ಟೀಸರ್ | ಅನಿಲ್‌ ಬಾರ್ವೆ ನಿರ್ದೇಶನದ ಹಾರರ್‌-ಥ್ರಿಲ್ಲರ್ ಸಿನಿಮಾ ‘ತುಂಬಡ್‌’

ಅನಿಲ್ ಬಾರ್ವೆ ನಿರ್ದೇಶನದಲ್ಲಿ ಸೋಹಂ ಶಾ ನಟಿಸಿರುವ ‘ತುಂಬಡ್‌’ ಹಾರರ್‌-ಥ್ರಿಲ್ಲರ್ ಹಿಂದಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಆನಂದ್ ಎಲ್ ರಾಯ್‌ ಸಹನಿರ್ಮಾಣದ ಸಿನಿಮಾ ವಿಶಿಷ್ಟ ಕಥಾವಸ್ತುವಿನಿಂದ ಗಮನ ಸೆಳೆಯುತ್ತದೆ. ಅಕ್ಟೋಬರ್ 12ರಂದು ಸಿನಿಮಾ ಬಿಡುಗಡೆಯಾಗಲಿದೆ.

‘ಶಿಪ್ ಆಫ್‌ ಥಿಸೀಸ್‌’ ಸಿನಿಮಾದ ಮೂಲಕ ಜಾಗತಿಕವಾಗಿ ಗುರುತಿಸಿಕೊಂಡ ನಟ ಸೋಹಮ್‌ ಶಾ. ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ತುಂಬಡ್‌’ ಹಿಂದಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಒಂದೂವರೆ ನಿಮಿಷಗಳ ಟೀಸರ್ ಚಿತ್ರದ ಬಗೆಗೆ ಹಲವು ಕುತೂಹಲಗಳನ್ನು ತೆರೆದಿಡುತ್ತದೆ. ಪೌರಾಣಿಕ ಕತೆಯೊಂದನ್ನು ಹಾರರ್‌-ಥ್ರಿಲ್ಲರ್ ಹಿನ್ನೆಲೆಯಲ್ಲಿ ನಿರ್ದೇಶಕ ಅನಿಲ್ ಬಾರ್ವೆ ನಿರೂಪಿಸಿದ್ದಾರೆ. ಕತೆಯನ್ನು ಬಿಟ್ಟುಕೊಡದ ಟೀಸರ್ ಪ್ರತೀ ದೃಶ್ಯದಲ್ಲೂ ಕಾತುರತೆ ಸೃಷ್ಟಿಸುತ್ತದೆ.

ಇದನ್ನೂ ಓದಿ : ‘ಕಾಲ’ ನಿರ್ದೇಶಕ ಪಾ ರಂಜಿತ್‌ ನಿರ್ದೇಶನದಲ್ಲಿ ಸಿಲ್ಕ್‌ ಸ್ಮಿತಾ ವೆಬ್‌ ಸರಣಿ

ವಿಶೇಷವಾಗಿ ಹಿನ್ನೆಲೆ ಸಂಗೀತದಲ್ಲಿನ ಧ್ವನಿವಿನ್ಯಾಸ ಟೀಸರ್‌ ಹೈಲೈಟ್‌. ನಾನ್ ಲೀನಿಯರ್ ನಿರೂಪಣೆ, ಫ್ಯಾಂಟಸಿಯೂ ಇಲ್ಲಿದೆ. “ತುಂಬಡ್ ಚಿತ್ರ ತಯಾರಾಗಲು ತಡವಾಯಿತು. ಇದರಿಂದ ಬೇರೆ ಚಿತ್ರಗಳಲ್ಲಿ ತೊಡಗಿಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಆದರೆ ನನ್ನಲ್ಲಿ ಆ ಕುರಿತಾಗಿ ಯಾವ ಬೇಸರವೂ ಇಲ್ಲ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯುತ್ತಮ ಚಿತ್ರವಾಗಲಿದೆ” ಎನ್ನುತ್ತಾರೆ ಚಿತ್ರದ ನಾಯಕ, ಸಹನಿರ್ಮಾಪಕ ಸೋಹಮ್ ಶಾ. ಆನಂದ್‌ ಎಲ್ ರಾಯ್‌, ಮುಖೇಸ್‌ ಶಾ ಮತ್ತು ಅಮಿತ್ ಶಾ ಚಿತ್ರದ ಸಹನಿರ್ಮಾಪಕರು. ಅಕ್ಟೋಬರ್ 12ರಂದು ‘ತುಂಬಡ್’ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More