ಟ್ರೈಲರ್‌ | ಆರ್ಸನ್‌ ವೆಲ್ಲಿಸ್‌ ನಿರ್ದೇಶನದ ‘ದಿ ಅದರ್‌ ಸೈಡ್ ಆಫ್‌ ದಿ ವಿಂಡ್’

ಎಪ್ಪತ್ತರ ದಶಕದ ಜನಪ್ರಿಯ ಚಿತ್ರನಿರ್ದೇಶಕರ ಕುರಿತ ‘ಮಾಕ್ಯುಮೆಂಟರಿ’ ಸಿನಿಮಾ ‘ದಿ ಅದರ್ ಸೈಡ್ ಆಫ್‌ ದಿ ವಿಂಡ್’ ಟ್ರೈಲರ್ ಬಿಡುಗಡೆಯಾಗಿದೆ. ಆರ್ಸನ್‌ ವೆಲ್ಲಿಸ್ ನಿರ್ದೇಶನದಲ್ಲಿ ಜಾನ್ ಹಸ್ಟನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ನವೆಂಬರ್ 2ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ

ಆರ್ಸನ್‌ ವೆಲ್ಲಿಸ್ ನಿರ್ದೇಶನದ ‘ದಿ ಅದರ್ ಸೈಡ್ ಆಫ್‌ ದಿ ವಿಂಡ್’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಎಪ್ಪತ್ತರ ದಶಕದ ಹಾಲಿವುಡ್‌ನ ಸ್ಟಾರ್‌ ನಿರ್ದೇಶಕರ ಕುರಿತಾದ ‘ಮಾಕ್ಯುಮೆಂಟರಿ’ ಸಿನಿಮಾ ಇದು. 1970ರಿಂದ 1976ರ ಅವಧಿಯಲ್ಲಿ ಚಿತ್ರಿಸಿದ್ದ ಸಿನಿಮಾ ಆರ್ಥಿಕ ಸಂಕಷ್ಟದಿಂದಾಗಿ ಸ್ಥಗಿತಗೊಂಡಿತ್ತು. ಕಳೆದ ವರ್ಷ ನೆಟ್‌ಫ್ಲಿಕ್ಸ್‌ ಈ ಚಿತ್ರದ ಹಕ್ಕುಗಳನ್ನು ಖರೀದಿಸಿ ದೃಶ್ಯಗಳ ಮರುಜೋಡಣೆಗೆ ತಂಡವೊಂದನ್ನು ನೇಮಿಸಿತ್ತು. ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಕ್ತಾಯವಾಗಿದ್ದು ಸಿನಿಮಾ ಸಿದ್ಧವಾಗಿದೆ.

ಇದನ್ನೂ ಓದಿ : ಟ್ರೈಲರ್‌ | ಪೃಥ್ವಿರಾಜ್‌ ನಟನೆಯ ಆಕ್ಷನ್ ಡ್ರಾಮಾ ಮಲಯಾಳಂ ಸಿನಿಮಾ ‘ರಣಂ’

‘ದಿ ಅದರ್ ಸೈಡ್ ಆಫ್‌ ದಿ ವಿಂಡ್‌’ನ ಜೇಕ್‌ ಹ್ಯಾನ್‌ಫೋರ್ಡ್‌ ಪಾತ್ರದಲ್ಲಿ ಅಮೆರಿಕದ ನಿರ್ದೇಶಕ ಜಾನ್‌ ಹಸ್ಟನ್‌ ನಟಿಸಿದ್ದಾರೆ. ಪೀಟರ್‌ ಬಾಡ್ಜ್‌ನೊವಿಕ್‌ ಯುವ ಚಿತ್ರನಿರ್ದೇಶಕನಾಗಿ, ಸುಸಾನ್‌ ಸ್ಟ್ರಾಸ್‌ಬರ್ಗ್‌ ಚಿತ್ರವಿಮರ್ಶಕನಾಗಿ ಕಾಣಿಸಿಕೊಂಡಿದ್ದಾರೆ. ‘ದಿ ಅದರ್ ಸೈಡ್ ಆಫ್‌ ದಿ ವಿಂಡ್‌’ ಮೇಕಿಂಗ್ ಕುರಿತಾಗಿ ನೆಟ್‌ಫ್ಲಿಕ್ಸ್‌ ‘ದೆ ವಿಲ್ ಲವ್ ಮಿ ವೆನ್‌ ಐ ಆಮ್ ಡೆಡ್‌’ ಶೀರ್ಷಿಕೆಯಡಿ ಡಾಕ್ಯುಮೆಂಟರಿ ತಯಾರಿಸಿದೆ. ಮಾರ್ಗನ್‌ ನೆವಿಲ್‌ ಈ ಡಾಕ್ಯುಮೆಂಟರಿ ನಿರ್ದೇಶಿಸಿದ್ದಾರೆ. ನಾಳೆ (ಆ.31) ವೆನಿಸ್ ಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ನವೆಂಬರ್ 2ರಂದು ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More