ಟೀಸರ್‌ | ‘ನ್ಯಾರ್ಕೋಸ್‌’ ಸರಣಿಯ 4ನೇ ಸೀಸನ್‌ ‘ನ್ಯಾರ್ಕೋಸ್‌ ಮೆಕ್ಸಿಕೋ’

‘ನ್ಯಾರ್ಕೋಸ್‌’ ಸರಣಿಯ ಹೊಸ ಸೀಸನ್‌ ‘ನ್ಯಾರ್ಕೋಸ್‌ ಮೆಕ್ಸಿಕೋ’ ಟೀಸರ್ ಬಿಡುಗಡೆಯಾಗಿದೆ. ಡ್ರಗ್‌ ಟ್ರಾಫಿಕಿಂಗ್‌ ಕುರಿತ ಈ ಕತೆಯಲ್ಲಿ, ಕಿಂಗ್‌ಪಿನ್‌ ಫೆಲಿಕ್ಸ್‌ ಗೆಲ್ಲಾರ್ಡೋ ಮತ್ತು ಪೊಲೀಸ್ ಅಧಿಕಾರಿ ಕಿಕಿ ಕೆಮರಾನ್ ನಡುವಿನ ಕಾದಾಟ ಇಲ್ಲಿದೆ. ನ.16ಕ್ಕೆ ‘ನಾರ್ಕೋಸ್‌ ಮೆಕ್ಸಿಕೋ’ ಸ್ಟ್ರೀಮ್ ಆಗಲಿದೆ

ನೆಟ್‌ಫ್ಲಿಕ್ಸ್‌ನ ಜನಪ್ರಿಯ ‘ನ್ಯಾರ್ಕೋಸ್‌’ ಸರಣಿಯಲ್ಲಿ ಈ ಹಿಂದೆ ‘ಪಾಬ್ಲೋ ಎಸ್ಕೋಬಾರ್’ ಮತ್ತು ‘ದಿ ಕಾಲಿ ಕಾರ್ಟೆಲ್‌ ಇನ್ ಕೊಲಂಬಿಯಾ’ ಸ್ಟ್ರೀಮ್‌ ಆಗಿ ಯಶಸ್ವಿಯಾಗಿದ್ದವು. ಈಗ ನಾಲ್ಕನೇ ಸೀಸನ್‌ನಲ್ಲಿ ‘ನ್ಯಾರ್ಕೋಸ್‌ ಮೆಕ್ಸಿಕೋ’ ಆರಂಭವಾಗಲಿದೆ. ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ಫೆಲಿಕ್ಸ್‌ ಗೆಲ್ಲಾರ್ಡೋ (ಡಿಗೋ ಲ್ಯುನಾ) ಪರಿಚಯವಿದೆ. 80ರ ದಶಕದ ಕಾಲಘಟ್ಟ. ತನ್ನದೇ ಡ್ರಗ್ ಸಾಮ್ರಾಜ್ಯ ಸ್ಥಾಪಿಸಲು ಫೆಲಿಕ್ಸ್‌ ಡ್ರಗ್‌ ಟ್ರಾಫಿಕ್ಕರ್‌ಗಳನ್ನು ಒಗ್ಗೂಡಿಸುತ್ತಾನೆ. ಈ ಹಾದಿಯಲ್ಲಿನ ಅವನಿಗೆದುರಾಗುವ ಕಾನೂನಿನ ತೊಡಕು, ಹೋರಾಟವೇ ಈ ಬಾರಿಯ ಕಥಾವಸ್ತು.

ಇದನ್ನೂ ಓದಿ : ಟೀಸರ್‌ | ಬೇರುಗಳನ್ನು ಹುಡುಕುತ್ತ ತಾಯ್ನಾಡಿಗೆ ಮರಳುವ ‘ಮಿಸ್ಸಿಂಗ್ ಬಾಯ್’

ಡ್ರಗ್ ಹಾವಳಿ ಹತ್ತಿಕ್ಕಲು ವಿಶೇ‍ಷ ಪೊಲೀಸ್ ಅಧಿಕಾರಿ ಕಿಕಿ ಕೆಮೆರಾನ್‌ನನ್ನು (ಮೈಖೇಲ್ ಪೆನಾ)‌ ಈ ಪ್ರದೇಶಕ್ಕೆ ಪೋಸ್ಟ್‌ ಮಾಡಲಾಗುತ್ತದೆ. ಕ್ಯಾಲಿಫೋರ್ನಿಯಾದಿಂದ ಪತ್ನಿ, ಪುಟ್ಟ ಮಗುವಿನೊಂದಿಗೆ ಬರುವ ಕಿಕಿ, ಡ್ರಗ್‌ ಮಾಫಿಯಾದ ತೀವ್ರ ಪ್ರತಿರೋಧ ಎದುರಿಸುತ್ತಾನೆ. ಗೆಲ್ಲಾರ್ಡೋನ ಚಾಣಾಕ್ಷತನಕ್ಕೆ ಕಿಕಿ ತನ್ನದೇ ಆದ ಜಾಲ ರಚಿಸುತ್ತಾನೆ. ಮುಂದೆ ಇಬ್ಬರ ಬದುಕಿನಲ್ಲೂ ವಿಶಿಷ್ಟ ತಿರುವುಗಳು ಎದುರಾಗುತ್ತವೆ. ಈ ಯುದ್ಧದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದನ್ನು ಟೀಸರ್ ರಿವೀಲ್ ಮಾಡುವುದಿಲ್ಲ. ನವೆಂಬರ್‌ 16ಕ್ಕೆ ‘ನಾರ್ಕೋಸ್‌ ಮೆಕ್ಸಿಕೋ’ ಸ್ಟ್ರೀಮ್ ಆಗಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More