ಟ್ರೈಲರ್‌ | ಟ್ರೆಂಡ್‌ ಆದ ತೆಲುಗಿನ ‘ಯೂ ಟರ್ನ್‌’, ‘ಅರವಿಂದ ಸಮೇತ’‌ ವಿಡಿಯೋಗಳು

ಪವನ್‌ ಕುಮಾರ್‌ ನಿರ್ದೇಶನದ ‘ಯೂ ಟರ್ನ್‌’ ತೆಲುಗು, ತಮಿಳು ದ್ವಿಭಾಷಾ ಸಿನಿಮಾದ ಟ್ರೈಲರ್‌ ಟ್ರೆಂಡ್‌ ಆಗಿದೆ. ಮತ್ತೊಂದೆಡೆ ಜ್ಯೂನಿಯರ್ ಎನ್‌ಟಿಆರ್‌ ಅಭಿನಯದ ‘ಅರವಿಂದ ಸಮೇತ’ ಟೀಸರ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎರಡೂ ಚಿತ್ರಗಳು ನಿರೀಕ್ಷೆ ಹುಟ್ಟಿಸಿವೆ.

ಪವನ್ ಕುಮಾರ್ ನಿರ್ದೇಶನದ ‘ಯೂ ಟರ್ನ್‌’ (2016) ಕನ್ನಡ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ಈ ಚಿತ್ರದ ತೆಲುಗು, ತಮಿಳು ಅವತರಣಿಕೆಗಳನ್ನು ಪವನ್ ಅವರೇ ನಿರ್ದೇಶಿಸಿದ್ದಾರೆ. ಸಮಂತಾ ಅಕ್ಕಿನೇನಿ ನಟಿಸಿರುವ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಭಿನ್ನ ಪಾತ್ರದಲ್ಲಿ ಸಮಂತಾ ನಟಿಸಿರುವ ಚಿತ್ರದ ಬಗ್ಗೆ ಚರ್ಚೆ ನಡೆದಿದೆ. ತನಿಖಾ ವರದಿಗಾರ್ತಿಯಾಗಿ ಘಟನೆಯೊಂದರ ಹಿಂದೆ ಬೀಳುವ ಯುವತಿ (ಸಮಂತಾ) ಹಲವು ತೊಂದರೆಗಳಿಗೆ ಸಿಲುಕುತ್ತಾಳೆ. ಟ್ರೈಲರ್‌ನಲ್ಲಿನ ದೃಶ್ಯಗಳು ವೀಕ್ಷಕರಲ್ಲಿ ಪ್ರಶ್ನೆಗಳನ್ನು ಮೂಡಿಸುತ್ತವೆ.

ಇದನ್ನೂ ಓದಿ : ‘ಕಾಲ’ ನಿರ್ದೇಶಕ ಪಾ ರಂಜಿತ್‌ ನಿರ್ದೇಶನದಲ್ಲಿ ಸಿಲ್ಕ್‌ ಸ್ಮಿತಾ ವೆಬ್‌ ಸರಣಿ

‌ ನಟ ಆದಿ ಪಿನಿಸೆಟ್ಟಿ ಪೊಲೀಸ್ ಅಧಿಕಾರಿಯಾಗಿ ಚಿತ್ರದ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ರಾಹುಲ್‌ ರವೀಂದ್ರನ್‌, ಭೂಮಿಕಾ ಚಾವ್ಲಾ, ನರೈನ್‌ ಇತರೆ ಮುಖ್ಯ ಪಾತ್ರಗಳಲ್ಲಿದ್ದಾರೆ. ‘ಲೂಸಿಯಾ’ ಚಿತ್ರದಿಂದ ಟ್ರೆಂಡ್ ಸೆಟ್ ಮಾಡಿದ ನಿರ್ದೇಶಕ ಪವನ್ ಕುಮಾರ್‌ ‘ಯೂ ಟರ್ನ್‌’ನಲ್ಲೂ ಗಮನ ಸೆಳೆದಿದ್ದರು. ವಾಹನ ಸಂಚಾರಿ ನಿಯಮಗಳ ಹಿನ್ನೆಲೆಯಲ್ಲಿ ಹೆಣೆದಿರುವ ಕತೆ ಸಾಮಾಜಿಕ ಕಳಕಳಿಯ ವಸ್ತು ಕೂಡ ಹೌದು. ಕನ್ನಡದಲ್ಲಿ ಯಶಸ್ಸು ಕಂಡ ‘ಯೂ ಟರ್ನ್‌’ ಕಳೆದ ವರ್ಷ ಮಲಯಾಳಂನಲ್ಲಿ ‘ಕೇರ್‌ಫುಲ್‌’ ಶೀರ್ಷಿಕೆಯಡಿ ಚಿತ್ರವಾಗಿತ್ತು. ತೆಲುಗು, ತಮಿಳು ಅವತರಣಿಕೆಗಳು ಸೆಪ್ಟೆಂಬರ್‌ 13ರಂದು ಬಿಡುಗಡೆಯಾಗಲಿವೆ.

ಅರವಿಂದ ಸಮೇತ | ‘ಅತ್ತಾರಿಂಟಿಕಿ ದಾರೇದಿ’ ಖ್ಯಾತಿಯ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ಜ್ಯೂನಿಯರ್ ಎನ್‌ಟಿಅರ್ ನಟಿಸಿರುವ ‘ಅರವಿಂದ ಸಮೇತ’ ಟೀಸರ್ ಸಿನಿಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಜ್ಯೂನಿಯರ್ ಎನ್‌ಟಿಆರ್ ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋನ ಲುಕ್‌ ಹಾಗೂ ಟೀಸರ್ ಮೇಕಿಂಗ್‌ ಕುರಿತು ಮಾತನಾಡುತ್ತಿದ್ದಾರೆ. ಟೀಸರ್‌ನಲ್ಲಿ ಭರ್ಜರಿ ಆಕ್ಷನ್ ಸನ್ನಿವೇಶಗಳಿವೆ. ಆಕರ್ಷಕ ಡೈಲಾಗ್‌ಗಳ ಹಿನ್ನೆಲೆಯಲ್ಲಿನ ಸ್ಟಂಟ್‌ಗಳು ಇದೊಂದು ಉತ್ತಮ ಮಾಸ್‌ ಎಂಟರ್‌ಟೇನರ್‌ ಆಗುವ ನಿರೀಕ್ಷೆ ಮೂಡಿಸುತ್ತವೆ. ಚಿತ್ರದ ‘ವೀರ ರಾಘವ’ ಪಾತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್‌ ನಟಿಸಿದ್ದು, ಪೂಜಾ ಹೆಗ್ಡೆ ಅವರಿಗೆ ಜೋಡಿ. ಚಿತ್ರಕ್ಕೆ ಥಮನ್ ಸಂಗೀತ ಸಂಯೋಜಿಸಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More