ಅತಿ ಹೆಚ್ಚು ಗಳಿಕೆಯ ನಟರ ‘ಪೋರ್ಬ್ಸ್’ ಪಟ್ಟಿಯಲ್ಲಿ ಅಕ್ಷಯ್‌, ಸಲ್ಮಾನ್‌ ಖಾನ್

‘ಫೋರ್ಬ್ಸ್‌’ ಮ್ಯಾಗಜಿನ್‌ ಅತಿ ಹೆಚ್ಚು ಗಳಿಕೆಯ ನಟರ ಪಟ್ಟಿ ಬಿಡುಗಡೆ ಮಾಡಿದೆ. 40.5 ಮಿಲಿಯನ್ ಡಾಲರ್‌ ಗಳಿಕೆಯೊಂದಿಗೆ ಬಾಲಿವುಡ್‌ ನಟ ಅಕ್ಷಯ್ ಕುಮಾರ್ 7ನೇ ಸ್ಥಾನದಲ್ಲಿದ್ದರೆ, ಸಲ್ಮಾನ್‌ ಖಾನ್‌ಗೆ‌ 9ನೇ ಸ್ಥಾನ ಲಭ್ಯವಾಗಿದೆ. ಮೊದಲ ಸ್ಥಾನದಲ್ಲಿ ಹಾಲಿವುಡ್‌ ನಟ ಜಾರ್ಜ್‌ ಕ್ಲ್ಯೂನಿ ಇದ್ದಾರೆ

ಜಗತ್ತಿನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಬಾಲಿವುಡ್ ತಾರೆಯರಾದ ಅಕ್ಷಯ್ ಕುಮಾರ್, ಸಲ್ಮಾನ್‌ ಖಾನ್‌ ಸ್ಥಾನ ಪಡೆದಿದ್ದಾರೆ. ‘ಫೋರ್ಬ್ಸ್‌’ ಮ್ಯಾಗಜಿನ್‌ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 40.5 ಮಿಲಿಯನ್ ಡಾಲರ್‌ (ಸುಮಾರು 300 ಕೋಟಿ ರುಪಾಯಿ) ಗಳಿಕೆಯೊಂದಿಗೆ ನಟ ಅಕ್ಷಯ್ 7ನೇ ಸ್ಥಾನದಲ್ಲಿದ್ದಾರೆ. 9ನೇ ಸ್ಥಾನದಲ್ಲಿರುವ ಸಲ್ಮಾನ್ ಖಾನ್ ಗಳಿಕೆ 38.5 ಮಿಲಿಯನ್ ಡಾಲರ್‌. ಪಟ್ಟಿಯ ಮೊದಲ ಸ್ಥಾನದಲ್ಲಿ ಹಾಲಿವುಡ್ ನಟ ಜಾರ್ಜ್ ಕ್ಲ್ಯೂನಿ ಇದ್ದಾರೆ; ಜೂನ್‌ 2017ರಿಂದ ಜೂನ್‌ 2018ರವರೆಗಿನ ಅವರ ಗಳಿಕೆ 239 ಮಿಲಿಯನ್ ಡಾಲರ್‌. ಮೂವತ್ತೈದು ವರ್ಷಗಳ ಅವರ ವೃತ್ತಿಬದುಕಿನಲ್ಲಿ ಇದು ಅತಿ ಹೆಚ್ಚಿನ ಗಳಿಕೆ ಎನ್ನಲಾಗಿದೆ.

ಈ ವರ್ಷ ಅಕ್ಷಯ್ ಅಭಿನಯದ ‘ಪ್ಯಾಡ್‌ಮ್ಯಾನ್‌’ ಮತ್ತು ‘ಗೋಲ್ಡ್‌’ ಸಿನಿಮಾಗಳು ತೆರೆಕಂಡಿವೆ. ಎರಡೂ ಚಿತ್ರಗಳನ್ನು ಹಿಟ್ ಎಂದು ಘೋಷಿಸಿದ್ದು, ‘ಪ್ಯಾಡ್‌ಮ್ಯಾನ್’ ಸಿನಿಮಾದ ಭಾರತದ ವಹಿವಾಟು 105 ಕೋಟಿ ರುಪಾಯಿ. ‌ಆಗಸ್ಟ್‌ 15ರಂದು ಬಿಡುಗಡೆಯಾದ ‘ಗೋಲ್ಡ್‌’ ಸಿನಿಮಾ 71.30 ಕೋಟಿ ರುಪಾಯಿ ಗಳಿಕೆಯೊಂದಿಗೆ ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿದೆ. ಸಲ್ಮಾನ್‌ ಖಾನ್‌ ಅಭಿನಯದ ‘ರೇಸ್‌ 3’ ಸಿನಿಮಾ 166.40 ಕೋಟಿ ರುಪಾಯಿ ಗಳಿಸಿತ್ತು.

ಇದನ್ನೂ ಓದಿ : ಟ್ರೈಲರ್‌ | ಟ್ರೆಂಡ್‌ ಆದ ತೆಲುಗಿನ ‘ಯೂ ಟರ್ನ್‌’, ‘ಅರವಿಂದ ಸಮೇತ’‌ ವಿಡಿಯೋಗಳು

‘ಗೋಲ್ಡ್‌’ ಹಿಂದಿ ಸಿನಿಮಾ ಹಾಡು

“2017ರ ಡಿಸೆಂಬರ್‌ನಲ್ಲಿ ತೆರೆಕಂಡ ‘ಟೈಗರ್ ಜಿಂದಾ ಹೈ’ ಸಿನಿಮಾದ ದೊಡ್ಡ ಯಶಸ್ಸಿನ ಜೊತೆ ಜಾಹೀರಾತುಗಳ ಗಳಿಕೆಯೊಂದಿಗೆ ಸಲ್ಮಾನ್‌ ಸ್ಟಾರ್ ಪಟ್ಟ ಕಾಯ್ದುಕೊಂಡಿದ್ದಾರೆ,” ಎಂದು ಫೋರ್ಬ್ಸ್‌ನಲ್ಲಿ ಸಲ್ಮಾನ್ ಕುರಿತ ಟಿಪ್ಪಣಿ ಇದೆ. “ಬಾಲಿವುಡ್‌ನ ಮುಂಚೂಣಿ ನಟ ಸಾಮಾಜಿಕ ಕಳಕಳಿಯ ಕಥಾವಸ್ತುಗಳ ಚಿತ್ರಗಳಲ್ಲಿ ನಟಿಸುತ್ತಿದ್ದು, ಅವರ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ಸುಮಾರು ಇಪ್ಪತ್ತು ಬ್ರ್ಯಾಂಡ್‌ಗಳಿಗೆ ಮಾಡೆಲ್ ಆಗಿರುವ ಅವರು, ಅಲ್ಲಿ ದೊಡ್ಡ ಮೊತ್ತದ ಹಣ ಸಂಪಾದಿಸುತ್ತಿದ್ದಾರೆ,” ಎನ್ನುವುದು ಅಕ್ಷಯ್ ಕುಮಾರ್ ಕುರಿತ ಟಿಪ್ಪಣಿ.

‘ಟೈಗರ್ ಜಿಂದಾ ಹೈ’ ಚಿತ್ರದ ಹಾಡು

ಇನ್ನು, 124 ಮಿಲಿಯನ್ ಡಾಲರ್‌ ಗಳಿಕೆಯೊಂದಿಗೆ ಡೇನ್ ಜಾನ್ಸನ್‌ 2ನೇ ಸ್ಥಾನದಲ್ಲಿದ್ದರೆ. 81 ಮಿಲಿಯನ್ ಡಾಲರ್‌ ಗಳಿಸಿರುವ ಕ್ರಿಸ್‌ ಹೆಮ್ಸ್‌ವರ್ಥ್‌ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು ಗಳಿಕೆಯ ಪಟ್ಟಿಯಲ್ಲಿನ ಹತ್ತು ನಟರ ಒಟ್ಟು ಗಳಿಕೆ 784 ಮಿಲಿಯನ್ ಡಾಲರ್‌ ಆಗಿದ್ದರೆ, ನಟಿಯರ ಗಳಿಕೆ 186 ಮಿಲಿಯನ್ ಡಾಲರ್‌. ಹಾಲಿವುಡ್ ನಟಿ ಸ್ಕಾರ್ಲೆಟ್‌ ಜಾನ್ಸನ್‌ 40.5 ಮಿಲಿಯನ್ ಡಾಲರ್‌ ಗಳಿಕೆಯೊಂದಿಗೆ ಅತಿ ಹೆಚ್ಚು ಹಣ ಗಳಿಕೆಯ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More