ಟೀಸರ್‌ | ಬೇರುಗಳನ್ನು ಹುಡುಕುತ್ತ ತಾಯ್ನಾಡಿಗೆ ಮರಳುವ ‘ಮಿಸ್ಸಿಂಗ್ ಬಾಯ್’

ರಘುರಾಮ್ ನಿರ್ದೇಶನದಲ್ಲಿ ಗುರುನಂದನ್ ನಟಿಸಿರುವ ‘ಮಿಸ್ಸಿಂಗ್ ಬಾಯ್‌’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. 90ರ ದಶಕದ ನೈಜ ಘಟನೆ ಆಧರಿಸಿದ ಚಿತ್ರವಿದು. ಚಿಕ್ಕಂದಿನಲ್ಲಿ ವಿದೇಶಕ್ಕೆ ತೆರಳಿದ್ದ ಯುವಕನೊಬ್ಬ ತಾಯ್ನಾಡಿನಲ್ಲಿ ತನ್ನ ಬೇರುಗಳನ್ನು ಹುಡುಕುವ ಕಥಾನಕ ಇಲ್ಲಿದೆ

‘ಫಸ್ಟ್‌ ರ್ಯಾಂಕ್‌ ರಾಜು’ ಖ್ಯಾತಿಯ ನಟ ಗುರುನಂದನ್ ಅಭಿನಯದ ‘ಮಿಸ್ಸಿಂಗ್ ಬಾಯ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕಾಣೆಯಾದವರ ಪ್ರಕಟಣೆಯೊಂದಿಗೆ ಶುರುವಾಗುವ ಎರಡು ನಿಮಿಷಗಳ ಟೀಸರ್, 90ರ ದಶಕದ ಚಿತ್ರಣ ಕೊಡುತ್ತದೆ. ಕಾಣೆಯಾಗಿ ರಿಮ್ಯಾಂಡ್ ಹೋಮ್‌ನಲ್ಲಿ ಆಶ್ರಯ ಪಡೆದ ಅನಾಮಧೇಯ ಹುಡುಗನೊಬ್ಬನ ಕತೆಯನ್ನು ಹೊತ್ತು ಸಾಗುತ್ತದೆ.

ಟೀಸರ್‌ನ ಮೊದಲಾರ್ಧದಲ್ಲಿ, ಅನಾಥನಾಗಿ ರಿಮ್ಯಾಂಡ್ ಹೋಮ್‌ನಲ್ಲಿ ಆಶ್ರಯ ಪಡೆಯುವ ಬಾಲಕ ಕಾಣಿಸುತ್ತಾನೆ. ಹೊರದೇಶದಲ್ಲಿ ವಾಸಿಸುವ ಶ್ರೀಮಂತ ದಂಪತಿಗಳು ಬಾಲಕನನ್ನು ದತ್ತು ಪಡೆದು ತಮ್ಮೊಡನೆ ಕರೆದೊಯ್ಯುತ್ತಾರೆ. ಹಲವು ವರ್ಷಗಳ ನಂತರ ತಾನು ಕಳೆದುಕೊಂಡ ತನ್ನ ಹೆತ್ತ ತಾಯಿಯನ್ನು ಹುಡುಕಲು ತಾಯ್ನಾಡಿಗೆ ಮರಳುವ ಯುವಕ ಪಡುವ ಯಾತನೆಗಳು, ಆತನಿಗೆ ಸಹಕರಿಸುವ ಪೊಲೀಸ್‌ ಸಿಬ್ಬಂದಿ... ಹೀಗೆ ಟೀಸರ್ ಕತೆಯ ಬಗೆಗೆ ಹಲವು ಕುತೂಹಲಗಳನ್ನು ಮೂಡಿಸುತ್ತದೆ.

ಇದನ್ನೂ ಓದಿ : ಟ್ರೈಲರ್‌ | ‘ನೋಟಾ’ದಲ್ಲಿ ರಾಜಕಾರಣಿಯಾದ ವಿಜಯ್‌ ದೇವರಕೊಂಡ

ಈ ಪ್ರಕರಣದಲ್ಲಿ ನಾಯಕನಿಗೆ ಸಹಕಾರಿಯಾಗಿ ನಿಲ್ಲುವ ಪೊಲೀಸ್ ಅಧಿಕಾರಿಯಾಗಿ ನಟ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಸುಮಿತ್ರಾ ಅಮ್ಮನ ಪಾತ್ರದಲ್ಲಿದ್ದು, ಮಲಯಾಳಂ ನಟಿ ಅರ್ಚನಾ ಗುರುನಂದನ್‌ಗೆ ಜೋಡಿಯಾಗಿದ್ದಾರೆ. ‘ಮಿಸ್ಸಿಂಗ್ ಬಾಯ್’ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಯ ತಯಾರಿಯಲ್ಲಿದೆ. ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಗಳ ಜನಪರ ಕಾಳಜಿ, ಬದ್ಧತೆ, ಪ್ರಾಮಾಣಿಕತೆಯ ಚಿತ್ರಣವಿದೆ ಎನ್ನುತ್ತಾರೆ ನಿರ್ದೇಶಕ ರಘುರಾಮ್‌.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More