ವಿಡಿಯೋ | ಟೀವಿ ಶೋನಲ್ಲಿ ಶಾರುಖ್‌, ಸಲ್ಮಾನ್‌, ರಾಣಿ ಮುಖರ್ಜಿ ತಮಾಷೆ

ಸಲ್ಮಾನ್ ಖಾನ್‌ ನಿರೂಪಣೆಯ ‘ದಸ್‌ ಕಾ ದಮ್‌’ ಸೀಸನ್‌ 3 ಶೋ ಮುಕ್ತಾಯವಾಗುತ್ತಿದೆ. ಕಾರ್ಯಕ್ರಮದ ಫಿನಾಲೆಯಲ್ಲಿ ಬಾಲಿವುಡ್‌ ತಾರೆಯರಾದ ಶಾರುಖ್‌, ರಾಣಿ ಮುಖರ್ಜಿ ಪಾಲ್ಗೊಂಡಿದ್ದರು. ಅಲ್ಲಿನ ತಮಾಷೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಟ ಸಲ್ಮಾನ್ ಖಾನ್ ಹಿಂದಿ ಕಿರುತೆರೆಯ ‘ಬಿಗ್‌ ಬಾಸ್‌’ 12ನೇ ಸೀಸನ್‌ ನಿರೂಪಿಸಲು ಸಜ್ಜಾಗುತ್ತಿದ್ದಾರೆ. ಇದಕ್ಕೂ ಮುನ್ನ ಅವರ ನಿರೂಪಣೆಯ ‘ದಸ್ ಕಾ ದಮ್‌’ ಸೀಸನ್‌ 3 ಮುಕ್ತಾಯವಾಗುತ್ತಿದೆ. ಈ ಯಶಸ್ವಿ ಶೋನ ಫಿನಾಲೆಯಲ್ಲಿ ಸಲ್ಮಾನ್‌ಗೆ ಬಾಲಿವುಡ್ ತಾರೆಯರಾದ ಶಾರುಖ್ ಖಾನ್, ರಾಣಿ ಮುಖರ್ಜಿ ಜೊತೆಯಾಗಿದ್ದರು. ಅಲ್ಲಿ ಕಮಿಡಿಯನ್‌ ಸುನೀಲ್ ಗ್ರೋವರ್‌ ಅವರು ನಟ ಅಮಿತಾಭ್‌ ಬಚ್ಚನ್‌ ಗೆಟಪ್‌ನಲ್ಲಿ ಕಾಣಿಸಿಕೊಂಡದ್ದು ವಿಶೇಷ.

ಇವರೆಲ್ಲರ ಹಾಸ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಓಡುತ್ತಿದೆ. ಸಲ್ಮಾನ್ ಮತ್ತು ಶಾರುಖ್‌ ಇಬ್ಬರೂ ‘ಕರಣ್‌ ಅರ್ಜುನ್‌’ (1995) ಚಿತ್ರದಲ್ಲಿ ಸಹೋದರರಾಗಿ ಕಾಣಿಸಿಕೊಂಡಿದ್ದರು. ನಂತರ ‘ಕುಚ್‌ ಕುಚ್ ಹೋತಾ ಹೈ’, ‘ಹರ್ ದಿಲ್‌ ಜೋ ಪ್ಯಾರ್ ಕರೇಗಾ’ ಇತ್ತೀಚಿನ ‘ಟ್ಯೂಬ್‌ಲೈಟ್‌’ನಲ್ಲೂ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೇ ವರ್ಷ ಡಿಸೆಂಬರ್‌ನಲ್ಲಿ ತೆರೆಕಾಣಲಿರುವ ಶಾರುಖ್‌ ಅಭಿನಯದ ‘ಜೀರೋ’ ಚಿತ್ರದಲ್ಲಿ ಸಲ್ಲೂ ಅತಿಥಿ ಪಾತ್ರದಲ್ಲಿದ್ದಾರೆ.

ಇದನ್ನೂ ಓದಿ : ವಿಡಿಯೋ ಸಾಂಗ್‌ | ಶಾಹೀದ್, ಶ್ರದ್ಧಾ ಕಪೂರ್‌ ‘ಹಾರ್ಡ್‌ ಹಾರ್ಡ್‌’ ಡಾನ್ಸ್

ಫಿನಾಲೆ ಕಾರ್ಯಕ್ರಮದಲ್ಲಿ ಇವರಿಬ್ಬರು ತಾವು ಜೊತೆಯಾಗಿ ನಟಿಸಿರುವ ಚಿತ್ರಗಳಲ್ಲಿನ ಪಾತ್ರಗಳನ್ನು ಸ್ಮರಿಸುತ್ತಲೇ ಅನುಕರಣೆ ಮಾಡಿದರು. ಇಬ್ಬರು ಸ್ಟಾರ್ ಹೀರೋಗಳೊಂದಿಗೆ ರಾಣಿ ಮುಖರ್ಜಿಯ ತಮಾಷೆ ಕಾಲೆಳೆತ ಹಾಗೂ ಇತರ ಚಟುವಟಿಕೆಗಳು ತಮಾಷೆಯಾಗಿವೆ. ಮೂವರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಮುದ ನೀಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More