ಜನುಮದಿನ | ಅನಂತನಾಗ್ ಜನಪ್ರಿಯ ಸಿನಿಮಾ ಹಾಡುಗಳ ವಿಡಿಯೋ

ಹಿರಿಯ ನಟ ಅನಂತನಾಗ್‌ ಇಂದು (ಸೆಪ್ಟೆಂಬರ್‌ 4) ಎಪ್ಪತ್ತನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದೀಗ ಕ್ರಿಯಾಶೀಲ ಯುವ ಚಿತ್ರನಿರ್ದೇಶಕರು ಅವರಿಗೆಂದೇ ಚಿತ್ರಕಥೆ ರಚಿಸುತ್ತಿದ್ದಾರೆ. ತಮ್ಮನ್ನು ಅರಸಿ ಬರುತ್ತಿರುವ ಭಿನ್ನ ಪಾತ್ರಗಳ ಬಗ್ಗೆ ಅನಂತ್‌ರಿಗೆ ಖುಷಿಯಿದೆ. ಅವರ ಸಿನಿಮಾಗಳ ವಿಡಿಯೋ ಹಾಡುಗಳು ಇಲ್ಲಿವೆ.

ಹಿಂದಿ ಸಿನಿಮಾಗಳ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಅನಂತನಾಗ್‌ ಕನ್ನಡಿಗರ ಅತ್ಯಂತ ಪ್ರೀತಿಯ ನಟ. ಬಯಸಿದ್ದರೆ ಅವರು ಹಿಂದಿ ಚಿತ್ರರಂಗದಲ್ಲಿ ನೆಲೆಸಬಹುದಿತ್ತು. ‘ಮೆಥೆಡ್‌ ಆಕ್ಟರ್‌’ ಎಂದೇ ಕರೆಸಿಕೊಳ್ಳುವ ಅವರಿಗೆ ಹೇರಳ ಅವಕಾಶಗಳೂ ಇದ್ದವು. ಆದರೆ ಅನಂತ್‌ ಕನ್ನಡವೇ ಚೆನ್ನ ಎಂದರು. ಅಪರೂಪದ ಪಾತ್ರಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದರು. ಅನಂತನಾಗ್ ಅವರ ಪ್ರತಿಭೆಯನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಅವರ ಸಮಕಾಲೀನ ನಟರು, ತಂತ್ರಜ್ಞರು ಹೇಳುತ್ತಿದ್ದರು. ಏಳೆಂಟು ವರ್ಷಗಳಿಂದೀಚೆಗೆ ಪ್ರತಿಭಾವಂತ ಯುವ ನಿರ್ದೇಶಕರು ಅನಂತ್‌ ಅವರಿಗೆಂದೇ ಚಿತ್ರಕಥೆ ಹೆಣೆಯುತ್ತಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಅವರಿಗೆಂದೇ ಪಾತ್ರಗಳನ್ನು ಸೃಷ್ಟಿಸುತ್ತಿದ್ದಾರೆ. ಅನಂತ್‌ರನ್ನು ಭಿನ್ನ ಪಾತ್ರ, ಸಿನಿಮಾಗಳಲ್ಲಿ ನೋಡಬೇಕಿತ್ತು ಎಂದು ಭಾವಿಸಿದವರಿಗೆ ಇದು ಖುಷಿ ತಂದಿದೆ. ಇತ್ತೀಚಿನ ಹತ್ತಾರು ಸಿನಿಮಾಗಳು ಇದಕ್ಕೆ ಸಾಕ್ಷಿಯಾಗಿವೆ. ಸ್ವತಃ ಅನಂತನಾಗ್‌ ಅವರೂ ತಮ್ಮನ್ನು ದುಡಿಸಿಕೊಳ್ಳುತ್ತಿರುವ ಹೊಸ ತಲೆಮಾರಿನ ತಂತ್ರಜ್ಞರ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ. ಇಂದು ಅನಂತ್‌ 70ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಸಿನಿಮಾಗಳ ಜನಪ್ರಿಯ ಹಾಡುಗಳ ಪಟ್ಟಿಯಲ್ಲಿನ ಆಯ್ದ ಹತ್ತು ವಿಡಿಯೋ ಹಾಡುಗಳು ಇಲ್ಲಿವೆ.

ಬಯಲು ದಾರಿ (1977)

ಚಂದನದ ಗೊಂಬೆ (1979)

ನಾ ನಿನ್ನ ಬಿಡಲಾರೆ (1979)

ಜನುಮ ಜನುಮದ ಅನುಬಂಧ (1980)

ಬಯಲು ದಾರಿ (1977)

ಚಂದನದ ಗೊಂಬೆ (1979)

ಇಬ್ಬನಿ ಕರಗಿತು (1983)

ನೋಡಿ ಸ್ವಾಮಿ ನಾವಿರೋದೇ ಹೀಗೆ (1983)

ಅರುಣರಾಗ (1986)

ಬೆಂಕಿಯ ಬಲೆ (1983)

ಕನ್ನಡ ಸಿನಿಮಾರಂಗದ ಹಿರಿಯ ಕಲಾವಿದ ಸದಾಶಿವ ಬ್ರಹ್ಮಾವರ ಇನ್ನಿಲ್ಲ
ದೇವರಾಜ್‌ ಮಾತು | ಓಡಿಬಂದು ಖಳನನ್ನೇ ಅಪ್ಪಿಕೊಂಡ ‘ಆಗಂತುಕ’ ನಾಯಕಿ!
ಲೇಖಕಿ ವೈದೇಹಿ ಸಣ್ಣಕತೆಗಳನ್ನು ಆಧರಿಸಿದ ಸಿನಿಮಾ ‘ಅಮ್ಮಚ್ಚಿಯೆಂಬ ನೆನಪು’
Editor’s Pick More