ಟ್ರೈಲರ್‌ | ಪೃಥ್ವಿರಾಜ್‌ ನಟನೆಯ ಆಕ್ಷನ್ ಡ್ರಾಮಾ ಮಲಯಾಳಂ ಸಿನಿಮಾ ‘ರಣಂ’

ಪ್ರವಾಹದಿಂದ ಸಂಕಷ್ಟಕ್ಕೀಡಾದ ಕೇರಳ ನಾಡಿನಲ್ಲಿ ಅಲ್ಲಿನ ಚಿತ್ರರಂಗ ಸಹಜ ಸ್ಥಿತಿಗೆ ಮರಳುತ್ತಿದೆ. ಚಿತ್ರಗಳು ಬಿಡುಗಡೆಗೆ ಸಾಲುಗಟ್ಟಿ ನಿಂತಿವೆ. ಪೃಥ್ವಿರಾಜ್‌ ಅವರ ‘ರಣಂ’ ಮಲಯಾಳಂ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಆಕ್ಷನ್‌-ಥ್ರಿಲ್ಲರ್‌ ಕಥಾವಸ್ತುವಿನಿಂದಾಗಿ ವಿಡಿಯೋ ಗಮನ ಸೆಳೆಯುತ್ತದೆ.

ನಟ ಪೃಥ್ವಿರಾಜ್ ನಟನೆಯ ‘ರಣಂ’ ಮಲಯಾಳಂ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಎನ್ನುವುದರ ಸೂಚನೆ ಸಿಗುತ್ತದೆ. ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಯುವಕನ ಪಾತ್ರದಲ್ಲಿ ಪೃಥ್ವಿರಾಜ್ ಕಾಣಿಸಿಕೊಂಡಿದ್ದಾರೆ. ಆಕಸ್ಮಿಕವಾಗಿ ಆತ ಅಲ್ಲಿನ ಅವ್ಯವಹಾರಗಳಲ್ಲಿ ಭಾಗಿಯಾಗುವುದು, ಅದರಿಂದ ಆತನ ಬದುಕಿನಲ್ಲಾಗುವ ಪಲ್ಲಟಗಳು, ಭೂಗತ ಜಗತ್ತಿನ ತೊಡಕುಗಳಿಂದ ಬಿಡಿಸಿಕೊಳ್ಳಲು ಆತ ನಡೆಸುವ ಹೋರಾಟ ಚಿತ್ರದ ಕಥಾವಸ್ತು.

ಇದನ್ನೂ ಓದಿ : ಟ್ರೈಲರ್‌ | ಅಟ್ಕಿನ್ಸನ್‌ ಅಭಿನಯದ ‘ಜಾನಿ ಇಂಗ್ಲಿಷ್‌ ಸ್ಟ್ರೈಕ್ಸ್‌ ಎಗೈನ್‌’

ಪ್ರತಿಭಾವಂತ ನಟ ರೆಹಮಾನ್ ಚಿತ್ರದ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ರೊಮ್ಯಾಂಟಿಕ್, ಪೋಲಿಸ್ ಪಾತ್ರಗಳಲ್ಲಿ ಮೆಚ್ಚುಗೆ ಗಳಿಸಿದ್ದ ರೆಹಮಾನ್ ಮೊದಲ ಬಾರಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಇಷಾ ತಲ್ವಾರ್ ನಟಿಸಿದ್ದು, ಸೆ.6ರಂದು ‘ರಣಂ’ ಬಿಡುಗಡೆಯಾಗಲಿದೆ. ಈ ಹಿಂದೆ ‘ಹೇ ಜ್ಯೂಡ್‌’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ನಿರ್ಮಲ್ ಸಹದೇವ್ ‘ರಣಂ’ಗೆ ಚಿತ್ರಕತೆ ರಚಿಸಿ ನಿರ್ದೇಶನ ಮಾಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More