ಯುಎಸ್‌‌ ಓಪನ್‌ ಟೆನಿಸ್‌ನಲ್ಲಿ ಕಾಣಿಸಿಕೊಂಡ ಪ್ರಿಯಾಂಕ-ನಿಕ್ ಜೋಡಿ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪ್ರಿಯಕರ ನಿಕ್ ಜೊನಾಸ್‌ ಜೊತೆ ಯುಎಸ್‌ ಓಪನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೆರೆನಾ ವಿಲಿಯಮ್ಸ್ ಮತ್ತು ಕರೊಲಿನಾ ಪ್ಲಿಸ್ಕೋವಾ ಮಧ್ಯೆಯ ಕ್ವಾರ್ಟರ್‌ಫೈನಲ್ ಪಂದ್ಯ ವೀಕ್ಷಿಸಿದ ತಮ್ಮ ಫೋಟೋಗಳನ್ನು ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕ ಗಾಯಕ ನಿಕ್ ಜೊನಾಸ್ ನಿಶ್ಚಿತಾರ್ಥ ಕಳೆದ ತಿಂಗಳು ನೆರವೇರಿತ್ತು. ಇದಾದ ನಂತರ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಂದು (ಸೆಪ್ಟೆಂಬರ್‌ 5) ಬೆಳಗ್ಗೆ ಇಬ್ಬರೂ ಜೊತೆಯಾಗಿ ಯುಎಸ್‌ ಓಪನ್ ಟೆನಿಸ್‌‌ ಪಂದ್ಯ ವೀಕ್ಷಿಸಿದ್ದಾರೆ. ಸೆರೆನಾ ವಿಲಯಮ್ಸ್‌ ಮತ್ತು ಕರೊಲಿನಾ ಪ್ಲಿಸ್ಕೋವಾ ಮಧ್ಯೆ ನಡೆದ ಕ್ವಾರ್ಟರ್‌ಫೈನಲ್ ಪಂದ್ಯಕ್ಕೆ ತಾವು ಸಾಕ್ಷಿಯಾದ ಫೋಟೋವನ್ನು ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ : ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್ ಜೊನಾಸ್‌ ಸಂಬಂಧಕ್ಕೆ ಅಧಿಕೃತ ಮುದ್ರೆ

ಪ್ರಿಯಾಂಕಾ-ನಿಕ್ ಜೋಡಿಯೊಂದಿಗೆ ನಿಕ್‌ ಸಹೋದರ ಜೋ ಜೊನಾಸ್‌ ಮತ್ತು ಆತನ ಗರ್ಲ್‌ಫ್ರೆಂಡ್‌ ಸೋಫಿಯಾ ಟರ್ನರ್‌, ಪ್ರಿಯಾಂಕಾ ತಾಯಿ ಮಧು ಚೋಪ್ರಾ ಕೂಡ ಪಂದ್ಯ ವೀಕ್ಷಿಸಿದ್ದಾರೆ. ಟೆನಿಸ್‌ ತಾರೆ ಸೆರೆನಾ ವಿಲಯಮ್ಸ್‌ ಮತ್ತು ಪ್ರಿಯಾಂಕಾ ಚೋಪ್ರಾ ತಿಂಗಳುಗಳ ಹಿಂದೆ ಮೆಗಾನ್ ಮಾರ್ಕೆಲ್‌ ರಾಯಲ್ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಸದ್ಯ ಪ್ರಿಯಾಂಕಾ ಚೋಪ್ರಾ ‘ದಿ ಸ್ಕೈ ಈಸ್‌ ಪಿಂಕ್‌’ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆಯೇಷಾ ಚೌಧರಿ ಜೀವನ ಆಧರಿಸಿದ ಕತೆಯಿದು. ಈ ಹಿಂದೆ “ಮಾರ್ಗರೀಟಾ ವಿಥ್ ಎ ಸ್ಟ್ರಾ” ನಿರ್ದೇಶಿಸಿದ್ದ ಶೋನಾಲಿ ಬೋಸ್‌ ‘ದಿ ಸ್ಕೈ ಈಸ್ ಪಿಂಕ್’ಗೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More