ಟ್ರೈಲರ್‌ | ಅಮೆರಿಕ ಅಧ್ಯಕ್ಷ ಚುನಾವಣೆ ಕುರಿತ ಸಿನಿಮಾ ‘ದಿ ಫ್ರಂಟ್‌ ರನ್ನರ್‌’

‘ದಿ ಫ್ರಂಟ್ ರನ್ನರ್‌’ ಇಂಗ್ಲಿಷ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಜೇಸನ್ ರೀಟ್‌ಮ್ಯಾನ್‌ ನಿರ್ದೇಶನದ ಬಯೋಗ್ರಫಿಕಲ್ ಡಾರ್ಕ್ ಕಾಮಿಡಿ ಇದು. 1988ರ ಅಮೆರಿಕ ಅಧ್ಯಕ್ಷ ಚುನಾವಣೆ ಹಿನ್ನೆಲೆಯ ಕಥಾನಕವಿರುವ, ಹ್ಯೂಜ್‌ ಜ್ಯಾಕ್‌ಮ್ಯಾನ್‌ ನಟಿಸಿರುವ ಈ ಚಿತ್ರ ನ.7ರಂದು ತೆರೆಕಾಣಲಿದೆ

ಬಯೋಗ್ರಫಿಕಲ್ ಡಾರ್ಕ್ ಕಾಮಿಡಿ ‘ದಿ ಫ್ರಂಟ್ ರನ್ನರ್‌’ ಇಂಗ್ಲಿಷ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಜೇಸನ್‌ ರೀಟ್‌ಮ್ಯಾನ್‌ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರದಲ್ಲಿ ಹ್ಯೂಜ್‌ ಜ್ಯಾಕ್‌ಮ್ಯಾನ್‌ ನಟಿಸಿದ್ದಾರೆ. ‘ದಿ ಲೊಗಾನ್‌’ (2017) ಸಿನಿಮಾ ಖ್ಯಾತಿಯ ಜ್ಯಾಕ್‌ಮ್ಯಾನ್‌, ಈ ಹೊಸ ಚಿತ್ರದಲ್ಲಿ ಅಮೆರಿಕದ ಡೆಮಾಕ್ರಾಟ್ ಪಕ್ಷದ ನಾಯಕ ಗ್ಯಾರಿ ಹ್ಯಾರ್ಟ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷಗಾದಿ ಆಕಾಂಕ್ಷಿ ಗ್ಯಾರಿ ಹ್ಯಾರ್ಟ್‌ ವಿವಾಹೇತರ ಸಂಬಂಧದ ಆರೋಪದಿಂದಾಗಿ 1988ರ ಚುನಾವಣೆಯಿಂದ ಹೊರಗುಳಿಯುವಂತಾಗುತ್ತದೆ. ಈ ರಾಜಕೀಯ ಬೆಳವಣಿಗೆಗಳ ಸುತ್ತ ನಡೆಯುವ ಕಥಾನಕವಿದು.

ಇದನ್ನೂ ಓದಿ : ಟ್ರೈಲರ್‌ | ಅಟ್ಕಿನ್ಸನ್‌ ಅಭಿನಯದ ‘ಜಾನಿ ಇಂಗ್ಲಿಷ್‌ ಸ್ಟ್ರೈಕ್ಸ್‌ ಎಗೈನ್‌’

ಮ್ಯಾಟ್‌ ಬಾಯ್‌ ರಚನೆಯ ‘ಆಲ್ ದಿ ಟ್ರೂತ್ ಈಸ್ ಔಟ್‌: ದಿ ವೀಕ್‌ ಪಾಲಿಟಿಕ್ಸ್‌ ವೆಂಟ್ ಟ್ಯಾಬ್ಲಾಯ್ಡ್‌’ ಕೃತಿಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ರೀಟ್‌ಮ್ಯಾನ್‌ ಮತ್ತು ಜೇ ಕ್ಯಾರ್ಸನ್‌ ಜೊತೆ ಮ್ಯಾಟ್‌ ಬಾಯ್‌ ಅವರೂ ಚಿತ್ರಕತೆ ರಚನೆಯಲ್ಲಿ ನೆರವಾಗಿದ್ದಾರೆ. ಹ್ಯಾರ್ಟ್‌ ಪತ್ನಿಯಾಗಿ ವೆಜಾ ಫಾರ್ಮಿಗಾ ಮತ್ತು ಹ್ಯಾರ್ಟ್‌ ಕಾಂಪೇನ್‌ ಮ್ಯಾನೇಜರ್‌ ಆಗಿ ಜೆ ಕೆ ಸಿಮನ್ಸ್‌ ನಟಿಸಿದ್ದಾರೆ. ಆಲ್ಫ್ರೆಡ್‌ ಮೊಲಿನಾ ಮತ್ತು ಕಮಿಡಿಯನ್‌ ಬಿಲ್ ಬರ್‌ ಚಿತ್ರದ ಇತರ ಪ್ರಮುಖ ಕಲಾವಿದರು. ಟೆಲ್ಲುರೈಡ್ ಚಿತ್ರೋತ್ಸವದಲ್ಲಿ ಪ್ರೀಮಿಯರ್‌ ಆಗಲಿರುವ ಸಿನಿಮಾ, ನವೆಂಬರ್‌ 7ರಂದು ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More