ವಿಡಿಯೋ ಸಾಂಗ್‌ | ‘ಲವ್ ರಾತ್ರಿ’ ಚಿತ್ರದ ಕ್ಲಬ್‌ ಆಂಥೆಮ್‌ ‘ಅಖ್ ಲಡ್ ಜಾವೇ’

ನಟ ಸಲ್ಮಾನ್ ಖಾನ್, ಈದ್ ಸಂಭ್ರಮಕ್ಕೆ ತಮ್ಮ ‘ಲವ್ ರಾತ್ರಿ’ ಸಿನಿಮಾದ ಹಾಡು ಬಿಡುಗಡೆ ಮಾಡಿದ್ದಾರೆ. ಆಯುಶ್ ಶರ್ಮಾ ಮತ್ತು ವಾರಿನಾ ಹುಸೇನ್‌ ಜೋಡಿಯ ಕ್ಲಬ್ ಸಾಂಗ್‌ ‘ಅಖ್ ಲಡ್ ಜಾವೇ’ ಆಕರ್ಷಕ ಮೇಕಿಂಗ್‌ನಿಂದ ಸಿನಿಪ್ರೇಮಿಗಳನ್ನು ಸೆಳೆಯುತ್ತಿದೆ. ‌ಅಕ್ಟೋಬರ್ 5ರಂದು ಚಿತ್ರ ತೆರೆಕಾಣಲಿದೆ

ಶೀರ್ಷಿಕೆಯಿಂದ ವಿವಾದಕ್ಕೆ ಗುರಿಯಾಗಿದ್ದ ‘ಲವ್ ರಾತ್ರಿ’ ಹಿಂದಿ ಚಿತ್ರದ ಮೊದಲ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಬಾಲಿವುಡ್‌ ಹೀರೋ ಸಲ್ಮಾನ್ ಖಾನ್‌, ತಮ್ಮ ತಂಗಿಯ ಗಂಡ ಆಯುಶ್‌ ಶರ್ಮಾ ಅವರನ್ನು ತೆರೆಗೆ ಪರಿಚಯಿಸುತ್ತಿರುವ ಚಿತ್ರವಿದು. ಸಲ್ಮಾನ್ ಪ್ರತಿವರ್ಷ ಈದ್ ಆಚರಣೆ ಸಂದರ್ಭದಲ್ಲಿ ಅಭಿಮಾನಿಗಳಿಗೆ ಒಂದಲ್ಲ ಒಂದು ರೀತಿಯ ಉಡುಗೊರೆ ನೀಡುತ್ತಿರುತ್ತಾರೆ. ಈ ಬಾರಿ ಈದ್‌ಗೆ ಉಡುಗೊರೆಯಾಗಿ ‘ಲವ್ ರಾತ್ರಿ’ ಚಿತ್ರದ ‘ಅಖ್ ಲಡ್ ಜಾವೇ’ ರೊಮ್ಯಾಂಟಿಕ್ ವಿಡಿಯೋ ಸಾಂಗ್ ರಿಲೀಸ್ ಮಾಡಿದ್ದಾರೆ.

ಅಭಿರಾಜ್ ಮಿನಾವಾಲಾ ನಿರ್ದೇಶನದ ಚೊಚ್ಚಲ ಚಿತ್ರವಿದು. ಆಯುಶ್ ಶರ್ಮಾ ಜೋಡಿಯಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಮಾಡೆಲ್‌ ವಾರಿನಾ ಹುಸೇನ್‌ ಇದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಟ್ರೈಲರ್ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಯಾಗಿಸಿತ್ತು. ಈಗ ಬಿಡುಗಡೆಯಾಗಿರುವ ವಿಡಿಯೋ ಸಾಂಗ್‌ ಆಕರ್ಷಕವಾಗಿದ್ದು, ಸಿನಿಪ್ರೇಮಿಗಳನ್ನು ಸೆಳೆಯುತ್ತಿದೆ. ಇದೊಂದು ಕ್ಲಬ್ ಸಾಂಗ್ ಆಗಿದ್ದು, ಅಸೀಸ್ ಕೌರ್ ಮತ್ತು ಜುಬಿನ್ ನಟಿಯಾಲ್ ಹಾಡಿಗೆ ದನಿಯಾಗಿದ್ದಾರೆ.

ಇದನ್ನೂ ಓದಿ : ಟ್ರೈಲರ್ | ಸಲ್ಮಾನ್‌ ಖಾನ್ ನಿರ್ಮಾಣದ ‌ಆಯುಶ್- ವರೀನಾ ‘ಲವ್‌ರಾತ್ರಿ’

ನಿರ್ದೇಶಕ ಅಭಿರಾಜ್‌ ಮಿನಾವಾಲಾ ತಮ್ಮ ಚಿತ್ರದ ಬಗ್ಗೆ ಮಾತನಾಡುತ್ತ, “ಸುಶ್ರುತ ಮತ್ತು ಮನೀಶಾ ಅವರ ಸಮಕಾಲೀನ ಪ್ರೀತಿಯ ಚಿತ್ರಣ ಇಲ್ಲಿದೆ. ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಡೆಯುವ ಪ್ರೇಮಕತೆ ಇದು,” ಎನ್ನುತ್ತಾರೆ. ಅನ್ಶುಮಾನ್‌ ಝಾ, ರೋನಿತ್ ರಾಯ್‌, ರಾಮ್ ಕಪೂರ್‌, ಪ್ರಚಿ ಶಾ, ಪ್ರತೀಕ್‌ ಗಾಂಧಿ ಚಿತ್ರದ ಇತರ ಪಾತ್ರಗಳಲ್ಲಿದ್ದಾರೆ. ಸಲ್ಮಾನ್‌, ಅರ್ಬಾಜ್‌ ಮತ್ತು ಸೊಹೈಲ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತನಿಶ್ಕ್‌ ಬಾಗ್ಚಿ, ಡಿಜೆ ಚೇತಾಸ್ ಮತ್ತು ಲಿಜೋ ಜಾರ್ಜ್‌ ಸಂಗೀತ ಸಂಯೋಜಿಸಿದ್ದಾರೆ. 2018ರ ಅಕ್ಟೋಬರ್ 5ರಂದು ಸಿನಿಮಾ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More