ಆಸ್ಕರ್‌ಗೆ ‘ಜನಪ್ರಿಯ ಸಿನಿಮಾ’ ವಿಭಾಗ ಸೇರ್ಪಡೆ ಪ್ರಸ್ತಾವನೆ ಮುಂದೂಡಿಕೆ

ಆಸ್ಕರ್ ಪ್ರಶಸ್ತಿ ಪಟ್ಟಿಗೆ ‘ಜನಪ್ರಿಯ ಸಿನಿಮಾ’ ವಿಭಾಗ ಸೇರ್ಪಡೆಗೊಳಿಸಲು ಅಕಾಡೆಮಿ ನಿರ್ಧರಿಸಿತ್ತು. ಇದಕ್ಕೆ ತೀವ್ರ ಪ್ರತಿರೋಧ ಬಂದ ಹಿನ್ನೆಲೆಯಲ್ಲಿ ಸದ್ಯಕ್ಕೆ ಈ ಪ್ರಸ್ತಾವನೆಯನ್ನು ಮುಂದೂಡಲಾಗಿದೆ. ಅಕಾಡೆಮಿ ಅಧ್ಯಕ್ಷ ಜಾನ್ ಬೈಲಿ ಅವರ ನಿರ್ಣಯಗಳ ಬಗ್ಗೆ ಪರ-ವಿರೋಧಧ ಚರ್ಚೆ ಶುರುವಾಗಿದೆ

ಆಸ್ಕರ್ ಪ್ರಶಸ್ತಿ ಪಟ್ಟಿಗೆ ‘ಜನಪ್ರಿಯ ಸಿನಿಮಾ’ ವಿಭಾಗ ಸೇರ್ಪಡೆಗೊಳಿಸುವ ಪ್ರಸ್ತಾವನೆಯನ್ನು ಮುಂದೂಡಲು ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್‌ ಆರ್ಟ್ಸ್‌ ಅಂಡ್ ಸೈನ್ಸಸ್‌ ನಿರ್ಧರಿಸಿದೆ. 91ನೇ ಅಕಾಡೆಮಿ ಪುರಸ್ಕಾರ ಸಮಾರಂಭದಲ್ಲಿ ಈ ಹೊಸ ವಿಭಾಗ ಅಳವಡಿಸುವ ಬಗ್ಗೆ ಚರ್ಚೆಯಾಗಿತ್ತು. ಆದರೆ, ಜನಪ್ರಿಯ ಸಿನಿಮಾ ವಿಭಾಗ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕಾಡೆಮಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಆದರೆ, ಅಕಾಡೆಮಿ ಈ ಪ್ರಸ್ತಾವನೆಯನ್ನು ಕೈಬಿಡಲು ಒಪ್ಪಿಲ್ಲ. ಮುಂದಿನ ದಿನಗಳಲ್ಲಿ ಜನಪ್ರಿಯ ಸಿನಿಮಾ ವಿಭಾಗ ಸೇರ್ಪಡೆಗೊಳಿಸುವ ಇರಾದೆ ಹೊಂದಿದೆ. ಈ ಬಾರಿ ಪ್ರಸ್ತಾವನೆ ಕೈಬಿಡಲು ಮತ್ತೊಂದು ಕಾರಣವೂ ಇದೆ. ಹೊಸ ವಿಭಾಗ ಘೋಷಿಸಿದರೆ ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾಗಳ ಸ್ಪರ್ಧೆಗೆ ತೊಂದರೆಯಾಗುತ್ತದೆ ಎನ್ನುವ ತಾಂತ್ರಿಕ ಕಾರಣಗಳನ್ನು ಅಕಾಡೆಮಿ ಪರಿಗಣಿಸಿದೆ.

ಇದನ್ನೂ ಓದಿ : ಟೀಸರ್‌ | ‘ನ್ಯಾರ್ಕೋಸ್‌’ ಸರಣಿಯ 4ನೇ ಸೀಸನ್‌ ‘ನ್ಯಾರ್ಕೋಸ್‌ ಮೆಕ್ಸಿಕೋ’

ಅಕಾಡೆಮಿ ಅಧ್ಯಕ್ಷರಾಗಿ ಜಾನ್‌ ಬೈಲಿ ಮತ್ತೆ ಚುನಾಯಿತರಾದ ನಂತರ ತೆಗೆದುಕೊಂಡ ಕೆಲವು ನಿರ್ಧಾರಗಳು ತಮಾಷೆಗೆ ಕಾರಣವಾಗಿವೆ. “ಜನಪ್ರಿಯ ಸಿನಿಮಾ ವಿಭಾಗ ಸೇರ್ಪಡೆಯಿಂದ ಮುಖ್ಯವಾಹಿನಿ ಸಿನಿಮಾಗಳ ಪ್ರೇಕ್ಷಕರ ಗಮನ ಸೆಳೆಯಬಹುದು,” ಎನ್ನುವ ಅಕಾಡೆಮಿ ಸಮರ್ಥನೆಗಳಿಗೆ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಜಾನ್ ಬೈಲಿ ಅವರನ್ನು ಆಡಿಕೊಳ್ಳುವ ಅವಕಾಶ ತಪ್ಪಿಸಿಕೊಂಡಿಲ್ಲ.

ಆಸ್ಕರ್‌ಗೆ ನಾಮನಿರ್ದೇಶನಗೊಂಡ ಅಸ್ಸಾಮಿ ಸಿನಿಮಾ ‘ವಿಲೇಜ್‌ ರಾಕ್‌ಸ್ಟಾರ್ಸ್‌’
ವಿಡಿಯೋ | ‘ಮಂಟೋ’ ಸಿನಿಮಾ ಕುರಿತು ನವಾಜುದ್ದೀನ್ ಸಿದ್ದಿಕಿ ಮಾತು
ಪ್ರತಿಭಟನೆಗೆ ಮಣಿದ ನಿರ್ದೇಶಕ ಕಶ್ಯಪ್‌; ‘ಮನ್‌ಮರ್ಝಿಯಾ’ ದೃಶ್ಯಗಳಿಗೆ ಕತ್ತರಿ
Editor’s Pick More