ಟ್ರೈಲರ್‌ | ವಾರ್ ಜರ್ನಲಿಸ್ಟ್‌ ಮೇರಿ ಕಾಲ್ವಿನ್‌ ಬಯೋಪಿಕ್‌ ‘ಎ ಪ್ರೈವೇಟ್ ವಾರ್‌’

‘ಎ ಪ್ರೈವೇಟ್‌ ವಾರ್‌’ ಇಂಗ್ಲಿಷ್‌ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಇದು ವಾರ್ ಜರ್ನಲಿಸ್ಟ್‌ ಮೇರಿ ಕಾಲ್ವಿನ್‌ ಬಯೋಪಿಕ್. ಕಾಲ್ವಿನ್‌ ಪಾತ್ರದಲ್ಲಿ ನಟಿ ರೋಸ್‌ಮಂಡ್‌ ಪೈಕ್‌ ನಟಿಸಿದ್ದಾರೆ. ಆಕರ್ಷಕ ಟ್ರೈಲರ್‌ನಲ್ಲಿ ಯುದ್ಧಭೂಮಿಯಲ್ಲಿನ ಕಾಲ್ವಿನ್‌ ಅವರ ಧೈರ್ಯ, ಬದ್ಧತೆಯ ಚಿತ್ರಣವಿದೆ

ಬ್ರಿಟಿಷ್‌ ವಾರ್ ಜರ್ನಲಿಸ್ಟ್‌ ಮೇರಿ ಕಾಲ್ವಿನ್‌ ಬಯೋಪಿಕ್‌ ‘ಎ ಪ್ರೈವೇಟ್ ವಾರ್‌’ ಟ್ರೈಲರ್ ಬಿಡುಗಡೆಯಾಗಿದೆ. ಮ್ಯಾಥ್ಯೂ ಹೀನ್‌ಮ್ಯಾನ್‌ ನಿರ್ದೇಶನದ ಈ ಚಿತ್ರದ ಟ್ರೈಲರ್‌ನಲ್ಲಿ ಯುದ್ಧಭೂಮಿಯಲ್ಲಿನ ಕಾಲ್ವಿನ್‌ರ ಧೈರ್ಯ, ಬದ್ಧತೆ, ಹೋರಾಟದ ಚಿತ್ರಣ ಕಂಡುಬರುತ್ತದೆ. ಕಾಲ್ವಿನ್ ಪಾತ್ರದಲ್ಲಿ ‘ಗಾನ್‌ ಗರ್ಲ್‌’ ಸಿನಿಮಾ ಖ್ಯಾತಿಯ ರೋಸ್‌ಮಂಡ್‌ ಪೈಕ್‌ ನಟಿಸಿದ್ದಾರೆ. ಶ್ರೀಲಂಕಾ ಯುದ್ಧದ (2001) ವರದಿ ಮಾಡುವ ಸಂದರ್ಭದಲ್ಲಿ ಕಾಲ್ವಿನ್‌ ತಮ್ಮ ಎಡಗಣ್ಣು ಕಳೆದುಕೊಂಡಿದ್ದರು. ಅಂತೆಯೇ, ನಟಿ ರೊಸ್‌ಮಂಡ್ ಚಿತ್ರದಲ್ಲಿ‌ ‘ಐ ಪ್ಯಾಚ್‌’ನೊಂದಿಗೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : ಟ್ರೈಲರ್‌ | ಗ್ಯಾಂಗ್‌ಸ್ಟರ್ ಸಿನಿಮಾದೊಂದಿಗೆ ಮರಳಿದ ನಿರ್ದೇಶಕ ಮಣಿರತ್ನಂ

ಬದ್ಧತೆಯಿಂದ ಕೆಲಸ ಮಾಡುತ್ತಿದ್ದ ಕಾಲ್ವಿನ್‌ ಸತ್ಯದ ಆನ್ವೇಷಣೆ ನಡೆಸಿದವರು. ಜೀವದ ಹಂಗು ತೊರೆದು ಯುದ್ಧಭೂಮಿಗಳಿಗೆ ಹೋಗಿ ವರದಿ ಮಾಡಿದ ಸಾಹಸಿ ಪತ್ರಕರ್ತೆ. ಅಮೆರಿಕ ಮೂಲದ ಅವರಿಗೆ ಈಗ 56 ವರ್ಷ. ಒಂದು ಕಾಲಘಟ್ಟದ ಜನಪ್ರಿಯ ವಾರ್ ಜರ್ನಲಿಸ್ಟ್‌ ಅವರು. ಚಿತ್ರದಲ್ಲಿ ಕಾಲ್ವಿನ್‌ ಅವರ ಫೋಟೋಗ್ರಾಫರ್‌ ಪೌಲ್ ಕಾನ್‌ರೇ ಪಾತ್ರದಲ್ಲಿ ನಟ ಜೆಮಿ ಡಾರ್ನಾನ್‌ ನಟಿಸಿದ್ದಾರೆ. ಸ್ಟೇನ್ಲೇ ತುಸ್ಸಿ ಮತ್ತು ಟಾಮ್ ಹಾಲಾಂಡರ್‌ ಚಿತ್ರದ ಪ್ರಮುಖ ಕಲಾವಿದರು. ನವೆಂಬರ್‌ 2ರಂದು ಸಿನಿಮಾ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More