ಟ್ರೈಲರ್‌ | ನಾಗ ಚೈತನ್ಯ, ರಮ್ಯಾ ಕೃಷ್ಣ ಸಿನಿಮಾ ‘ಶೈಲಜಾ ರೆಡ್ಡಿ ಅಲ್ಲುಡು’ 

ಜನಪ್ರಿಯ ‘ಅಲ್ಲುಡು’ ತೆಲುಗು ಸಿನಿಮಾಗಳ ಪಟ್ಟಿಗೆ ಹೊಸ ಸೇರ್ಪಡೆ ‘ಶೈಲಜಾ ರೆಡ್ಡಿ ಅಲ್ಲುಡು.’ ನಾಗ ಚೈತನ್ಯ ಮತ್ತು ರಮ್ಯಾ ಕೃಷ್ಣ ಅಭಿನಯದ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ತೆಳು ಹಾಸ್ಯದ ನಿರೂಪಣೆಯ ಫ್ಯಾಮಿಲಿ ಎಂಟರ್‌ಟೇನರ್‌ ಎನಿಸಿಕೊಂಡ ಈ ಸಿನಿಮಾ ಸೆ.13ರಂದು ತೆರೆಕಾಣಲಿದೆ

ಮಾರುತಿ ದಾಸರಿ ನಿರ್ದೇಶನದಲ್ಲಿ ನಾಗ ಚೈತನ್ಯ, ರಮ್ಯಾ ಕೃಷ್ಣ, ಅನು ಎಮ್ಯಾನ್ಯುಯೆಲ್‌ ನಟಿಸಿರುವ ‘ಶೈಲಜಾ ರೆಡ್ಡಿ ಅಲ್ಲುಡು’ ತೆಲುಗು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಎರಡು ನಿಮಿಷಗಳ ಟ್ರೈಲರ್‌ನಲ್ಲಿ ಪ್ರೀತಿಸುವ ಹುಡುಗಿಗಾಗಿ ನಾಗ ಚೈತನ್ಯ ಪಡುವ ಪಡಿಪಾಟಲುಗಳನ್ನು ತೆಳುಹಾಸ್ಯದಲ್ಲಿ ನಿರೂಪಿಸಲಾಗಿದೆ. ಜಂಭದ ತಾಯಿಗೆ, ಅತೀ ಜಂಭದ ಮಗಳು, ತಾಯಿ-ಮಗಳಿಬ್ಬರ ಜಟಾಪಟಿಯಲ್ಲಿ ಬಡವಾಗುವ ಶೈಲಜಾ ರೆಡ್ಡಿಯ ಆಪ್ತಸಹಾಯಕ ಮಾಣಿಕ್ಯಂ ನಟನೆಯ ಸನ್ನಿವೇಶಗಳು ಹಾಸ್ಯಮಯವಾಗಿವೆ.

ಶೈಲಜಾ ರೆಡ್ಡಿ ಮಗಳನ್ನು ಪ್ರೀತಿಸುವ ಚೈತನ್ಯ, ತನ್ನ ಪ್ರೀತಿ ಉಳಿಸಿಕೊಳ್ಳಲು ಅತ್ತೆ ಶೈಲಜಾಳನ್ನು ಮೆಚ್ಚಿಸಬೇಕಾದ ಅನಿವಾರ್ಯತೆಗಳನ್ನು ಎದುರಿಸುತ್ತಾನೆ. ಅತ್ತೆಯನ್ನು ಒಲಿಸಿಕೊಳ್ಳುವಲ್ಲಿನ ಆತನ ತಾಪತ್ರಯಗಳು ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುವಂತಿವೆ. ಟ್ರೈಲರ್‌ನಲ್ಲಿ ರಮ್ಯಾ ಕೃಷ್ಣ ಅವರು ತಮ್ಮ ವೃತ್ತಿಬದುಕಿಗೆ ತಿರುವು ನೀಡಿದ ‘ಪಡಿಯಪ್ಪ’ ಚಿತ್ರದಲ್ಲಿನ ಪಾತ್ರದಂತೆ ಕಾಣಿಸಿಕೊಂಡಿದ್ದಾರೆ. ನಾಗ ಚೈತನ್ಯ ಮತ್ತು ಅನು ಎಮ್ಯಾನ್ಯುಯೆಲ್ ಜೋಡಿ ಮುದ್ದಾಗಿ ಕಾಣಿಸುತ್ತದೆ.

ಇದನ್ನೂ ಓದಿ : ಟ್ರೈಲರ್‌ | ಆರ್ಸನ್‌ ವೆಲ್ಲಿಸ್‌ ನಿರ್ದೇಶನದ ‘ದಿ ಅದರ್‌ ಸೈಡ್ ಆಫ್‌ ದಿ ವಿಂಡ್’

ನಾಗಾರ್ಜುನ ಅಭಿನಯದ ‘ಅಲ್ಲರಿ ಅಲ್ಲುಡು’, ಚಿರಂಜೀವಿ ಅವರ ‘ರೌಡಿ ಅಲ್ಲುಡು’, ಜೂನಿಯರ್ ಎನ್‌ಟಿಆರ್‌ ಅಭಿನಯದ ‘ಅಲ್ಲರಿ ರಾಮುಡು’ ಚಿತ್ರಗಳ ಸಾಲಿನಲ್ಲಿ ‘ಶೈಲಜಾ ರೆಡ್ಡಿ ಅಲ್ಲುಡು’ ನಿಲ್ಲುತ್ತದೆ. ಹಿಂದಿನ ‘ಅಲ್ಲುಡು’ ಚಿತ್ರಗಳಿಗಿಂತ ಹೊಸ ಸಿನಿಮಾ ಯಾವ ರೀತಿ ಭಿನ್ನವಾಗಿರಲಿದೆ ಎಂದು ನೋಡಬೇಕು. ಫ್ಯಾಮಿಲಿ ಎಂಟರ್‌ಟೇನರ್‌ ಎನಿಸಿಕೊಂಡ ಈ ಸಿನಿಮಾ ಸೆಪ್ಟೆಂಬರ್ 13ರಂದು ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More