ನೆಟ್‌ಫ್ಲಿಕ್ಸ್‌ ತುಂಬಾ ರಾಧಿಕಾ ಆಪ್ಟೆ; ಟ್ರಾಲ್‌ಗೆ ನಟಿಯ ವಿಡಿಯೋ ಪ್ರತಿಕ್ರಿಯೆ

ಸ್ಟ್ರೀಮಿಂಗ್‌ ದೈತ್ಯ ನೆಟ್‌ಫ್ಲಿಕ್ಸ್‌ನ ಇತ್ತೀಚಿನ ಮೂರು ಸರಣಿಗಳಲ್ಲಿ ಬಾಲಿವುಡ್ ನಟಿ ರಾಧಿಕಾ ಆಪ್ಟೆ ನಟಿಸಿದ್ದರು. ಟ್ವೀಟಿಗರು ಈ ಬಗ್ಗೆ ಕಟಕಿಯಾಡುತ್ತ ತಮಾಷೆಯ ಕಾಮೆಂಟ್‌ಗಳನ್ನು ಹಾಕಿದ್ದರು. ಟ್ರಾಲ್‌ಗಳಿಗೆ ಉತ್ತರಿಸಲೆಂದೇ ಸಿದ್ಧಪಡಿಸಿರುವ ‘ಒಮ್ನಿಪ್ರೆಸೆಂಟ್‌’ ವಿಡಿಯೋ ಗಮನ ಸೆಳೆಯುತ್ತಿದೆ

ಬಾಲಿವುಡ್‌ ನಟಿ ರಾಧಿಕಾ ಆಪ್ಟೆ ಈ ವರ್ಷದ ಮೂರು ನೆಟ್‌ಫ್ಲಿಕ್ಸ್‌ ಸರಣಿಗಳಲ್ಲಿ ನಟಿಸಿದ್ದರು. ‘ಲಸ್ಟ್‌ ಸ್ಟೋರೀಸ್‌’, ‘ಸೇಕ್ರೆಡ್ ಗೇಮ್ಸ್‌’ ಫಸ್ಟ್‌ ಸೀಸನ್‌ ಮತ್ತು ಹಾರರ್‌ ಸೀರೀಸ್‌ ‘ಘೋಲ್‌’ನಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಇದೀಗ ರಾಧಿಕಾ ನೆಟ್‌ಫ್ಲಿಕ್ಸ್‌ನ ಮುಂದಿನ ಸರಣಿಗಳಲ್ಲೂ ನಟಿಸುವ ಸೂಚನೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಟ್ವಿಟರ್‌ನಲ್ಲಿ ಅವರು ಟ್ರಾಲ್‌ ಆಗಿದ್ದಾರೆ. ಅವರನ್ನು ‘ನೆಟ್‌ಫ್ಲಿಕ್ಸ್‌ ಹಿರೋಯಿನ್’ ಎಂದು ಕೆಲವರು ತಮಾಷೆ ಮಾಡಿದ್ದಾರೆ. ನೆಟ್‌ಫ್ಲಿಕ್ಸ್‌ ತನ್ನ ಹಕ್ಕುಗಳನ್ನು ರಾಧಿಕಾಗೆ ಸಮರ್ಪಿಸಿದೆ ಎನ್ನುವುದು ಮತ್ತೊಂದು ಕಮೆಂಟ್‌. ಹೀಗೆ, ಗ್ರಾಫಿಕ್ಸ್‌ ಮಾಡಿದ ರಾಧಿಕಾ ಇಮೇಜ್‌ಗಳೊಂದಿಗೆ ಹಲವಾರು ಕಮೆಂಟ್‌ಗಳಿವೆ.

ತಮ್ಮ ಕುರಿತ ಕಾಮೆಂಟ್‌ಗಳನ್ನು ನಟಿ ರಾಧಿಕಾ ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ. ಇದಕ್ಕೆ ಸಮರ್ಥನೆ ನೀಡಲೆಂದೇ ಅವರು ‘ಓಮ್ನಿಪ್ರಸೆಂಟ್‌’ ವಿಡಿಯೋ ಸಿದ್ಧಪಡಿಸಿದ್ದಾರೆ. ಈ ವಿಡಿಯೋದಲ್ಲಿ ‘ಸೇಕ್ರೆಡ್‌ ಗೇಮ್ಸ್‌’ನಲ್ಲಿ ಅವರನ್ನು ನಿರ್ದೇಶಿಸಿದ್ದ ಬಾಲಿವುಡ್ ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ಕೂಡ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ರಾಧಿಕಾ ಅವರ ನಟನೆ, ವೃತ್ತಿಪರತೆ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಶಕೀಲಾ ಜೊತೆ ಮಾತನಾಡಿದ ನಂತರವೇ ಪಾತ್ರ ಒಪ್ಪಿದ್ದ ರಿಚಾ

ಈ ವಿಡಿಯೋದಲ್ಲಿ ನಟಿ ರಾಧಿಕಾ, ನೆಟ್‌ಫ್ಲಿಕ್ಸ್‌ ಸರಣಿಗಳಲ್ಲಿನ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದ್ದು, ಮುಂದೆಯೂ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸೂಚನೆ ನೀಡಿದ್ದಾರೆ. ಈ ಮೇಕಿಂಗ್ ವಿಡಿಯೋ ಆಕರ್ಷಕವಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆ ಪಡೆಯುತ್ತಿದೆ. ನೆಟ್‌ಫ್ಲಿಕ್ಸ್ ಕೂಡ ಪೋಸ್ಟರ್‌ ಶೇರ್ ಮಾಡಿದೆ.

ರಾಧಿಕಾ ಆಪ್ಟೆ ಕುರಿತ ಕೆಲವು ತಮಾಷೆಯ ಟ್ವೀಟ್‌ಗಳು

ನೆಟ್‌ಫ್ಲಿಕ್ಸ್‌ ಪೋಸ್ಟ್‌ ಮಾಡಿರುವ ‘ಓಮ್ನಿಪ್ರೆಸೆಂಟ್‌’ ಪೋಸ್ಟರ್‌ ಮತ್ತು ವಿಡಿಯೋ

Radhika made this poster herself.

A post shared by Netflix India (@netflix_in) on

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More