ. ಜನಪ್ರಿಯತೆ ತಂದುಕೊಟ್ಟ ಕಿರುತೆರೆಗೆ ಮರಳಲು ಯಾವುದೇ ರೀತಿಯ ಹಿಂಜರಿಕೆಯಿಲ್ಲ” ಎನ್ನುವ ನಟಿ ಭಿನ್ನ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ನಟನೆಗೆ ಸವಾಲಾಗುವ ಪಾತ್ರಗಳು ಬೇಕೆನ್ನುವ ನಟಿ ಕನ್ನಡ ಚಿತ್ರಗಳಿಗೇ ಮೊದಲ ಆಧ್ಯತೆ ಎನ್ನುತ್ತಾರೆ. ಕನ್ನಡದಲ್ಲೇ ಉಳಿಯಬೇಕೆಂದರೆ ಕನ್ನಡಿಗರ ಪ್ರೀತಿ, ಪ್ರೋತ್ಸಾಹ ಬೇಕೆಂದು ಅಹವಾಲು ಮುಂದಿಡುತ್ತಾರೆ.

ಅದಿತಿ ಅಭಿನಯದ ‘ಧೈರ್ಯಂ’ ಕನ್ನಡ ಚಿತ್ರದ ವಿಡಿಯೋ ಹಾಡುಗಳು ಇಲ್ಲಿವೆ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More