ವಿಡಿಯೋ ಸಾಂಗ್‌ | ‘ಸ್ತ್ರೀ’ ಹಿಂದಿ ಸಿನಿಮಾದ ‘ಆವೋ ಕಭೀ ಹವೇಲಿ ಪೇ’

ಅಮರ್ ಕೌಶಿಕ್ ನಿರ್ದೇಶನದ ‘ಸ್ತ್ರೀ’ ಹಿಂದಿ ಚಿತ್ರದಲ್ಲಿನ ನೋರಾ ಫತೇಹಿ ನೃತ್ಯದ ಹಾಡೊಂದು ಮೊನ್ನೆ ಬಿಡುಗಡೆಯಾಗಿತ್ತು. ಇದೀಗ ಕೃತಿ ಸನೂನ್‌ ಅವರ ‘ಆವೋ ಕಭೀ ಹವೇಲಿ ಪೇ’ ವಿಡಿಯೋ ಸಾಂಗ್ ಬಂದಿದೆ. ಸಚಿನ್‌-ಜಿಗರ್‌ ಸಂಗೀತ ಸಂಯೋಜನೆಯ ಹಾಡಿಗೆ ಬಾದ್‌ಷಾ ದನಿಯಾಗಿದ್ದಾರೆ

ಶ್ರದ್ಧಾ ಕಪೂರ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹಾರರ್‌-ಕಾಮಿಡಿ ‘ಸ್ತ್ರೀ’ ಸಿನಿಮಾದ ಮತ್ತೊಂದು ವಿಡಿಯೋ ಹಾಡು ಬಿಡುಗಡೆಯಾಗಿದೆ. ‘ಆವೋ ಕಭೀ ಹವೇಲಿ ಪೇ’ ಹಾಡಿನಲ್ಲಿ ಕೃತಿ ಸನೂನ್‌ ಕುಣಿದಿದ್ದಾರೆ. ಅಸ್ತಿಪಂಜರಗಳ ಜೊತೆ ಹಾಡಿನುದ್ದಕ್ಕೂ ಹೆಜ್ಜೆ ಹಾಕುವ ಕೃತಿಗೆ ಹಾಡಿನ ಕೊನೆಯ ಹಂತದಲ್ಲಿ ಗಾಯಕ ಬಾದ್‌ಷಾ ಜೊತೆಯಾಗುತ್ತಾರೆ. ಸಚಿನ್- ಜಿಗರ್ ಸಂಗೀತ ಸಂಯೋಜನೆಯ ಗೀತೆಗೆ ಬಾದ್‌ಷಾ ಜೊತೆ ನಿಖಿತಾ ಗಾಂಧಿ ಹಾಡಿದ್ದಾರೆ. ಹಾಡಿನ ಮೇಕಿಂಗ್ ಗಮನಿಸಿದರೆ ಇದೊಂದು ಪ್ರೊಮೋಷನಲ್‌ ಸಾಂಗ್‌ ಎನಿಸುತ್ತದೆ.

ಇದನ್ನೂ ಓದಿ : ‘ಡೋಂಟ್‌ ವರಿ ಕೇರಳ’: ಸಂತ್ರಸ್ತರಿಗೆ ಧೈರ್ಯ ತುಂಬಿದ ಎ ಆರ್ ರೆಹಮಾನ್

ಇದು ಜಾನಪದ ಕತೆಗಳನ್ನು ಆಧರಿಸಿದ ಚಿತ್ರ ಎನ್ನುತ್ತಾರೆ ನಿರ್ದೇಶಕರು. ಆತ್ಮವಾಗಿ ಕಾಡುವ ಯುವತಿ, ಆಗಾಗ ನಾಪತ್ತೆಯಾಗುವ ಊರಿನ ಯುವಕರು, ಅವರ ನಾಪತ್ತೆಗೆ ಸಾಕ್ಷಿ ಎನ್ನುವಂತೆ ಅನಾಥವಾಗಿ ಬಿದ್ದಿರುವ ಬಟ್ಟೆಗಳು, ಪ್ರೇತಾತ್ಮವನ್ನೇ ಪ್ರೀತಿಸುವ ನಾಯಕ.. ರೋಚಕ ಕತೆಯೊಂದನ್ನು ಹಾಸ್ಯಮಯ ನಿರೂಪಣೆಯಲ್ಲಿ ಹೇಳಿದ್ದೇವೆ ಎನ್ನುತ್ತಾರೆ ನಿರ್ದೇಶಕ ಅಮರ್ ಕೌಶಿಕ್‌. ರಾಜ್‌ಕುಮಾರ್‌ ರಾವ್‌, ಪಂಕಜ್ ತ್ರಿಪಾಠಿ, ಅಪರಶಕ್ತಿ ಖುರಾನಾ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾ ಆಗಸ್ಟ್ 31ರಂದು ತೆರೆಕಾಣಲಿದೆ.

‘ಸ್ತ್ರೀ’ ಚಿತ್ರದ ವಿಡಿಯೋ ಹಾಡಿನಲ್ಲಿ ನೋರಾ ಫತೇಹಿ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More