ವಿಡಿಯೋ ಸಾಂಗ್ | ‘ಪಟಾಕಾ’ ಚಿತ್ರದ ‘ಹೆಲೋ ಹೆಲೋ’ನಲ್ಲಿ ಮಲೈಕಾ ಮಿಂಚು

ವಿಶಾಲ್ ಭಾರದ್ವಾಜ್‌ ನಿರ್ದೇಶನದ ‘ಪಟಾಕಾ’ ಸಿನಿಮಾದ ‘ಹೆಲೋ ಹೆಲೋ’ ವಿಡಿಯೋ ಹಾಡು ಬಿಡುಗಡೆಯಾಗಿದೆ. ಗುಲ್ಜಾರ್ ರಚನೆಯ ಹಾಡಿಗೆ ಮಲೈಕಾ ಅರೋರಾ ಖಾನ್ ಹೆಜ್ಜೆ ಹಾಕಿದ್ದಾರೆ. ಸಣ್ಣ ಕತೆಯೊಂದರನ್ನು ಆಧರಿಸಿ ತಯಾರಾಗಿರುವ ಸಿನಿಮಾ ಸೆಪ್ಟೆಂಬರ್‌ 28ರಂದು ತೆರೆಕಾಣಲಿದೆ

ವಿಶಾಲ್ ಭಾರದ್ವಾಜ್‌ ನಿರ್ದೇಶನದ ‘ಪಟಾಕಾ’ ಚಿತ್ರದ ‘ಹೆಲೋ ಹೆಲೋ’ ವಿಡಿಯೊ ಸಾಂಗ್ ಬಿಡುಗಡೆಯಾಗಿದೆ. ‘ಬೀಡಿ ಜಲೈಲೇ’, ‘ನಮಕ್ ಇಷ್ಕ್ ಕಾ’ದಂತಹ ಐಟಂ ಸಾಂಗ್‌ಗಳನ್ನು ನೀಡಿದ್ದ ಸಂಗೀತ ನಿರ್ದೇಶಕ ವಿಶಾಲ್ ಭಾರದ್ವಾಜ್‌ ತಮ್ಮ ನಿರ್ದೇಶನದ ಹಳ್ಳಿ ಸೊಗಡಿನ ‘ಪಟಾಕಾ’ ಚಿತ್ರದ ಜಾತ್ರೆಯ ಸನ್ನಿವೇಶವೊಂದಕ್ಕೆ ಈ ಹಾಡು ರಚಿಸಿದ್ದಾರೆ. ಈ ಐಟಂ ಸಾಂಗ್ ಚಿತ್ರದ ಕತೆಯ ಮುಂದುವರಿಕೆಯಂತಿದ್ದು, ಸಹೋದರಿಯರಿಬ್ಬರು ತಮ್ಮ ಪ್ರಿಯಕರರೊಂದಿಗೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : ವಿಡಿಯೋ | ಪ್ರೇಕ್ಷಕನನ್ನುಸೆಳೆದ ಬೆಳ್ಳಿತೆರೆ ಮೇಲಿನ ಪ್ರಭಾವಿ ಶಿಕ್ಷಕ

‘ಹೆಲೋ ಹೆಲೋ’ ಹಲವು ಕಾರಣಗಳಿಂದ ವಿಶೇಷವೆನಿಸುತ್ತದೆ. ಖ್ಯಾತ ಗೀತರಚನೆಕಾರ ಗುಲ್ಜಾರ್ ಗೀತೆಯ ಸಾಹಿತ್ಯ ರಚಿಸಿದ್ದು, ರೇಖಾ ಭಾರದ್ವಾಜ್ ಹಾಡಿದ್ದಾರೆ. ನಟಿ ಮಲೈಕಾ ತಮ್ಮ ಮೋಹಕ ನೃತ್ಯದಿಂದ ಹಾಡಿಗೆ ರಂಗುತಂದಿದ್ದಾರೆ. ಈ ಹಿಂದೆ ‘ದಂಗಲ್’ ಚಿತ್ರದಲ್ಲಿ ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದ ಸಾನ್ಯಾ ಮಲ್ಹೋತ್ರಾ ಮತ್ತು ರಾಧಿಕಾ ಮದನ್ ಚಿತ್ರದಲ್ಲಿ ಸಹೋದರಿಯರಾಗಿ ಕಾಣಿಸಿಕೊಂಡಿದ್ದು, ಹಾಸ್ಯನಟ ಸುನಿಲ್ ಗ್ರೋವರ್ ಕೂಡ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಮಲೈಕಾ ಎಂದಿನಂತೆ ನೃತ್ಯದಲ್ಲಿ ಆಕರ್ಷಿಸಿದರೂ, ಇದು ಕಾಡುವ ಹಾಡಾಗಿ ದಾಖಲಾಗುವುದಿಲ್ಲ. ವಿಶಾಲ್ ಭಾರದ್ವಾಜ್ ಮತ್ತು ಗುಲ್ಜಾರ್‌ ಜೋಡಿಯ ಈ ಹಿಂದಿನ ‘ರಾತ್‌ ಕೆ ಧಾಯಿ ಬಜೆ’ (ಕಮೀನೇ), ‘ದಿಲ್ ತೋ ಬಚಾ (ಇಶ್ಕಿಯಾ) ಹಾಡುಗಳ ಮ್ಯಾಜಿಕ್ ಇಲ್ಲಿಲ್ಲ. ಖ್ಯಾತ ಬರಹಗಾರ ಚರಣ್ ಸಿಂಗ್ ಅವರ ಕತೆಯೊಂದರ ಸ್ಫೂರ್ತಿಯಿಂದ ಈ ‘ಪಟಾಕಾ’ ಕಾಮಿಡಿ-ಡ್ರಾಮಾ ಸಿನಿಮಾ ತಯಾರಾಗಿದೆ. ಸೆಪ್ಟೆಂಬರ್ 28ರಂದು ಸಿನಿಮಾ ಬಿಡುಗಡೆಯಾಗಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More