ಬಹುನಿರೀಕ್ಷಿತ ‘2.0’ ಸಿನಿಮಾದ ಲೀಕ್‌ ವಿಡಿಯೋದಲ್ಲಿ ರಜನೀಕಾಂತ್‌-ಏಮಿ

ಶಂಕರ್‌ ನಿರ್ದೇಶನದ ‘2.0’ ಸಿನಿಮಾದ ಹಾಡಿನ ಚಿತ್ರೀಕರಣ ಸಂದರ್ಭದ ದೃಶ್ಯಗಳ ಒಂದು ವಿಡಿಯೋ ಲೀಕ್ ಆಗಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಜನೀಕಾಂತ್, ಏಮಿ ಜಾಕ್ಸನ್ ಮತ್ತು ಸಹನರ್ತಕಿಯರ ನೃತ್ಯದ ತುಣುಕುಗಳಿವೆ. ದುಬಾರಿ ಸಿನಿಮಾದ ತಂತ್ರಜ್ಞಾನದ ಜಲಕ್ ಇಲ್ಲಿ ಸಿಗುತ್ತದೆ

ರಜನೀಕಾಂತ್‌ ಮತ್ತು ಅಕ್ಷಯ್ ಕುಮಾರ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘2.0’ ಚಿತ್ರೀಕರಣದ ವಿಡಿಯೋ ಲೀಕ್ ಆಗಿದೆ. ಶಂಕರ್ ನಿರ್ದೇಶನದ ಈ ಚಿತ್ರ, ಭಾರತದ ಅತಿ ದೊಡ್ಡ ಬಜೆಟ್‌ನ ಸೈಂಟಿಫಿಕ್-ಫಿಕ್ಷನ್‌. ಲೀಕ್‌ ಆಗಿರುವ ವಿಡಿಯೋದಲ್ಲಿ ನಾಯಕಿ ಏಮಿ ಜಾಕ್ಸನ್‌ ಸಹನರ್ತಕಿಯರೊಂದಿಗೆ ನರ್ತಿಸುವ ದೃಶ್ಯಗಳಿವೆ. ಎ ಆರ್‌ ರೆಹಮಾನ್‌ ಸಂಗೀತ ಸಂಯೋಜನೆಯ ಹಾಡಿನಲ್ಲಿ ರಜನೀಕಾಂತ್ ಮತ್ತು ಏಮಿ ಜೊತೆಗಿರುವ ದೃಶ್ಯವೂ ಇದೆ. ವಿಡಿಯೋದಲ್ಲಿ ದುಬಾರಿ ಸಿನಿಮಾದ ತಂತ್ರಜ್ಞಾನ, ಮೇಕಿಂಗ್‌ನಲ್ಲಿನ ಶ್ರೀಮಂತಿಕೆಯನ್ನು ಗುರುತಿಸಬಹುದು.

ಹಾಲಿವುಡ್ ಸಿನಿಮಾ ತಂತ್ರಜ್ಞ, 3ಡಿ ಸ್ಟೀರಿಯೋಗ್ರಾಫರ್ ರೇ ಹ್ಯಾನಿಸ್ಯಾನ್‌ ಜೊತೆಗಿನ ಪುಟ್ಟ ಸಂದರ್ಶನವೂ ಲೀಕ್ ಆದ ವಿಡಿಯೋದಲ್ಲಿದೆ. “ನೂತನ ತಂತ್ರಜ್ಞಾನದ ಈ ಕ್ಯಾಮೆರಾಗಳ ಜೊತೆ ಮೊದಲ ಬಾರಿ ಕೆಲಸ ಮಾಡುತ್ತಿದ್ದೇನೆ. ಹಾಲಿವುಡ್‌ ಸಿನಿಮಾಗಳಿಗೆ ಕೆಲಸ ಮಾಡಿದ್ದಕ್ಕಿಂತ ಬೇರೆಯದ್ದೇ ಆದ ಅನುಭವ ಇಲ್ಲಿ ಸಿಗುತ್ತಿದೆ,” ಎಂದಿದ್ದಾರೆ ರೇ. ಸಾಮಾನ್ಯವಾಗಿ ಭಾರತದಲ್ಲಿ 2ಡಿಯಲ್ಲಿ ಚಿತ್ರಿಸಿ ನಂತರ 3ಡಿ ಫಾರ್ಮ್ಯಾಟ್‌ಗೆ ಬದಲಿಸಲಾಗುತ್ತದೆ. ಈ ಚಿತ್ರದಲ್ಲಿ ನೇರವಾಗಿ 3ಡಿ ಕ್ಯಾಮರಾಗಳಲ್ಲೇ ಚಿತ್ರಿಸುತ್ತಿರುವುದು ವಿಶೇಷ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ‘ಕನ್ನಡಿಗರು ನನ್ನನ್ನು ಇಲ್ಲೇ ಉಳಿಸಿಕೊಳ್ಳಲಿ’ ಎನ್ನುವ ಅದಿತಿ

‘2.0’ ಸಿನಿಮಾದ ಬಜೆಟ್‌ 400 ಕೋಟಿ ರುಪಾಯಿಗೂ ಹೆಚ್ಚು. ಇದು ಏಷ್ಯಾದ ಎರಡನೇ ಅತಿ ದೊಡ್ಡ ಬಜೆಟ್‌ನ ಸಿನಿಮಾ ಎನ್ನಲಾಗುತ್ತಿದೆ. ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳಿಂದಾಗಿ ಸಿನಿಮಾದ ಬಿಡುಗಡೆ ದಿನಾಂಕ ಮೂರ್ನಾಲ್ಕು ಬಾರಿ ಮುಂದಕ್ಕೆ ಹೋಗಿತ್ತು. ಅಂತಿಮವಾಗಿ ಬಿಡುಗಡೆ ದಿನಾಂಕ 2018ರ ನವೆಂಬರ್‌ 29 ಎಂದು ನಿಗದಿಯಾಗಿದೆ. ತಮಿಳು ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾದ ಖಳಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಎ ಆರ್ ರೆಹಮಾನ್‌ ಸಂಗೀತ ಸಂಯೋಜನೆ, ನೀರವ್‌ ಷಾ ಛಾಯಾಗ್ರಹಣವಿದ್ದು, ಹಾಲಿವುಡ್ ತಂತ್ರಜ್ಞರು ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More